ತಿರುವನಂತಪುರಂ(ಕೇರಳ): ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ಸಜ್ಜಾಗಿದೆ. ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ಮತ್ತು ಅಭಿಮಾನಿಗಳ ಅದ್ಧೂರಿ ಸ್ವಾಗತದ ನಡುವೆ ಭಾರತ ಕ್ರಿಕೆಟ್ ತಂಡ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಇಂದು ಅಭ್ಯಾಸ ಆರಂಭಿಸಿದೆ.
ಸೆಪ್ಟೆಂಬರ್ 28 ರಂದು ಇಲ್ಲಿಯ ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ದಕ್ಷಿಣ ಆಫ್ರಿಕ ವಿರುದ್ಧ ಭಾರತ ತಂಡ ಕಣಕ್ಕಿಳಿಯಲಿದೆ. ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಕೂಡ ಭಾನುವಾರ ರಾಜ್ಯ ರಾಜಧಾನಿ ತಲುಪಿದ್ದು, ಇಂದು ಅದು ಕೂಡ ಅಭ್ಯಾಸ ಆರಂಭಿಸಿದೆ.
ಟೀಂ ಇಂಡಿಯಾ ಇಂದು ಈಗಾಗಲೇ ಅಭ್ಯಾಸಕ್ಕಾಗಿ ಮೈದಾನವನ್ನು ತಲುಪಲಿದೆ. ಸಂಜೆ 5 ರಿಂದ ರಾತ್ರಿ 8 ರವರೆಗೆ ಅಭ್ಯಾಸ ನಡೆಸಲಿದೆ. ಆದರೆ, ಎದುರಾಳಿ ದಕ್ಷಿಣ ಆಫ್ರಿಕ ತಂಡವು ಮಧ್ಯಾಹ್ನ 1.00 ರಿಂದ 4.00 ರವರೆಗೆ ಮೈದಾನದಲ್ಲಿ ಅಭ್ಯಾಸ ನಡೆಸಲಿದೆ ಎಂದು ಕೆಸಿಎ ಪ್ರಕಟಣೆಯಲ್ಲಿ ತಿಳಿಸಿದೆ.
ಮೊದಲ ಪಂದ್ಯ ಆರಂಭಕ್ಕೂ ಮುನ್ನ ಇಂದು ಸಂಜೆ ಉಭಯ ತಂಡಗಳ ನಾಯಕರು ಸುದ್ದಿಗಾರರನ್ನು ಭೇಟಿ ಮಾಡಲಿದ್ದಾರೆ. ಕ್ರೀಡಾಂಗಣವು 55,000 ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಪಂದ್ಯಕ್ಕೆ ಕೇವಲ 2,000 ಟಿಕೆಟ್‌ಗಳು ಮಾತ್ರ ಉಳಿದಿವೆ ಎಂದು ಕೆಸಿಎ ತಿಳಿಸಿದೆ.
-
Look who we spotted at our #GatewayToGoodness!#ThiruvananthapuramAirport warmly welcomes the Indian and South African cricket team members, as we eagerly look forward to another nail-biting face-off. All the best to both sides! #CricketTeam #Cricket #Sports #Match #FaceOff pic.twitter.com/d8diYxt57o
— Thiruvananthapuram International Airport (@TRV_Airport_Off) September 26, 2022 " class="align-text-top noRightClick twitterSection" data="
">Look who we spotted at our #GatewayToGoodness!#ThiruvananthapuramAirport warmly welcomes the Indian and South African cricket team members, as we eagerly look forward to another nail-biting face-off. All the best to both sides! #CricketTeam #Cricket #Sports #Match #FaceOff pic.twitter.com/d8diYxt57o
— Thiruvananthapuram International Airport (@TRV_Airport_Off) September 26, 2022Look who we spotted at our #GatewayToGoodness!#ThiruvananthapuramAirport warmly welcomes the Indian and South African cricket team members, as we eagerly look forward to another nail-biting face-off. All the best to both sides! #CricketTeam #Cricket #Sports #Match #FaceOff pic.twitter.com/d8diYxt57o
— Thiruvananthapuram International Airport (@TRV_Airport_Off) September 26, 2022
ಭಾರತ ತಂಡವನ್ನು ಕೇರಳ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರೆಜಿತ್ ರಾಜೇಂದ್ರನ್ ಮತ್ತು ತಿರುವನಂತಪುರಂ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಮೇಲಿನ ಹಂತ 1,500 ರೂ., ಪೆವಿಲಿಯನ್ 2,750 ರೂ. ಮತ್ತು ಗ್ರ್ಯಾಂಡ್‌ಸ್ಟ್ಯಾಂಡ್ (ಆಹಾರದ ವೆಚ್ಚ ಸೇರಿದಂತೆ) 6,000 ರೂ. ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಬಾಜ್ ಅಹ್ಮದ್, ಆರ್. ಅಶ್ವಿನ್, ಯಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.
ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ಟ್ರಿಸ್ಟಾನ್ ಸ್ಟಬ್ಸ್.
ಸ್ಥಳ ಮತ್ತು ಸಮಯ: ತಿರುವನಂತಪುರಂನ ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಾಳೆ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.
ಇದನ್ನೂ ಓದಿ: ಇಂಗ್ಲೆಂಡ್ನಲ್ಲಿ ಭಾರತ ಮಹಿಳಾ ಕ್ರಿಕೆಟರ್ ತಾನಿಯಾ ಭಾಟಿಯಾರ ಬ್ಯಾಗ್ ಕಳವು: ದೂರು