ಕ್ವೀನ್ಸ್ ಪಾರ್ಕ್ ಓವಲ್(ಪೋರ್ಟ್ ಆಫ್ ಸ್ಪೇನ್): ಆತಿಥೇಯ ವೆಸ್ಟ್ ವಿಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯವನ್ನೂ ಗೆಲ್ಲುವ ಮೂಲಕ ಭಾರತ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿತು. ನಿನ್ನೆ ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್‌ಗಿಳಿದ ಪ್ರವಾಸಿ ತಂಡದ ಉದಯೋನ್ಮುಖ ಆಟಗಾರ ಶುಭಮನ್ ಗಿಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. 98 ರನ್‌ಗಳನ್ನು ಪೇರಿಸಿದ ಅವರು ಕೇವಲ 2 ರನ್ನುಗಳಿಂದ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಶತಕ ವಂಚಿತರಾದರು.
ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ ಕಾರಣ ಭಾರತ ನಿಗದಿತ 50 ಓವರ್‌ಗಳ ಆಟ ಪೂರ್ಣಗಳಿಸಲು ಸಾಧ್ಯವಾಗಲಿಲ್ಲ. ತಂಡವು 36 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಕಲೆ ಹಾಕಿತು. ನಂತರ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ, ವಿಂಡೀಸ್‌ಗೆ ಗೆಲ್ಲಲು 35 ಓವರ್‌ಗಳಲ್ಲಿ 257 ರನ್ ಗುರಿ ನೀಡಲಾಯಿತು. ಆದರೆ ಆತಿಥೇಯರು ಚಾಹಲ್ ಸೇರಿದಂತೆ ಭಾರತೀಯ ಬೌಲಿಂಗ್ ದಾಳಿಗೆ ಕಂಗೆಟ್ಟು ಕೇವಲ 137 ರನ್‌ಗಳಿಗೆ ಆಲೌಟ್ ಆದರು. ಈ ಮೂಲಕ ಭಾರತ ಸರಣಿ ಕ್ಲೀನ್ ಸ್ವೀಪ್ ಸಾಧನೆ ಮಾಡಿತು.
ಸಂಕ್ಷಿಪ್ತ ಸ್ಕೋರ್ ವಿವರ- ಭಾರತ ಇನಿಂಗ್ಸ್: ಶಿಖರ್ ಧವನ್ 58 (74 ಎಸೆತ), ಶುಭಮನ್ ಗಿಲ್ 98* (98ಎಸೆತ) ಹಾಗು ಶ್ರೇಯಸ್ ಅಯ್ಯರ್ 44 (45 ಎಸೆತ) 36 ಓವರ್‌ಗಳನ್ನು 3 ವಿಕೆಟ್ ನಷ್ಟಕ್ಕೆ 225.
ವಿಂಡೀಸ್ ಪರ- ಹೇಡನ್ ವಾಲ್ಶ್- 2 ವಿಕೆಟ್, ಅಕೀಲ್ ಹೊಸೀನ್- 1 ವಿಕೆಟ್ ಪಡೆದರು.
ವೆಸ್ಟ್ ಇಂಡೀಸ್ ಇನಿಂಗ್ಸ್: ಬ್ರಂಡನ್ ಕಿಂಗ್ 42 (37 ಎಸೆತ), ನಿಕೋಲಸ್ ಪೂರನ್ 42(32 ಎಸೆತ) 26 ಓವರ್‌ಗಳಲ್ಲಿ ತಂಡ ಸರ್ವಪತನ. ಒಟ್ಟು ಸ್ಕೋರ್- 137
ಚಾಹಲ್ 4, ಸಿರಾಜ್, ಶಾರ್ದುಲ್ ತಲಾ 2 ಹಾಗು ಪ್ರಸಿಧ್ ಕೃಷ್ಣ, ಅಕ್ಸರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
ಇದನ್ನೂ ಓದಿ: ಕಾಮನ್ವೆಲ್ತ್ ಕ್ರೀಡಾಕೂಟ: ರಾಷ್ಟ್ರ ಧ್ವಜ ಹಿಡಿದು ತಂಡ ಮುನ್ನಡೆಸುವ ಅವಕಾಶ; ದೊಡ್ಡ ಗೌರವ ಎಂದ ಸಿಂಧು