ಅಹ್ಮದಾಬಾದ್ : ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿದ ಭಾರತ ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಪಡೆದಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತದ ಐತಿಹಾಸಿಕ 1000ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 177 ರನ್ಗಳ ಸಾಧಾರಣ ಗುರಿಯನ್ನು ರೋಹಿತ್ ಬಳಗ 28 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪುವ ಮೂಲಕ 2022ರಲ್ಲಿ ಮೊದಲ ಅಂತಾರಾಷ್ಟ್ರೀಯ ಜಯ ಸಾಧಿಸಿತು.
-
That's that from the 1st ODI. #TeamIndia win their 1000th ODI by 6 wickets 👏👏
— BCCI (@BCCI) February 6, 2022 " class="align-text-top noRightClick twitterSection" data="
Scorecard - https://t.co/6iW0JTcEMv #INDvWI pic.twitter.com/vvFz0ftGB9
">That's that from the 1st ODI. #TeamIndia win their 1000th ODI by 6 wickets 👏👏
— BCCI (@BCCI) February 6, 2022
Scorecard - https://t.co/6iW0JTcEMv #INDvWI pic.twitter.com/vvFz0ftGB9That's that from the 1st ODI. #TeamIndia win their 1000th ODI by 6 wickets 👏👏
— BCCI (@BCCI) February 6, 2022
Scorecard - https://t.co/6iW0JTcEMv #INDvWI pic.twitter.com/vvFz0ftGB9
ಅಧಿಕೃತವಾಗಿ ಭಾರತ ಏಕದಿನ ತಂಡದ ನಾಯಕತ್ವ ವಹಿಸಿಕೊಂಡ ರೋಹಿತ್ ಶರ್ಮಾ ಕೇವಲ 51 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 60 ರನ್ಗಳಿಸಿದರೆ, ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 34, ಇಂದೇ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ದೀಪಕ್ ಹೂಡ ಅಜೇಯ 26 ರನ್ ಸಿಡಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಆರಂಭಿಕನಾಗಿ ಬಡ್ತಿ ಪಡೆದಿದ್ದ ಇಶಾನ್ ಕಿಶನ್ 36 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 28, ವಿರಾಟ್ ಕೊಹ್ಲಿ 8 ಮತ್ತು 11 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಇದಕ್ಕೂ ಮುನ್ನ ಟಾಸ್ ಗೆದ್ದು ವೆಸ್ಟ್ ಇಂಡೀಸ್ ತಂಡ ಬ್ಯಾಟಿಂಗ್ ಆಹ್ವಾನಿಸಿದ್ದ ಟೀಂ ಇಂಡಿಯಾ, ಸ್ಪಿನ್ನರ್ಗಳ ನೆರವಿನಿಂದ ಕೆರಿಬಿಯನ್ ಪಡೆಯನ್ನು ಕೇವಲ 176 ರನ್ಗಳಿಗೆ ಆಲೌಟ್ ಮಾಡಿತ್ತು. ಯಜ್ವೇಂದ್ರ ಚಹಲ್ 49ಕ್ಕೆ 4, ವಾಷಿಂಗ್ಟನ್ ಸುಂದರ್ 30ಕ್ಕೆ 3, ಪ್ರಸಿಧ್ ಕೃಷ್ಣ 20ಕ್ಕೆ 2 ವಿಕೆಟ್ ಪಡೆದಿದ್ದರು.
ವೆಸ್ಟ್ ಇಂಡೀಸ್ ಪರ ಆಲ್ರೌಂಡರ್ ಜೇಸನ್ ಹೋಲ್ಡರ್ 71 ಎಸೆತಗಳಲ್ಲಿ 4 ಸಿಕ್ಸರ್ಗಳ ಸಹಿತ 57 ರನ್ಗಳಿಸಿದರೆ, ಫ್ಯಾಬಿಯನ್ ಅಲೆನ್ 29 ರನ್ಗಳಿಸಿದ್ದರು. ಇವರಿಬ್ಬರನ್ನು ಹೊರೆತುಪಡಿಸಿದರೆ ಬೇರೆ ಯಾವ ಬ್ಯಾಟರ್ಗಳು 20 ಗಡಿ ದಾಟುವಲ್ಲಿ ವಿಫಲರಾದರು. ಭಾರತ ಮತ್ತು ವಿಂಡೀಸ್ ನಡುವಿನ 2ನೇ ಏಕದಿನ ಪಂದ್ಯ ಫೆಬ್ರವರಿ 9ರಂದು ಇದೇ ಸ್ಟೇಡಿಯಂನಲ್ಲಿ ನಡೆಯಲಿದೆ.