ಇಂದೋರ್ : ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಗೆ ತಲುಪುವ ಗುರಿಯೊಂದಿಗೆ ಕಣಕ್ಕಿಳಿದ ಭಾರತ ಮೂರನೇ ಟೆಸ್ಟ್ ಪಂದ್ಯದಲ್ಲಿ ಪತನದ ಹಾದಿ ಹಿಡಿದಿದೆ. ಮೊದಲ ದಿನದಾಟದ ಭೋಜನ ವಿರಾಮದ ವೇಳೆಗೆ 7 ವಿಕೆಟ್ ಕಳೆದು ಕೊಂಡಿತ್ತು. ನಂತರ ಅರ್ಧಗಂಟೆಯಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ ಭಾರತ 109 ರನ್ ಗಳಿಸಿತು. ಬೌನ್ಸಿ ಪಿಚ್ನಲ್ಲಿ ಕಮಾಲ್ ಮಾಡಿದ ಆಸೀಸ್ ಸ್ಪಿನ್ನರ್ಗಳು ಭಾರತವನ್ನು ಕಾಡಿದರು. ಮ್ಯಾಥ್ಯೂ ಕುಹ್ನೆಮನ್ 5 ವಿಕೆಟ್ ಗಳಿಸಿದರು.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ - ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಬ್ಯಾಟಿಂಗ್ನಲ್ಲಿ ವಿರಾಟ್ 22 ಮತ್ತು ಗಿಲ್ 21 ರನ್ ಗಳಿಸಿದ್ದು ಬಿಟ್ಟರೆ ಮತ್ತಾರು 20ರ ಗಡಿ ದಾಟಿಲ್ಲ. 5ರನ್ ಒಳಗೆ 5 ವಿಕೆಟ್ಗಳನ್ನು ಭಾರತೀಯರು ಒಪ್ಪಿಸಿದ್ದಾರೆ.
-
A brilliant bowling performance from Australia 👏#WTC23 | #INDvAUS | 📝: https://t.co/FFaPxt9fIY pic.twitter.com/M8pfmScWiv
— ICC (@ICC) March 1, 2023 " class="align-text-top noRightClick twitterSection" data="
">A brilliant bowling performance from Australia 👏#WTC23 | #INDvAUS | 📝: https://t.co/FFaPxt9fIY pic.twitter.com/M8pfmScWiv
— ICC (@ICC) March 1, 2023A brilliant bowling performance from Australia 👏#WTC23 | #INDvAUS | 📝: https://t.co/FFaPxt9fIY pic.twitter.com/M8pfmScWiv
— ICC (@ICC) March 1, 2023
ಮ್ಯಾಥ್ಯೂ ಕುಹ್ನೆಮನ್ 5, ನಾಥನ್ ಲಿಯಾನ್ 3 ಮತ್ತು ಟಾಡ್ ಮರ್ಫಿ 1 ವಿಕೆಟ್ ಪಡೆದರು. ಮೈಕೆಲ್ ಕಾಸ್ಪ್ರೊವಿಚ್ ಆಸಿಸ್ ತಂಡ ಮೂವರು ಸ್ಪಿನ್ನರ್ಗಳೊಂದಿಗೆ ಆಡುವ ಅಗತ್ಯ ಇಲ್ಲ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಆದರೆ ಆಸಿಸ್ ಸ್ಪಿನ್ನರ್ಗಳು ಈ ಅಭಿಪ್ರಾಯವನ್ನು ಅಡಿ ಮೇಲೆ ಮಾಡಿದ್ದಾರೆ. ಬೌನ್ಸಿ ಪಿಚ್ನಲ್ಲೂ ಕಮಾಲ್ ಮಾಡಿದ್ದು 9 ವಿಕೆಟ್ಗಳನ್ನು ಸ್ಪಿನ್ನರ್ಗಳೇ ಕಬಳಿಸಿದ್ದಾರೆ.
ಮೊದಲ ಟೆಸ್ಟ್ನಲ್ಲಿ ಶತಕ ಗಳಿಸಿದ್ದ ನಾಯಕ ರೋಹಿತ್ ಶರ್ಮಾ 12 ರನ್ಗೆ ವಿಕೆಟ್ ಒಪ್ಪಿಸಿದರು. ಫಾರ್ಮ್ ಕೊರತೆಯಿಂದ ಹೊರಗುಳಿದಿರುವ ಕೆ. ಎಲ್. ರಾಹುಲ್ ಸ್ಥಾನಕ್ಕೆ ಬದಲಿಯಾಗಿ ಬಂದ ಶುಭಮನ್ ಗಿಲ್ ವೇಗವಾಗಿ ರನ್ ಗಳಿಸಿದರಾದರೂ 21 ರನ್ಗೆ (18 ಎಸೆತದಲ್ಲಿ) ಪೆವಿಲಿಯನ್ ದಾರಿ ಹಿಡಿದರು. 101ನೇ ಪಂದ್ಯ ಆಡುತ್ತಿರುವ ಚೇತೇಶ್ವರ ಪೂಜಾರ ಒಂದು ರನ್ಗೆ ಔಟ್ ಆದರು.
ಕಳೆದೆರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ಜಡೇಜ (4) ಬಡ್ತಿ ಪಡೆದರಾದರೂ ಲಿಯಾನ್ ಬೌಲಿಂಗ್ನಲ್ಲಿ ಎಡವಿದರು. ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ವಿರಾಟ್ ಕೊಹ್ಲಿ ತವರು ನೆಲದ ಅಂತರಾಷ್ಟ್ರೀಯ 200ನೇ ಪಂದ್ಯದಲ್ಲಿ ಎದುರಾಳಿಗಳ ಮೇಲೆ ಸವಾರಿ ಮಾಡುವಂತೆ ಕಂಡರೂ 22 ರನ್ಗೆ ಪೆವಿಲಿಯನ್ ಹಾದಿ ಹಿಡಿದರು. ಡೆಬ್ಯೂ ಸಿರೀಸ್ನಲ್ಲಿ ಕೀಪರ್ ಶ್ರೀಕರ್ ಭರತ್(17) ಮತ್ತೆ ವೈಫಲ್ಯ ಕಂಡರು. ಅಶ್ವಿನ್ 3ಕ್ಕೆ ಔಟ್ ಆದರೆ, ಉಮೇಶ್ ಯಾದವ್ ಎರಡು ಸಿಕ್ಸ್ ಮತ್ತು 1 ಬೌಂಡರಿಯಿಂದ 17 ರನ್ ಗಳಿಸಿದರು. ಸಿರಾಜ್ ಶೂನ್ಯ ಸುತ್ತಿದರು ಭಾರತ 109 ಮೊದಲ ಇನ್ನಿಂಗ್ಸ್ ಮುಗಿಸಿದೆ.
-
🚨 Team News 🚨
— BCCI (@BCCI) March 1, 2023 " class="align-text-top noRightClick twitterSection" data="
2️⃣ changes for #TeamIndia as Shubman Gill & Umesh Yadav are named in the team. #INDvAUS | @mastercardindia
Follow the match ▶️ https://t.co/xymbrIdggs
Here's our Playing XI 🔽 pic.twitter.com/8tAOuzn1Xp
">🚨 Team News 🚨
— BCCI (@BCCI) March 1, 2023
2️⃣ changes for #TeamIndia as Shubman Gill & Umesh Yadav are named in the team. #INDvAUS | @mastercardindia
Follow the match ▶️ https://t.co/xymbrIdggs
Here's our Playing XI 🔽 pic.twitter.com/8tAOuzn1Xp🚨 Team News 🚨
— BCCI (@BCCI) March 1, 2023
2️⃣ changes for #TeamIndia as Shubman Gill & Umesh Yadav are named in the team. #INDvAUS | @mastercardindia
Follow the match ▶️ https://t.co/xymbrIdggs
Here's our Playing XI 🔽 pic.twitter.com/8tAOuzn1Xp
ಈಗಾಗಲೇ ಸರಣಿಯಲ್ಲಿ 2-0 ಮುನ್ನಡೆಯಲ್ಲಿರುವ ಟೀಂ ಇಂಡಿಯಾ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಭಾರತ ತಂಡದಲ್ಲಿ ಆರಂಭಿಕ ರಾಹುಲ್ ಬದಲಿಗೆ ಯುವ ಆಟಗಾರ ಶುಭಮನ್ ಗಿಲ್ ಹಾಗೂ ಮೊಹಮದ್ ಶಮಿ ಸ್ಥಾನದಲ್ಲಿ ಉಮೇಶ್ ಯಾದವ್ ಆಡಲಿದ್ದಾರೆ. ವೇಗಿ ಮೊಹಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನುಳಿದಂತೆ ಕಳೆದೆರಡು ಪಂದ್ಯಗಳನ್ನಾಡಿದ ಆಟಗಾರರನ್ನೇ ಮುಂದುವರೆಸಲಾಗಿದೆ. ಇನ್ನೊಂದೆಡೆ ಗಾಯಾಳುಗಳ ಸಮಸ್ಯೆಗೆ ಸಿಲುಕಿರುವ ಕಾಂಗರೂ ಪಡೆಯನ್ನು ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟಿವ್ ಸ್ಮಿತ್ ಮುನ್ನಡೆಸುತ್ತಿದ್ದಾರೆ. ತಮ್ಮ ತಾಯಿಯ ಆನಾರೋಗ್ಯದ ಹಿನ್ನೆಲೆಯಲ್ಲಿ ತವರಿಗೆ ತೆರಳಿದ್ದ ಕಮಿನ್ಸ್ ಇನ್ನೂ ಸಹ ತಂಡವನ್ನು ಸೇರಿಕೊಂಡಿಲ್ಲ.
ಜೊತೆಗೆ, ಆರಂಭಿಕ ಆಟಗಾರ ಡೇವಿಡ್ ವಾರ್ನರ್, ವೇಗದ ಬೌಲರ್ ಜೋಶ್ ಹೇಜಲ್ವುಡ್ ಗಾಯದಿಂದಾಗಿ ಆಸ್ಟ್ರೇಲಿಯಾಗೆ ಮರಳಿದ್ದಾರೆ. ಇವರೊಟ್ಟಿಗೆ ಸ್ಪಿನ್ ಬೌಲರ್ ಆಸ್ಟನ್ ಅಗರ್ ಕೂಡ ವಾಪಸ್ ತೆರಳಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಆಸೀಸ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಹಾಗೂ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಆಡುವ 11ರ ಬಳಗಕ್ಕೆ ಮರಳಿದ್ದಾರೆ. ಟ್ರಾವಿಸ್ ಹೆಡ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.
ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸೋತು ಈಗಾಗಲೇ ಸರಣಿ ಕೈಬಿಟ್ಟಿರುವ ಆಸೀಸ್ ಮೂರನೇ ಪಂದ್ಯದಲ್ಲಾದರೂ ಪುಟಿದೇಳಲಿದೆಯಾ ಎಂಬ ನಿರೀಕ್ಷೆ ಎಲ್ಲರಲ್ಲಿದೆ. ಇತ್ತ ಈಗಾಗಲೇ 2-0 ಅಂತರದ ಮುನ್ನಡೆಯೊಂದಿಗೆ ಬಾರ್ಡರ್ - ಗವಾಸ್ಕರ್ ಟ್ರೋಫಿಯನ್ನು ಮತ್ತೊಮ್ಮೆ ತನ್ನಲ್ಲೇ ಉಳಿಸಿಕೊಂಡಿರುವ ಟೀಂ ಇಂಡಿಯಾ ತನ್ನ ಗೆಲುವಿನ ಓಟ ಮುಂದುವರೆಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಲಗ್ಗೆ ಇಡುವತ್ತ ದೃಷ್ಟಿ ನೆಟ್ಟಿದೆ.
ಎರಡೂ ತಂಡಗಳ 11ರ ಬಳಗ: ಭಾರತ : ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿ. ಕೀ), ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಆಸ್ಟ್ರೇಲಿಯಾ : ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕೋಬ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿ. ಕೀ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್
ಇದನ್ನೂ ಓದಿ: ಭಾರತ ಮಹಿಳಾ ತಂಡಕ್ಕೆ ಸ್ನೂಕರ್ ವಿಶ್ವಕಪ್ ಪ್ರಶಸ್ತಿ