ETV Bharat / sports

ಮೈದಾನದಲ್ಲಿ ವರುಣನ ಆಟದ ನಡುವೆಯೂ ಐರ್ಲೆಂಡ್​ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ

author img

By

Published : Jun 27, 2022, 7:04 AM IST

ಐರ್ಲೆಂಡ್ ಎದುರಿನ ಮೊದಲ ಟಿ- 20 ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದ್ದ ಭಾರತ ತಂಡ ಐರ್ಲೆಂಡ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ಐರ್ಲೆಂಡ್‌ ವಿರುದ್ಧ ಭಾರತ ಏಳು ವಿಕೆಟ್‌ಗಳಿಂದ ಜಯ, ಡಬ್ಲಿನ್‌ನಲ್ಲಿ ಐರ್ಲೆಂಡ್‌ ವಿರುದ್ಧ ಭಾರತಕ್ಕೆ ಜಯ, ಐರ್ಲೆಂಡ್ ವಿರುದ್ಧ ಭಾರತ 1 ನೇ T20I ಪಂದ್ಯ, ಐರ್ಲೆಂಡ್‌ನ ಭಾರತ ಪ್ರವಾಸ 2022, ಡಬ್ಲಿನ್‌ನ ವಿಲೇಜ್​ ಮೈದಾನ
ಮೈದಾನದಲ್ಲಿ ವರುಣನ ಆಟದ ನಡುವೇಯೂ ಐರ್ಲೆಂಡ್​ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ

ಡಬ್ಲಿನ್ ​(ಐರ್ಲೆಂಡ್): ಐರ್ಲೆಂಡ್ ಎದುರಿನ ಮೊದಲ ಟಿ- 20 ಪಂದ್ಯದಲ್ಲಿ ಭಾರತವು ಭರ್ಜರಿ ಗೆಲುವು ಸಾಧಿಸಿದೆ. ಅಂತಾರಾಷ್ಟ್ರೀಯ ತಂಡದ ನಾಯಕತ್ವವನ್ನು ಮೊದಲ ಬಾರಿ ವಹಿಸಿಕೊಂಡಿದ್ದ ಹಾರ್ದಿಕ್​ ಪಾಂಡ್ಯ ನೇತೃತ್ವದ ತಂಡ ಐರ್ಲೆಂಡ್​ ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಐರ್ಲೆಂಡ್​ ಇನ್ನಿಂಗ್ಸ್​: ಟಾಸ್​ ಸೋತು ಮೊದಲ ಬ್ಯಾಟಿಂಗ್​ ಆರಂಭಿಸಿದ ಐರ್ಲೆಂಡ್​ ತಂಡ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡಿದೆ. ಮಳೆರಾಯನ ಅಡ್ಡಿಯಿಂದ 12 ಓವರ್​ಗಳಿಗೆ ನಿಗದಿಯಾದ ಈ ಪಂದ್ಯದಲ್ಲಿ ಐರ್ಲೆಂಡ್​ ತಂಡ ಕೇವಲ 4 ವಿಕೆಟ್​ಗಳನ್ನು ಕಳೆದುಕೊಂಡು 108 ರನ್​ಗಳನ್ನು ಗಳಿಸಲು ಶಕ್ತವಾಯಿತು. ಐರ್ಲೆಂಡ್​ ತಂಡದ ಪರ ಪಾಲ್ ಸ್ಟಿರ್ಲಿಂಗ್ 4 ರನ್​, ನಾಯಕ ಆಂಡ್ರ್ಯೂ ಬಾಲ್ಬಿರ್ನಿ 0, ಗರೆಥ್ ಡೆಲಾನಿ 8 ರನ್​, ಲೋರ್ಕನ್ ಟಕರ್ 18 ರನ್​ ಗಳಿಸಿ ಔಟಾದರೆ, ಭಾರತದ ವಿರುದ್ಧ ಭರ್ಜರಿ ಬ್ಯಾಟಿಂಗ್​ ಬೀಸಿದ ಹ್ಯಾರಿ ಟೆಕ್ಟರ್ ಔಟಾಗದೇ 33 ಎಸೆತಗಳಲ್ಲಿ 64 ರನ್​ಗಳಿಸಿ ಮಿಂಚಿದ್ರು.4 ರನ್​ಗಳಿಸಿದ ಜಾರ್ಜ್ ಡಾಕ್ರೆಲ್ ಅಜೇಯರಾಗಿ ಉಳಿದರು.

ಭಾರತ ತಂಡ ಪರ ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್​ ಪಡೆಯುವ ಮೂಲಕ ಐರ್ಲೆಂಡ್​ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು.

ಓದಿ: ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಉಮ್ರಾನ್​ ಮಲಿಕ್​ ಪಾದಾರ್ಪಣೆ

ಭಾರತ ಇನ್ನಿಂಗ್ಸ್​: ಐರ್ಲೆಂಡ್​ ನೀಡಿದ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರೆಯಿತು. 9.2 ಓವರ್​ಗಳಿಗೆ 3 ವಿಕೆಟ್​ಗಳನ್ನು ಕಳೆದುಕೊಂಡು 111 ರನ್​ಗಳನ್ನು ಕಲೆ ಹಾಕುವ ಮೂಲಕ ಭಾರತ ತಂಡ ಐರ್ಲೆಂಡ್​ ವಿರುದ್ಧ ಭರ್ಜರಿ ಜಯ ಸಾಧಿಸಿತು. ಆದರೆ ಈ ಪಂದ್ಯದಲ್ಲಿ ಆಕ್ರಮಣ ಆಟಗಾರ ಸೂರ್ಯಕುಮಾರ ಯಾದವ್​ ಗೋಲ್ಡನ್​ ಡೆಕ್ಔಟ್​​ ಆಗುವ ಪೆವಿಲಿಯನ್ ಹಾದಿ ಹಿಡಿದರು.

ಭಾರತ ತಂಡದ ಪರ ಆರಂಭಿಕ ಆಟಗಾರ ಇಶಾನ್ ಕಿಶನ್ ಔಟಾಗದೇ 47 ರನ್ ಗಳಿಸಿದ್ರೆ​, ದೀಪಕ್ ಹೂಡಾ 26 ರನ್​, ಸೂರ್ಯಕುಮಾರ್ ಯಾದವ್ 0, ನಾಯಕ ಹಾರ್ದಿಕ್ ಪಾಂಡ್ಯ 24 ರನ್ ಮತ್ತು ದಿನೇಶ್ ಕಾರ್ತಿಕ್ 4 ರನ್​ಗಳನ್ನು ಕಲೆ ಹಾಕಿ ಅಜೇಯರಾಗಿ ಉಳಿದರು. ಐರ್ಲೆಂಡ್​ ತಂಡದ ಪರ ಕ್ರೇಗ್ ಯಂಗ್ 2 ವಿಕೆಟ್​ ಪಡೆದರೆ, ಜೋಶುವಾ ಲಿಟಲ್ 1 ವಿಕೆಟ್​ ಪಡೆದರು.

ಹಾರ್ದಿಕ್​ ಪಾಂಡ್ಯ ನೇತೃತ್ವದ ತಂಡದ 11ರಲ್ಲಿ ಉಮ್ರಾನ್​ ಮಲ್ಲಿಕ್​ ಸ್ಥಾನ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಐರ್ಲೆಂಡ್ ತಂಡದ ಕಾನರ್ ಓಲ್ಫರ್ಟ್ ಕೂಡ ಈ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ್ದಾರೆ.

ಐಪಿಎಲ್​ನಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ್ದ ಉಮ್ರಾನ್​ ಮಲ್ಲಿಕ್​ ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಅವಕಾಶ ಸಿಕ್ಕಿದರೂ ಪಂದ್ಯಕ್ಕೆ ಪಾದಾರ್ಪಣೆ ಮಾಡಿರಲಿಲ್ಲ. ಕಾಶ್ಮಿರದ ಹುಡುಗ ಈ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಕಾಲಿಟ್ಟರು.

ಐರ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಎರಡು ಟಿ 20ಗಳನ್ನು ಆಡಲಿದೆ. ಐರ್ಲೆಂಡ್​ನ ಡಬ್ಲಿನ್​ನಲ್ಲಿ ಮೊದಲ ಪಂದ್ಯ ಗೆದ್ದ ಭಾರತ ತಂಡ ಎರಡನೇ ಪಂದ್ಯವು ಜೂನ್​ 28ರಂದು ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.