ETV Bharat / sports

ಭಾರತ- ಪಾಕಿಸ್ತಾನ ಮಧ್ಯೆ ಇಂದು ಮತ್ತೊಂದು ಸೂಪರ್ ಸಂಡೇ ಮ್ಯಾಚ್​ - ETV bharat kannada news

ಮತ್ತೊಂದು ಸೂಪರ್​ ಸಂಡೇ ಮ್ಯಾಚ್​ಗೆ ದುಬೈ ಕ್ರೀಡಾಂಗಣ ವೇದಿಕೆಯಾಗಲಿದೆ. ಭಾರತ ಪಾಕಿಸ್ತಾನ ಮಧ್ಯೆ ಸೂಪರ್​ 4 ಹಂತದ 2ನೇ ಪಂದ್ಯ ಇಂದು ಸಂಜೆ 7.30ಕ್ಕೆ ಆರಂಭವಾಗಲಿದೆ.

india-face-pakistan
ಸೂಪರ್ ಸಂಡೇ ಮ್ಯಾಚ್​
author img

By

Published : Sep 4, 2022, 4:11 PM IST

ದುಬೈ: ಏಷ್ಯಾ ಕಪ್​ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ಇಂದು ಸೆಣಸಾಡಲಿವೆ. ನಾಕೌಟ್​ ಪಂದ್ಯದಲ್ಲಿ ಭಾರತ ವಿರುದ್ಧ ಸೋತಿದ್ದ ಪಾಕಿಸ್ತಾನ ಸೂಪರ್​ 4 ಹಂತದಲ್ಲಿ ಗೆಲ್ಲುವ ಪ್ಲಾನ್​ ಮಾಡಿದೆ. ಕಳೆದ ಭಾನುವಾರ ಕ್ರಿಕೆಟ್​ ರಸದೌತಣ ಉಂಡಿದ್ದ ಅಭಿಮಾನಿಗಳು ಮತ್ತೊಂದು "ಸೂಪರ್​ ಸಂಡೇ" ಸವಿಯಲಿದ್ದಾರೆ.

ಉಭಯ ತಂಡಗಳು ಸೂಪರ್ 4 ಹಂತದಲ್ಲಿ ಗೆಲುವಿನ ಆರಂಭ ಪಡೆಯುವ ಹುಮ್ಮಸ್ಸಿನಲ್ಲಿವೆ. ಭಾರತ ವಿರುದ್ಧ ಸೋತಿದ್ದ ಪಾಕಿಸ್ತಾನ ಹಾಂಗ್​ಕಾಂಗ್​ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಸೂಪರ್​ 4 ಹಂತಕ್ಕೆ ಬಂದಿದೆ. ಭಾರತ ವಿರುದ್ಧ 150 ರನ್​ ಮಾಡಿದ್ದ ಹಾಂಗ್​ಕಾಂಗ್​ ಪಾಕ್​ ಬೌಲರ್​​ಗಳ ಕರಾರುವಾಕ್​ ದಾಳಿಗೆ ಕೇವಲ 38 ರನ್​​ಗಳಿಗೆ ಪತನ ಕಂಡಿತ್ತು. ಇದು ಪಾಕ್​ ಆಟಗಾರರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

ಮೊದಲ ಪಂದ್ಯದ ಸೋಲಿಗೆ ಪ್ರತೀಕಾರ ಮತ್ತು ಹಾಂಗ್​ಕಾಂಗ್​ ವಿರುದ್ಧ ಭರ್ಜರಿ ಗೆಲುವನ್ನು ಮುಂದುವರಿಸಲು ಪಾಕ್​ ಯೋಜನೆ ರೂಪಿಸಿದೆ. ನಾಕೌಟ್​ ಹಂತದಲ್ಲಿ 2 ಪಂದ್ಯಗಳನ್ನು ಗೆದ್ದಿರುವ ಭಾರತ ಈ ಪಂದ್ಯದಲ್ಲೂ ಪಾಕಿಸ್ತಾನವನ್ನು ಕೆಡವಲು ಸಜ್ಜಾಗಿದೆ.

ಭಾರತ ಪಾಕ್​ ತಂಡಗಳಿಗೆ ಗಾಯದ ಬರೆ: ಎರಡೂ ತಂಡಗಳಿಗೆ ಗಾಯದ ಸಮಸ್ಯೆ ತಲೆದೋರಿದೆ. ಮೊಣಕಾಲಿನ ಗಾಯದಿಂದ ಭಾರತದ ರವೀಂದ್ರ ಜಡೇಜಾ ಏಷ್ಯಾಕಪ್‌ನಿಂದಲೇ ಹೊರಗುಳಿದಿದ್ದರೆ, ಪಾಕಿಸ್ತಾನದ ವೇಗಿ ಶಹನವಾಜ್ ದಹಾನಿ ಅವರು ಮೊಣಕೈ ಗಾಯದಿಂದ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಜಡೇಜಾ ಬದಲಿಗೆ ಅಕ್ಷರ್​ ಪಟೇಲ್​ ಸ್ಥಾನ ಪಡೆದಿದ್ದು, ಆಡುವ ಹನ್ನೊಂದರಲ್ಲಿಯೂ ಅವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ. ಪಾಕ್​ ವಿರುದ್ಧದ ಮೊದಲ ಪಂದ್ಯ ಮಿಸ್​ ಮಾಡಿಕೊಂಡಿದ್ದ ರಿಷಬ್​ ಪಂತ್​ ಈ ಪಂದ್ಯದಲ್ಲಿ ಆಡಲಿದ್ದಾರೆ. ದಿನೇಶ್​ ಕಾರ್ತಿಕ್​ ಬದಲಿಗೆ ದೀಪಕ್ ಹೂಡಾಗೆ ಚಾನ್ಸ್​ ಸಿಗುವ ಸಾಧ್ಯತೆಯೂ ಇದೆ.

ಅಗ್ರ ಕ್ರಮಾಂಕದಲ್ಲಿ ಕೆ.ಎಲ್​ ರಾಹುಲ್​, ನಾಯಕ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಮಿಂಚಬೇಕಿದೆ. ಹಾಂಗ್​ಕಾಂಗ್​ ವಿರುದ್ಧ ಅರ್ಧಶತಕ ಸಿಡಿಸಿದ್ದ ಕೊಹ್ಲಿ ಈ ಪಂದ್ಯದಲ್ಲೂ ರನ್​ ಗಳಿಸುವ ನಿರೀಕ್ಷೆ ಹೊಂದಿದ್ದಾರೆ. ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾ ಮತ್ತೊಂದು ಮಿಂಚಿನ ಪ್ರದರ್ಶನಕ್ಕೆ ರೆಡಿಯಾಗಿದ್ದಾರೆ.

ಬಾಬರ್​ ಆಜಂ ಲಯಕ್ಕೆ ಬರ್ತಾರಾ: ಪಾಕಿಸ್ತಾನದ ನಾಯಕ ಬಾಬರ್​ ಆಜಂ ಟೂರ್ನಿಯ ಎರಡೂ ಪಂದ್ಯಗಳಲ್ಲಿ ವಿಫಲರಾಗಿರುವುದು ತಂಡಕ್ಕೆ ತಲೆನೋವಾಗಿದೆ. ಮಹಮ್ಮದ್ ರಿಜ್ವಾನ್, ಫಖರ್ ಜಮಾನ್ ಮತ್ತು ಖುಸ್ದಿಲ್ ಷಾ ಉತ್ತಮ ಪ್ರದರ್ಶನ ನೀಡುತ್ತಿರುವುದು ತಂಡದ ಪ್ಲಸ್​ ಪಾಯಿಂಟ್​ ಆಗಿದೆ.

ತಂಡದ ಸ್ಟಾರ್​ ಬೌಲರ್​ ಶಾಹೀನ್​ ಆಫ್ರಿದಿ ಬದಲಾಗಿ ಸ್ಥಾನ ಪಡೆದಿರುವ ಯುವ ವೇಗಿ ನಸೀಮ್ ಶಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಸ್ಪಿನ್ನರ್​ಗಳಾದ ಮೊಹಮ್ಮದ್ ನವಾಜ್, ಶಾದಾಬ್ ಖಾನ್ ಇನ್ನೊಂದು ತುದಿಯಲ್ಲಿ ವಿಕೆಟ್​ ಉರುಳಿಸುತ್ತಿದ್ದಾರೆ. ಸೂಪರ್​ 4 ಹಂತದ 2ನೇ ಪಂದ್ಯ ಅಭಿಮಾನಗಳಿಗೆ "ಸೂಪರ್​ ಸಂಡೇ" ಆಗಲಿದೆಯಾ ಎಂಬ ನಿರೀಕ್ಷೆ ಇದೆ.

ಪಂದ್ಯದ ಸಮಯ: ರಾತ್ರಿ 7.30 ಕ್ಕೆ, ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ.

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಆರ್ ಅಶ್ವಿನ್, ಯಜುವೇಂದ್ರ ಚಹಲ್​, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್​ ಸಿಂಗ್, ಅವೇಶ್ ಖಾನ್.

ಪಾಕಿಸ್ತಾನ: ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಹಸನ್ ಅಲಿ, ನಸೀಮ್ ಶಾ, ಶಹನವಾಜ್ ದಹಾನಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸ್ನಾ.

ಓದಿ: ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ ಬಾಂಗ್ಲಾದೇಶದ ಮುಶ್ಫಿಕರ್ ರಹೀಮ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.