ETV Bharat / sports

ಭಾರತ vs ಆಸ್ಟ್ರೇಲಿಯಾ ಮಹಿಳಾ ಟೆಸ್ಟ್​ ಸರಣಿಗೆ ಪುರುಷರಿಗಿರುವಂತೆ ಶಾಶ್ವತ ಟ್ರೋಫಿ ಅಗತ್ಯವಿದೆ - ಮೆಲ್ ಜೋನ್ಸ್​

ಬಾರ್ಡರ್​-ಗವಾಸ್ಕರ್​ ಟ್ರೋಫಿಯಂತಹದನ್ನು ಮಹಿಳಾ ಕ್ರಿಕೆಟ್​ ಹೊಂದುವುದು ಅದ್ಭುತವಾಗಿದೆ. ಆದರೆ, ಈ ಹಿಂದೆ ಪುರುಷರ ಕ್ರಿಕೆಟ್​ಗೆ ಹಿಂದೆ ಅದು ದೊರಕಿದೆ. ಆದರೆ, ನಾವು ಮಹಿಳಾ ಆಟಕ್ಕೆ ನಮ್ಮದೇ ಆದ ಹೊಸ ಮಾರ್ಗ ಹುಡುಕಬೇಕಿದೆ ಎಂದು ಜೋನ್ಸ್ ಕ್ರಿಕೆಟ್​ ಡಾಟ್​ ಕಾಮ್​ಗೆ ತಿಳಿಸಿದ್ದಾರೆ.

ಭಾರತ vs ಆಸ್ಟ್ರೇಲಿಯಾ ಟೆಸ್ಟ್ನ ಸರಣಿ
ಭಾರತ vs ಆಸ್ಟ್ರೇಲಿಯಾ ಟೆಸ್ಟ್ನ ಸರಣಿ
author img

By

Published : May 22, 2021, 5:29 PM IST

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ಪುರುಷ ತಂಡಗಳ ಟೆಸ್ಟ್ ಸರಣಿಗೆ ಬಾರ್ಡರ್​ - ಗವಾಸ್ಕರ್​ ಟ್ರೋಫಿ ಇರುವಂತೆ, ಮಹಿಳಾ ಟೆಸ್ಟ್​ ಸರಣಿಗೆ ಮಾಜಿ ಮಹಿಳಾ ಕ್ರಿಕೆಟಿಗರ ಹೆಸರಿನೊಂದಿಗೆ ಟ್ರೋಫಿ ಅಗತ್ಯವಿದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮತ್ತು ಐಸಿಸಿ ವುಮೆನ್ಸ್ ಕಮಿಟಿಯ ಸದಸ್ಯೆ ಮೆಲ್ ಜೋನ್ಸ್ ಹೇಳಿದ್ದಾರೆ.

ಬಾರ್ಡರ್​-ಗವಾಸ್ಕರ್​ ಟ್ರೋಫಿಯಂತಹದನ್ನು ಮಹಿಳಾ ಕ್ರಿಕೆಟ್​ ಸಹ ಹೊಂದುವುದು ಅದ್ಭುತವಾಗಿದೆ. ಮಹಿಳಾ ಕ್ರಿಕೆಟ್​ಗೂ ಕೂಡ ನಮ್ಮದೇ ಆದ ಹೊಸ ಮಾರ್ಗವನ್ನು ಹುಡುಕಬೇಕಿದೆ ಎಂದು ಜೋನ್ಸ್ ಕ್ರಿಕೆಟ್​ ಡಾಟ್​ ಕಾಮ್​ಗೆ ತಿಳಿಸಿದ್ದಾರೆ.

" ನಾವು ಕ್ರಿಕೆಟ್ ಆಟವನ್ನು ಇಷ್ಟಪಡುತ್ತೇವೆ, ಏಕೆಂದರೆ ಅದರೊಂದಿಗೆ ಇತಿಹಾಸವನ್ನು ಜೋಡಿಸಲಾಗಿದೆ. ಪುರುಷರ ಮತ್ತು ಮಹಿಳೆಯರ ಎರಡೂ ತಂಡಗಳೂ ತಮ್ಮದೇ ಆದ ಆ್ಯಷಸ್ ಟ್ರೋಫಿಗಳ ಹಿಂದೆ ಈ ಭವ್ಯವಾದ ಕಥಾಹಂದರವನ್ನು ಹೊಂದಿವೆ. ಇದೀಗ ನಾವು ಆ್ಯಷಸ್‌ನಂತೆಯೇ ಭಾರತದೊಂದಿಗೆ ಮತ್ತೊಂದು ಟ್ರೋಫಿಯನ್ನು ಪಡೆಯಬೇಕಿದೆ" ಎಂದು ಜೋನ್ಸ್​ ಹೇಳಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳು 1977ರಲ್ಲಿ ಪರ್ತ್​ನಲ್ಲಿ ಮೊದಲ ಟೆಸ್ಟ್​ ಪಂದ್ಯವನ್ನಾಡಿದ್ದವು. ಆ ಪಂದ್ಯವನ್ನು ಆಸ್ಟ್ರೇಲಿಯಾ 147 ರನ್​ಗಳಿಂದ ಗೆದ್ದಿತ್ತು. ನಂತರದ 44 ವರ್ಷಗಳಲ್ಲಿ ಎರಡೂ ತಂಡಗಳು 8 ಟೆಸ್ಟ್​ನ ಪಂದ್ಯಗಳನ್ನಾಡಿವೆ. ಇದರಲ್ಲಿ 5 ಡ್ರಾಗೊಂಡಿದ್ದರೆ, 4 ಪಂದ್ಯಗಳನ್ನು ಆಸ್ಟ್ರೇಲಿಯಾ ವನಿತೆಯರು ಗೆದ್ದುಕೊಂಡಿದ್ದಾರೆ.

ಸೆಪ್ಟೆಂಬರ್-ಅಕ್ಟೋಬರ್​​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪರ್ತ್​ನಲ್ಲಿ ತಮ್ಮ 10ನೇ ಟೆಸ್ಟ್​ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

ಇದನ್ನು ಓದಿ:ಹೀಗಾದ್ರೆ... ಆಂಗ್ಲರ​ ವಿರುದ್ಧ ಭಾರತ ಟೆಸ್ಟ್​ ಸರಣಿ ಕ್ಲೀನ್​ ಸ್ವೀಪ್​ ಮಾಡಲಿದೆ: ಇಂಗ್ಲೆಂಡ್​ ಮಾಜಿ ಬೌಲರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.