ರೋಸೋ (ಡೊಮಿನಿಕಾ): ಇಲ್ಲಿನ ವಿಂಡ್ಸರ್ ಪಾರ್ಕ್‌ನಲ್ಲಿ ಬುಧವಾರ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ನಂತರ ಟೀಂ ಇಂಡಿಯಾ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಆಡಿರಲಿಲ್ಲ. ಒಂದು ತಿಂಗಳ ನಂತರ ಭಾರತ, ಮತ್ತೆ ಮೈದಾನಕ್ಕೆ ಎಂಟ್ರಿ ಕೊಟ್ಟಿದೆ.
ರೋಹಿತ್ ಶರ್ಮಾ : ಕಳೆದೊಂದು ವಾರದಿಂದ ಇಲ್ಲಿದ್ದೇವೆ. ಇಲ್ಲಿನ ಬಾರ್ಬಡೋಸ್ ಮೈದಾನಲ್ಲಿ ಇಂದು ಅಭ್ಯಾಸ ಪಂದ್ಯ ಕೂಡ ನಡೆಸಿದೆವು. ಡೊಮಿನಿಕಾ ಸೇರಿದಂತೆ ಇತರಡೆ ಕಳೆದ 4 ದಿನಗಳಿಂದ ಮಳೆ ಬೀಳುತ್ತಿದ್ದು ಸದ್ಯ ಬಿಡುವು ನೀಡಿದೆ. ಟೀಂ ಇಂಡಿಯಾ ತಂಡದ ಆಟಗಾರರು ಎಲ್ಲ ರೀತಿಯಿಂದಲೂ ಫಿಟ್ ಇದ್ದು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಂಪೂರ್ಣ ಸಿದ್ಧವಾಗಿಯೇ ಬಂದಿದೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದರು.
ಕ್ರೈಗ್ ಬ್ರಾಥ್‌ವೈಟ್ : ನಾವು ಕಳೆದ 10 ದಿನಗಳಿಂದ ಕಠಿಣ ಅಭ್ಯಾಸ ನಡೆಸಿದ್ದೇವೆ. ಈ ವೇಳೆ ಬ್ರಿಯಾನ್ ಲಾರಾ ನಮಗೆ ಬ್ಯಾಟಿಂಗ್ ಕುರಿತು ಸಲಹೆ ನೀಡಿದ್ದಾರೆ. ನಮ್ಮ ನಡುವೆಯೇ ಅಭ್ಯಾಸ ಪಂದ್ಯವಾಡಿದ್ದು, ಎಲ್ಲರೂ ಉತ್ತಮ ಲಯದಲ್ಲಿ ಕಾಣುತ್ತಿದ್ದಾರೆ. ಈ ರೀತಿ ಆಟಗಾರರನ್ನು ಧನಾತ್ಮಕವಾಗಿ ನೋಡಲು ಬಯಸುತ್ತೇನೆ ಎಂದು ವೆಸ್ಟ್ ಇಂಡೀಸ್ ತಂಡದ ನಾಯಕ ಹೇಳಿದ್ದಾರೆ.
ಇಂದಿನ ವಿಂಡೀಸ್ ವಿರುದ್ದದ ಟೆಸ್ಟ್ ಪಂದ್ಯಕ್ಕೆ ಈಗಾಗಲೇ ತನ್ನ ಸಾಮರ್ಥ್ಯವನ್ನು ತೋರಿಸಿರುವ 21 ವರ್ಷದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಪದಾರ್ಪಣೆ ಮಾಡಿದ್ದಾರೆ. ಈತನ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿರುವ ಆಯ್ಕೆ ಸಮಿತಿ ಅವಕಾಶ ಮಾಡಿ ಕೊಟ್ಟಿದೆ. ಐಪಿಎಲ್ನಲ್ಲಿಯೂ ತನ್ನ ವಿಶಿಷ್ಟ ಕ್ರಿಕೆಟಿಂಗ್ ಶಾಟ್ಗಳಿಂದ ಗಮನ ಸೆಳೆದಿದ್ದು, 1 ಶತಕ ಹಾಗೂ 8 ಅರ್ಧಶತಕಗಳನ್ನು ದಾಖಲಿಸಿದ್ದಾರೆ.
ತಂಡಗಳು : ಭಾರತ : ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಇಶಾನ್ ಕಿಶನ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್, ಮೊಹಮ್ಮದ್ ಸಿರಾಜ್
ವೆಸ್ಟ್ ಇಂಡೀಸ್ : ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಗೆನರೈನ್ ಚಂದ್ರಪಾಲ್, ರೇಮನ್ ರೈಫರ್, ಜೆರ್ಮೈನ್ ಬ್ಲಾಕ್‌ವುಡ್, ಅಲಿಕ್ ಅಥಾನಾಜೆ, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ರಹಕೀಮ್ ಕಾರ್ನ್‌ವಾಲ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಜೋಮೆಲ್ ವಾರಿಕನ್
ಇದನ್ನೂ ಓದಿ : 12 ವರ್ಷಗಳ ಹಳೆಯ ವೆಸ್ಟ್ ಇಂಡೀಸ್ ಪ್ರವಾಸದ ಕ್ಷಣಗಳನ್ನು ಮೆಲುಕು ಹಾಕಿದ ರಾಹುಲ್ & ವಿರಾಟ್..