ಭಾರತ ವನಿತೆಯೆ ಕ್ರಿಕೆಟ್ ತಂಡ ಇಂಗ್ಲೆಂಡ್ ವನಿತೆಯರನ್ನು ಅವರದ್ದೇ ನೆಲದಲ್ಲಿ ಸೋಲಿಸಿ ಏಕದಿನ ಸರಣಿಯನ್ನು 3-0 ಯಿಂದ ವೈಟ್ವಾಷ್ ಮಾಡಿ ಐತಿಹಾಸಿಕ ದಾಖಲೆ ಮಾಡಿದೆ. ಮೂರನೇ ಏಕದಿನ ಪಂದ್ಯದಲ್ಲಿ ಕೊನೆಯಲ್ಲಿ ಭಾರತದ ದೀಪ್ತಿ ಶರ್ಮಾ ಅವರು ಇಂಗ್ಲೆಂಡ್ ಆಟಗಾರ್ತಿಯನ್ನು ಮಂಕಡಿಂಗ್ ಮೂಲಕ ಔಟ್ ಮಾಡಿರುವುದು ಭಾರೀ ಚರ್ಚೆ ನಡೆದಿರುವ ಮಧ್ಯೆಯೇ ತಾನಿಯಾ ಭಾಟಿಯಾ ಅವರ ಹೋಟೆಲ್ ಕೊಠಡಿಯಿಂದ ಬ್ಯಾಗ್ ಕದ್ದಿರುವ ಘಟನೆ ನಡೆದಿದೆ.
-
1/2 Shocked and disappointed at Marriot Hotel London Maida Vale management; someone walked into my personal room and stole my bag with cash, cards, watches and jewellery during my recent stay as a part of Indian Women's Cricket team. @MarriottBonvoy @Marriott. So unsafe.
— Taniyaa Sapna Bhatia (@IamTaniyaBhatia) September 26, 2022 " class="align-text-top noRightClick twitterSection" data="
">1/2 Shocked and disappointed at Marriot Hotel London Maida Vale management; someone walked into my personal room and stole my bag with cash, cards, watches and jewellery during my recent stay as a part of Indian Women's Cricket team. @MarriottBonvoy @Marriott. So unsafe.
— Taniyaa Sapna Bhatia (@IamTaniyaBhatia) September 26, 20221/2 Shocked and disappointed at Marriot Hotel London Maida Vale management; someone walked into my personal room and stole my bag with cash, cards, watches and jewellery during my recent stay as a part of Indian Women's Cricket team. @MarriottBonvoy @Marriott. So unsafe.
— Taniyaa Sapna Bhatia (@IamTaniyaBhatia) September 26, 2022
ಈ ಬಗ್ಗೆ ಟ್ವೀಟ್ ಮಾಡಿರುವ ತಾನಿಯಾ ಭಾಟಿಯಾ, "ನಾನು ಉಳಿದುಕೊಂಡಿದ್ದ ಲಂಡನ್ನ ಮ್ಯಾರಿಯಟ್ ಹೋಟೆಲ್ನ ಕೊಠಡಿಗೆ ಯಾರೋ ನುಗ್ಗಿ ನಗದು ಹಣ, ಕಾರ್ಡ್‌ಗಳು, ಕೈಗಡಿಯಾರಗಳು ಮತ್ತು ಆಭರಣಗಳಿರುವ ನನ್ನ ಬ್ಯಾಗ್ ಅನ್ನು ಕದ್ದಿದ್ದಾರೆ. ಎಂಥಾ ಅಸುರಕ್ಷಿತ ಸ್ಥಳ ಎಂದು ಹೋಟೆಲ್ ಅನ್ನು ಟ್ಯಾಗ್ ಮಾಡಿದ್ದಾರೆ.
-
2/2 Hoping for a quick investigation and resolution of this matter. Such lack of security at @ECB_cricket's preferred hotel partner is astounding. Hope they will take cognisance as well.@Marriott @BCCIWomen @BCCI
— Taniyaa Sapna Bhatia (@IamTaniyaBhatia) September 26, 2022 " class="align-text-top noRightClick twitterSection" data="
">2/2 Hoping for a quick investigation and resolution of this matter. Such lack of security at @ECB_cricket's preferred hotel partner is astounding. Hope they will take cognisance as well.@Marriott @BCCIWomen @BCCI
— Taniyaa Sapna Bhatia (@IamTaniyaBhatia) September 26, 20222/2 Hoping for a quick investigation and resolution of this matter. Such lack of security at @ECB_cricket's preferred hotel partner is astounding. Hope they will take cognisance as well.@Marriott @BCCIWomen @BCCI
— Taniyaa Sapna Bhatia (@IamTaniyaBhatia) September 26, 2022
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಿಗದಿ ಮಾಡಿದ ಹೋಟೆಲ್ನಲ್ಲಿ ಉಳಿದುಕೊಂಡರೂ ಈ ರೀತಿ ನಡೆದಿದೆ. ಇದೊಂದು ಆಶ್ಚರ್ಯಕರ ಸಂಗತಿ. ಅಚ್ಚರಿಯೂ ಆಗಿದೆ. ಹೋಟೆಲ್ ಮ್ಯಾನೇಜ್ಮೆಂಟ್ ಶೀಘ್ರವೇ ಸಮಸ್ಯೆಯನ್ನು ಪರಿಹಡಿಸಬೇಕು ಎಂದು ತಾನಿಯಾ ಒತ್ತಾಯಿಸಿದ್ದಾರೆ.
ತಾನಿಯಾರ ಈ ಟ್ವೀಟ್ಗೆ ಹೋಟೆಲ್ ಮ್ಯಾನೇಜ್ಮೆಂಟ್ ಪ್ರತಿಕ್ರಿಯಿಸಿದ್ದು, ಕೆಲ ವಿವರಗಳನ್ನು ಕೇಳಿದೆ. ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದೆ. ಹೆಸರು, ವಿಳಾಸ, ಇಮೇಲ್, ಹೋಟೆಲ್ ರೂಮ್ ನಿಗದಿ ಮಾಡಿದ ದಿನಾಂಕ ಸೇರಿ ಮತ್ತಿತರ ವಿವರಗಳನ್ನು ನೀಡಲು ಕೋರಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಟ್ವೀಟ್ನಲ್ಲಿ ತಿಳಿಸಿದೆ.
ಓದಿ: ಹರ್ಷಲ್, ಭುವನೇಶ್ವರ್ ಕಳಪೆ ಆಟಕ್ಕೆ ಟೀಕೆ.. ಬೆಂಬಲಕ್ಕೆ ನಿಂತ ನಾಯಕ ರೋಹಿತ್ ಶರ್ಮಾ