ETV Bharat / sports

'T20 ನಾಯಕತ್ವ ತ್ಯಜಿಸುವಂತೆ ಯಾರೂ ಕೂಡ ಕೊಹ್ಲಿಗೆ ಹೇಳಿಲ್ಲ'; ಆಯ್ಕೆ ಸಮಿತಿ ಮುಖ್ಯಸ್ಥ - ಏಕದಿನ ನಾಯಕತ್ವ ವಿಚಾರವಾಗಿ ಚೇತನ್ ಶರ್ಮಾ ಮಾತು

Chetan Sharma On Virat Kohli : ಭಾರತೀಯ ಕ್ರಿಕೆಟ್​ಗೋಸ್ಕರ ನಾಯಕನಾಗಿ ಮುಂದುವರೆಯುವಂತೆ ಹೇಳಲಾಗಿತ್ತು. ಇದೇ ವಿಚಾರವಾಗಿ ವಿಶ್ವಕಪ್​​ ನಂತರ ನಾವು ವಿರಾಟ್​​ ಜೊತೆ ಮಾತನಾಡಲು ಬಯಸಿದ್ದೆವು ಎಂದು ತಿಳಿಸಿದ್ದಾರೆ. ಆದರೆ, ವಿರಾಟ್​​ ಕೊಹ್ಲಿ ನಾಯಕತ್ವ ತ್ಯಜಿಸುತ್ತಿರುವುದಾಗಿ ಘೋಷಣೆ ಮಾಡಿದರು ಎಂದರು..

Chetan Sharma On Virat Kohli
Chetan Sharma On Virat Kohli
author img

By

Published : Dec 31, 2021, 10:23 PM IST

ಮುಂಬೈ : ಐಸಿಸಿ ಟಿ20 ವಿಶ್ವಕಪ್​ ಮುಕ್ತಾಯವಾಗುತ್ತಿದ್ದಂತೆ ಚುಟುಕು ಕ್ರಿಕೆಟ್​​ ನಾಯಕತ್ವ ಸ್ಥಾನಕ್ಕೆ ವಿರಾಟ್​​ ಕೊಹ್ಲಿ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಬಿಸಿಸಿಐ ಏಕದಿನ ನಾಯಕತ್ವದಿಂದಲೂ ಕೆಳಗಿಳಿಸಿ, ಸೀಮಿತ ಓವರ್​ಗಳ ಕ್ರಿಕೆಟ್​​ಗೆ ರೋಹಿತ್​ ಶರ್ಮಾ ಅವರನ್ನ ನಾಯಕನನ್ನಾಗಿ ಆಯ್ಕೆ ಮಾಡಿದೆ. ಈ ವಿಚಾರವಾಗಿ ಬಿಸಿಸಿಐ ಮತ್ತು ವಿರಾಟ್​​ ಕೊಹ್ಲಿ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ. ಆಯ್ಕೆ ಸಮಿತಿ ಕೂಡ ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಜನವರಿಯಲ್ಲಿ ಆರಂಭಗೊಳ್ಳಲಿರುವ ಏಕದಿನ ಕ್ರಿಕೆಟ್​ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಳಿಸಿ ಮಾತನಾಡಿರುವ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್​ ಶರ್ಮಾ, ಟಿ20 ನಾಯಕತ್ವ ತ್ಯಜಿಸುವಂತೆ ವಿರಾಟ್​​ ಕೊಹ್ಲಿಗೆ ಯಾರೂ ಕೂಡ ಹೇಳಿರಲಿಲ್ಲ. ಏಕದಿನ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ಬಿಸಿಸಿಐ ಮತ್ತು ವಿರಾಟ್​​ ಕೊಹ್ಲಿ ನಡುವೆ ಯಾವುದೇ ರೀತಿಯ ಗೊಂದಲ್ಲವಿಲ್ಲ ಎಂದಿದ್ದಾರೆ.

ಟಿ20 ಕ್ರಿಕೆಟ್​ ನಾಯಕತ್ವ ತ್ಯಜಿಸುವುದಾಗಿ ವಿರಾಟ್​​ ಕೊಹ್ಲಿ ತಿಳಿಸಿದ ನಂತರ, ಸೀಮಿತ ಓವರ್​ಗಳ ಕ್ರಿಕೆಟ್​ ಓರ್ವ ನಾಯಕನೊಂದಿಗೆ ಉತ್ತಮವಾಗಿರುತ್ತದೆ ಎಂದು ನಾವು ತಿಳಿಸಿದ್ದೆವು ಎಂದಿದ್ದಾರೆ.

ಇದನ್ನೂ ಓದಿರಿ: ಆಫ್ರಿಕಾ ವಿರುದ್ಧ ODI ಸರಣಿಗೆ ಟೀಂ ಇಂಡಿಯಾ ಪ್ರಕಟ.. ಕೆ ಎಲ್​ ರಾಹುಲ್​ಗೆ ನಾಯಕತ್ವದ ಜವಾಬ್ದಾರಿ

ವಿಶ್ವಕಪ್​ಗೆ ತಂಡ ಆಯ್ಕೆ ಮಾಡುವ ಸಭೆಯಲ್ಲಿ ವಿರಾಟ್​​ ಕೊಹ್ಲಿ ನಿರ್ಧಾರದ ಬಗ್ಗೆ ಕೇಳಿ ನಮಗೆ ಆಶ್ಚರ್ಯವಾಯಿತು. ಈ ವೇಳೆ ನಿರ್ಧಾರವನ್ನ ಮರು ಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗಿತ್ತು. ಜೊತೆಗೆ ವಿಶ್ವಕಪ್​ ಮೇಲೆ ಇದು ಪರಿಣಾಮ ಬೀರಲಿದೆ ಎಂದು ತಿಳಿಸಿದ್ದೆವು.

ಭಾರತೀಯ ಕ್ರಿಕೆಟ್​ಗೋಸ್ಕರ ನಾಯಕನಾಗಿ ಮುಂದುವರೆಯುವಂತೆ ಹೇಳಲಾಗಿತ್ತು. ಇದೇ ವಿಚಾರವಾಗಿ ವಿಶ್ವಕಪ್​​ ನಂತರ ನಾವು ವಿರಾಟ್​​ ಜೊತೆ ಮಾತನಾಡಲು ಬಯಸಿದ್ದೆವು ಎಂದು ತಿಳಿಸಿದ್ದಾರೆ. ಆದರೆ, ವಿರಾಟ್​​ ಕೊಹ್ಲಿ ನಾಯಕತ್ವ ತ್ಯಜಿಸುತ್ತಿರುವುದಾಗಿ ಘೋಷಣೆ ಮಾಡಿದರು ಎಂದರು.

ವಿರಾಟ್​​ ಟಿ20 ನಾಯಕತ್ವ ತ್ಯಜಿಸಿದ ನಂತರ, ಬಿಸಿಸಿಐ ವೈಟ್‌ಬಾಲ್​ ಹಾಗೂ ರೆಡ್​ ಬಾಲ್​ಗೆ ಓರ್ವ ನಾಯಕನ ನೇಮಕ ಮಾಡುವ ನಿರ್ಧಾರ ಕೈಗೊಂಡಿತು ಎಂದಿದ್ದಾರೆ. ವಿರಾಟ್​​ ಕೊಹ್ಲಿ ಭಾರತೀಯ ಕ್ರಿಕೆಟ್​ಗೆ ಓರ್ವ ಅತ್ಯುತ್ತಮ ಆಟಗಾರ ಎಂದಿರುವ ಚೇತನ ಶರ್ಮಾ, ತಂಡಕ್ಕೆ ಅವರ ಅವಶ್ಯಕತೆ ಇದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.