ಕೋಲ್ಕತ್ತಾ: ರವಿ ಬಿಷ್ಣೋಯ್ ಬೌಲಿಂಗ್ ಮತ್ತು ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅವರ ಅಬ್ಬರ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಭಾರತ 6 ವಿಕೆಟ್ಗಳಿಂದ ಗೆದ್ದು 3 ಪಂದ್ಯಗಳ ಸರಣಿಯನ್ನು 1-0ಯಲ್ಲಿ ಮುನ್ನಡೆ ಪಡೆದುಕೊಂಡಿದೆ.
ವೆಸ್ಟ್ ಇಂಡೀಸ್ ನೀಡಿದ್ದ 158 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಇನ್ನು 7 ಎಸೆತಗಳಿರುವಂತೆಯೇ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮೊದಲ ವಿಕೆಟ್ಗೆ 64 ರನ್ಗಳಿಸಿದರು. ರೋಹಿತ್ 19 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 40 ರನ್ಗಳಿಸಿದರು.
ಆದರೆ ಇಶಾನ್ ಕಿಶನ್ ಆರಂಭದಿಂದ ವಿಕೆಟ್ ಒಪ್ಪಿಸುವವರೆಗೂ ರನ್ಗಳಿಸಲೂ ಪರದಾಡಿದರು. ಜಾರ್ಖಂಡ್ ಬ್ಯಾಟರ್ 42 ಎಸೆತಗಳಲ್ಲಿ 4 ಬೌಂಡರಿ ಸೇರಿದಂತೆ ಕೇವಲ 35 ರನ್ಗಳಿಸಿದರು. ರಾಸ್ಟನ್ ಚೇಸ್ ಭಾರತದ ಆರಂಭಿಕರಿಬ್ಬರ ವಿಕೆಟ್ ಪಡೆದುಕೊಂಡರು.
-
.@surya_14kumar and Venkatesh Iyer take #TeamIndia home with a 6-wicket win in the 1st T20I.
— BCCI (@BCCI) February 16, 2022 " class="align-text-top noRightClick twitterSection" data="
Scorecard - https://t.co/dSGcIkX1sx #INDvWI @Paytm pic.twitter.com/jfrJo0fsR3
">.@surya_14kumar and Venkatesh Iyer take #TeamIndia home with a 6-wicket win in the 1st T20I.
— BCCI (@BCCI) February 16, 2022
Scorecard - https://t.co/dSGcIkX1sx #INDvWI @Paytm pic.twitter.com/jfrJo0fsR3.@surya_14kumar and Venkatesh Iyer take #TeamIndia home with a 6-wicket win in the 1st T20I.
— BCCI (@BCCI) February 16, 2022
Scorecard - https://t.co/dSGcIkX1sx #INDvWI @Paytm pic.twitter.com/jfrJo0fsR3
ನಂತರ ಬಂದ ವಿರಾಟ್ ಕೊಹ್ಲಿ 13 ಎಸೆತಗಳಲ್ಲಿ 17, ರಿಷಭ್ ಪಂತ್ 8 ರನ್ಗಳಿಸಿ ಬಂದ ದಾರಿಯಲ್ಲೇ ವಾಪಸ್ ತೆರಳಿದರು. ಆದರೆ, ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಸೂರ್ಯಕುಮಾರ್ ಯಾದವ್ ಕೇವಲ 18 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 34 ರನ್ಗಳಿಸಿದರೆ, ಆಲ್ರೌಂಡರ್ ವೆಂಕಟೇಶ್ ಅಯ್ಯರ್13 ಎಸೆತಗಳಲ್ಲಿ 24 ರನ್ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ವೆಸ್ಟ್ ಇಂಡೀಸ್ ಪರ ರಾಸ್ಟನ್ ಚೇಸ್ 4 ಓವರ್ಗಳಲ್ಲಿ 14 ರನ್ ನೀಡಿ 2 ವಿಕೆಟ್ ಪಡೆದರು, ಅಲೆನ್ ಮತ್ತು ಕಾಟ್ರೆಲ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್ಗಳಿಸಿತ್ತು. ನಿಕೋಲಸ್ ಪೂರನ್ 43 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 61 ರನ್ಗಳಿಸಿದರೆ, ನಾಯಕ ಪೊಲಾರ್ಡ್ ಅಜೇಯ 24, ಕೈಲ್ ಮೇಯರ್ಸ್ 31 ರನ್ಗಳಿಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಯುವ ಸ್ಪಿನ್ನರ್ ರವಿ ಬಿಷ್ಣೋಯ್ 17ಕ್ಕೆ 2 ವಿಕೆಟ್ ಪಡೆದು ಮಿಂಚಿದರು. ಹರ್ಷಲ್ ಪಟೇಲ್ 37ಕ್ಕೆ 2, ಭುವನೇಶ್ವರ್ 31ಕ್ಕೆ1, ದೀಪಕ್ ಚಾಹರ್ 28ಕ್ಕೆ1, ಚಹಲ್ 34ಕ್ಕೆ 1 ವಿಕೆಟ್ ಪಡೆದರು.
ಇದನ್ನೂ ಓದಿ:ವಿದೇಶಿ ಆಟಗಾರರ ಮೇಲೆ ಹೆಚ್ಚು ಹೂಡಿಕೆ; ಅಗ್ರಸ್ಥಾನದಲ್ಲಿ SRH, RCB, ಅತ್ಯಂತ ಕಡಿಮೆ ವ್ಯಯಿಸಿದ CSK