ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ 3ನೇ ಟಿ20 ಉಪ್ಪಲ್ನ ರಾಜೀವ ಗಾಂಧಿ ಸ್ಟೇಡಿಯಂನಲ್ಲಿ ಸೆ.25 ರಂದು ನಡೆಯಲಿದೆ. ಪಂದ್ಯಕ್ಕೆ ಇನ್ನೊಂದೇ ದಿನ ಬಾಕಿ ಇದ್ದರೂ ಟಿಕೆಟ್‌ಗಳ ಬಗ್ಗೆ ಇನ್ನೂ ಸ್ಪಷ್ಟನೆ ಸಿಗುತ್ತಿಲ್ಲ. ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್ ಹೇಳುತ್ತಿದ್ದರೂ, ಕೆಲ ಟಿಕೆಟ್‌ಗಳ ಲೆಕ್ಕ ಇನ್ನೂ ಸಿಗುತ್ತಿಲ್ಲ. ಇನ್ನು ಈ ಸ್ಟೇಡಿಯಂನಲ್ಲಿ ಸುಮಾರು ಮೂರು ವರ್ಷಗಳ ನಂತರ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದೆ. ಆದರೆ ಸ್ಟೇಡಿಯಂ ಸುಸ್ಥಿತಿಗೆ ತರಲು ಮಾತ್ರ ಎಚ್‌ಸಿಎ ವಿಫಲವಾಗಿದೆ.
ಭಾನುವಾರ ಉಪ್ಪಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದ ಟಿಕೆಟ್‌ಗಳ ಸಂಖ್ಯೆಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಸಿಎ) ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಅವರು ಕ್ರೀಡಾಂಗಣದ ಸಾಮರ್ಥ್ಯ 39,000 ಆಗಿದ್ದು, ಇದರಲ್ಲಿ ಈವರೆಗೆ 26,550 ಟಿಕೆಟ್‌ಗಳು ವಿವಿಧ ರೂಪಗಳಲ್ಲಿ ಮಾರಾಟವಾಗಿವೆ ಎಂದು ಬಹಿರಂಗಪಡಿಸಿದ್ದಾರೆ. ಟಿಕೆಟ್ ಮಾರಾಟದ ಜವಾಬ್ದಾರಿಯನ್ನು ಸಂಪೂರ್ಣವಾಗಿ ‘ಪೇಟಿಎಂ’ಗೆ ವಹಿಸಲಾಗಿದ್ದು, ಜಿಮ್ಖಾನಾ ಘಟನೆಗೂ ಎಚ್‌ಸಿಎಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು.
ಕುರ್ಚಿಗಳ ಮೇಲೆಲ್ಲ ಧೂಳು ತುಂಬಿದೆ. ಕೆಲ ಕುರ್ಚಿಗಳು ಮುರಿದಿವೆ. ಸ್ಟೇಡಿಯಂನಲ್ಲಿ ರೂಫ್ ಟಾಪ್ ಇಲ್ಲ, ಸ್ವಚ್ಛತೆ ಇಲ್ಲ. ಇದು ಉಪ್ಪಳದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದ ಸದ್ಯದ ಸ್ಥಿತಿ. ಕ್ರೀಡಾಂಗಣದ ಕುರ್ಚಿಗಳು ಮತ್ತು ಪ್ರದೇಶಗಳಲ್ಲಿ ಪಕ್ಷಿಗಳ ಹಿಕ್ಕೆಗಳು ಜಮೆಯಾಗಿವೆ. ಧೂಳು ಮತ್ತು ಕೊಳಕು ಸಂಗ್ರಹವಾಗಿದೆ. ಈ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಟಿ20 ಪಂದ್ಯಕ್ಕೆ ಕೇವಲ ಒಂದು ದಿನ ಮಾತ್ರ ಇದೆ. ಆದರೆ ಇನ್ನೂ ಪಂದ್ಯ ನಡೆಸಲು ಮೈದಾನವನ್ನು ಸಿದ್ಧಪಡಿಸಲು ಎಚ್‌ಸಿಎಗೆ ಸಾಧ್ಯವಾಗಿಲ್ಲ.