ಬೆಂಗಳೂರು : ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಭಾರತ ತಂಡ ತವರಿನಲ್ಲಿ ತಮ್ಮ ಆಧಿಪತ್ಯವನ್ನು ಮುಂದುವರಿಸಿದೆ. 2013ರ ನಂತರ ಆಡಿರುವ ಎಲ್ಲಾ ಟೆಸ್ಟ್ ಸರಣಿಗಳು ಟೀಂ ಇಂಡಿಯಾ ಪಾಲಾಗಿವೆ.
2012-13ರಲ್ಲಿ ಇಂಗ್ಲೆಂಡ್ ವಿರುದ್ಧ 1-2ರಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿತ್ತು. ಆದರೆ, 2016-17ರ ಪ್ರವಾಸದಲ್ಲಿ 4-0ಯಲ್ಲಿ ಮಣಿಸುವ ಮೂಲಕ ಭಾರತ ಸೇಡು ತೀರಿಸಿಕೊಂಡಿತ್ತು. ಆದರೆ, 2013ರಿಂದ 2022ರ ಶ್ರೀಲಂಕಾ ಸರಣಿಯವರೆಗೆ ಸತತ 15 ಟೆಸ್ಟ್ ಸರಣಿಯನ್ನು ಗೆದ್ದು ಪ್ರಾಬಲ್ಯ ಸಾಧಿಸಿದೆ.
2013ರಲ್ಲಿ ಆಸ್ಟ್ರೇಲಿಯ ತಂಡವನ್ನು 4-0ಯಲ್ಲಿ ಮಣಿಸುವ ಮೂಲಕ ಭಾರತ ತಂಡ ತವರಿನಲ್ಲಿ ಸರಣಿ ಗೆಲುವಿನ ಅಭಿಯಾನ ಆರಂಭಿಸಿತ್ತು. ಇದೀಗ 9 ವರ್ಷಗಳ ಅವಧಿಯಲ್ಲಿ ಪಾಕಿಸ್ತಾನವನ್ನು ಹೊರತುಪಡಿಸಿ (ಪಾಕ್ ವಿರುದ್ಧ ಆಡಿಲ್ಲ) 8 ದೇಶಗಳ ವಿರುದ್ಧ ಭಾರತ ಸತತ 15 ಟೆಸ್ಟ್ ಸರಣಿಗಳನ್ನು ಗೆದ್ದ ದಾಖಲೆಗೆ ಪಾತ್ರವಾಗಿದೆ.
ಇದನ್ನೂ ಓದಿ:ಅಯ್ಯರ್ ಉತ್ತಮವಾಗಿ ಆಡಿದ್ದಾರೆ, ಆದ್ರೆ ರಹಾನೆ-ಪೂಜಾರ ಸ್ಥಾನ ತುಂಬಲು ಇನ್ನೂ ಶ್ರಮಿಸಬೇಕು: ರೋಹಿತ್
ಈಗಾಗಲೇ ತವರಿನಲ್ಲಿ ಹೆಚ್ಚು ಟೆಸ್ಟ್ ಸರಣಿಯನ್ನು ಗೆದ್ದಿರುವ ವಿಶ್ವದಾಖಲೆಯನ್ನು ಹೊಂದಿರುವ ಭಾರತ ವರ್ಷದಿಂದ ವರ್ಷಕ್ಕೆ ತನ್ನನ್ನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತಿದೆ. ಭಾರತವನ್ನು ಹೊರತುಪಡಿಸಿದರೆ ತವರಿನಲ್ಲಿ ಸತತ ಟೆಸ್ಟ್ ಸರಣಿಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿದೆ. ಆಸ್ಟ್ರೇಲಿಯಾ 2 ಬಾರಿ (1994ರಿಂದ 2001, 2004 ರಿಂದ 2008) ಸತತ 10 ಟೆಸ್ಟ್ ಸರಣಿಗಳನ್ನು ಗೆದ್ದ ದಾಖಲೆ ಹೊಂದಿದೆ.
2013ರಿಂದ ಭಾರತ ಗೆದ್ದ ಟೆಸ್ಟ್ ಸರಣಿ ಪಟ್ಟಿ
- ಆಸ್ಟ್ರೇಲಿಯಾ ವಿರುದ್ಧ 4-0
- ವೆಸ್ಟ್ ಇಡೀಸ್ ವಿರುದ್ಧ 2-0
- ದಕ್ಷಿಣ ಆಫ್ರಿಕಾ ವಿರುದ್ಧ 3-0
- ನ್ಯೂಜಿಲ್ಯಾಂಡ್ ವಿರುದ್ಧ 3-0 ಜಯ
- ಇಂಗ್ಲೆಂಡ್ ವಿರುದ್ಧ 4-0(5 ಪಂದ್ಯ)
- ಬಾಂಗ್ಲಾದೇಶದ ವಿರುದ್ಧ 1-0
- ಆಸ್ಟ್ರೇಲಿಯಾ ವಿರುದ್ಧ 2-1(4 ಪಂದ್ಯ)
- ಶ್ರೀಲಂಕಾ ವಿರುದ್ಧ 1-0(3)
- ಅಫ್ಘಾನಿಸ್ತಾನದ ವಿರುದ್ಧ 1-0
- ವೆಸ್ಟ್ ಇಂಡೀಸ್ ವಿರುದ್ಧ 2-0
- ದಕ್ಷಿಣ ಆಫ್ರಿಕಾ ವಿರುದ್ಧ 3-0
- ಬಾಂಗ್ಲಾದೇಶದ ವಿರುದ್ಧ 2-0
- ಇಂಗ್ಲೆಂಡ್ ವಿರುದ್ಧ 3-1(4 ಪಂದ್ಯ)
- ನ್ಯೂಜಿಲ್ಯಾಂಡ್ ವಿರುದ್ಧ 1-0(2 ಪಂದ್ಯ)
- ಶ್ರೀಲಂಕಾ ವಿರುದ್ಧ 2-0