ಕೊಲಂಬೊ (ಶ್ರೀಲಂಕಾ) : ಪುರುಷರ ಉದಯೋನ್ಮುಖ ಏಷ್ಯಾಕಪ್ 2023ರ ಸೆಮಿಫೈನಲ್ 2 ಪಂದ್ಯದಲ್ಲಿ ಭಾರತ ಎ ಮತ್ತು ಬಾಂಗ್ಲಾದೇಶ ಎ ತಂಡಗಳು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಬಾಂಗ್ಲಾದೇಶ ಎ ತಂಡದ ನಾಯಕ ಸೈಫ್ ಹಸನ್, ಮೊದಲು ಭಾರತವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ಎ ತಂಡವು ಸೀಮಿತ 49.1 ಓವರ್ನಲ್ಲಿ ಅಲೌಟ್ ಆಗುವ ಮೂಲಕ ಬಾಂಗ್ಲಾ ತಂಡಕ್ಕೆ 211 ರನ್ಗಳ ಟಾರ್ಗೆಟ್ ನೀಡಿದೆ.
-
🚨 Toss Update from Colombo 🚨
— BCCI (@BCCI) July 21, 2023 " class="align-text-top noRightClick twitterSection" data="
Bangladesh 'A' win the toss and elect to bowl first.
Follow the match - https://t.co/XnH1m6JqPM#ACCMensEmergingTeamsAsiaCup | #ACC pic.twitter.com/rs1jA4LI8l
">🚨 Toss Update from Colombo 🚨
— BCCI (@BCCI) July 21, 2023
Bangladesh 'A' win the toss and elect to bowl first.
Follow the match - https://t.co/XnH1m6JqPM#ACCMensEmergingTeamsAsiaCup | #ACC pic.twitter.com/rs1jA4LI8l🚨 Toss Update from Colombo 🚨
— BCCI (@BCCI) July 21, 2023
Bangladesh 'A' win the toss and elect to bowl first.
Follow the match - https://t.co/XnH1m6JqPM#ACCMensEmergingTeamsAsiaCup | #ACC pic.twitter.com/rs1jA4LI8l
ಬಾಂಗ್ಲಾ ಪರ ಬೀಗಿ ಬೌಲಿಂಗ್ ದಾಳಿ ಮುಂದುವರೆಸಿರುವ ಬೌಲರ್ಸ್ ಭಾರತ ತಂಡದ ರನ್ ವೇಗಕ್ಕೆ ಬ್ರೇಕ್ ಹಾಕಿದ್ದಾರೆ. ಅತ್ಯಂತ ನಿಧಾನಗತಿಯ ಆರಂಭ ಶುರು ಮಾಡಿದ ಭಾರತ ಸಾಯಿ ಸುದರ್ಶನ್ 21 ರನ್ಗೆ ತಂಜೀಮ್ ಹಸನ್ ಸಾಕಿಬ್ ಬೌಲಿಂಗ್ ವಿಕೆಟ್ ಒಪ್ಪಿಸಿದರೆ, 34 ರನ್ ಹೊಡೆದಿದ್ದ ಅಭಿಷೇಕ್ ಶರ್ಮಾ ಸಾಕಿಬ್ ಬಿ ರಾಕಿಬುಲ್ ಹಸನ್ಗೆ ವಿಕೆಟ್ ನೀಡಿದರು. ಸೈಫ್ ಹಾಸನ್ ಬೌಲಿಂಗ್ನಲ್ಲಿ ನಿಕಿನ್ ಜೋಸ್ 17 ರನ್ಗೆ ಆಟ ನಿಲ್ಲಿಸಿ ಪೆವಿಲಿಯನ್‌ಗೆ ಮರಳಿದರು. ನಿಶಾಂತ್ ಸಿಂಧು 2 ರನ್ ಗಳಿಸಿ ರಕಿಬುಲ್ ಹಸನ್ ಎಸೆತದಲ್ಲಿ ಔಟ್ ಆಗಿದ್ದು, ತಂಡಕ್ಕೆ ಆಸರೆಯಾಗಬೇಕಿದ್ದ ರಿಯಾನ್ ಪರಾಗ್ ಕೂಡ 12 ರನ್ಗೆ ಹಸನ್ ಸಾಕಿಬ್ ಬೌಲಿಂಗ್ನಲ್ಲಿ ತಂಜಿಮ್ಗೆ ಕ್ಯಾಚ್ ಕೊಟ್ಟರು.
-
A look at the Playing XI of India 'A' for Semi-Final 2 👌👌
— BCCI (@BCCI) July 21, 2023 " class="align-text-top noRightClick twitterSection" data="
Follow the match - https://t.co/XnH1m6JqPM#ACCMensEmergingTeamsAsiaCup | #ACC pic.twitter.com/KMBVf6Jshm
">A look at the Playing XI of India 'A' for Semi-Final 2 👌👌
— BCCI (@BCCI) July 21, 2023
Follow the match - https://t.co/XnH1m6JqPM#ACCMensEmergingTeamsAsiaCup | #ACC pic.twitter.com/KMBVf6JshmA look at the Playing XI of India 'A' for Semi-Final 2 👌👌
— BCCI (@BCCI) July 21, 2023
Follow the match - https://t.co/XnH1m6JqPM#ACCMensEmergingTeamsAsiaCup | #ACC pic.twitter.com/KMBVf6Jshm
ಇನ್ನು ಮಹೇದಿ ಹಸನ್ ಎಸೆತದಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಧ್ರುವ್ ಜುರೆಲ್ ಕೇವಲ ಒಂದೇ ಒಂದು ರನ್ ಹೊಡೆದು ಎಲ್ಬಿಡಬ್ಲ್ಯೂಗೆ ಬಲಿಯಾದರು. ಬಳಿಕ ಹರ್ಷಿತ್ ರಾಣಾ ಕೂಡ 9 ರನ್ ಇರುವಾಗ ಮಹೇದಿ ಹಸನ್ಗೆ ವಿಕೆಟ್ ಒಪ್ಪಿಸಿದರು. ಮಾನವ್ ಸುತಾರ್ 21 ರನ್ ಆಟವಾಡುವಾಗ ರನ್ ಔಟ್ ಆದರೆ, ಬಳಿಕ ಬಂದ ಆರ್.ಎಸ್ ಹಂಗಾರಗೇಕರ 15 ರನ್ ಪೇರಿಸಿ ಸೌಮ್ಯ ಸರ್ಕಾರ್ ಎಸೆತದಲ್ಲಿ ಪೆವಿಲಿಯನ್ ಕಡೆ ಹಜ್ಜೆ ಹಾಕಿದರು. ಮತ್ತೊಂದು ಕಡೆ ವಿಕೆಟ್ ಬೀಳುತ್ತಿದ್ದರೂ ವಿಕೆಟ್ ನೀಡದೆ ಯುಎಇ ಎ ತಂಡದ ವಿರುದ್ಧ ಅಬ್ಬರದ ಆಟವಾಡಿ ಶತಕ ಸಿಡಿಸಿದ್ದ, ನಾಯಕ ಯಶ್ ಧುಲ್ ಅರ್ಧಶತಕ ಪೂರೈಸಿದ್ದು, ತಂಡಕ್ಕೆ 66 ರನ್ ಕೊಡುಗೆ ನೀಡಿ ತಂಡಕ್ಕೆ ಆಸರೆಯಾದರು.
-
Abhishek Sharma departs after a steady start 👏
— BCCI (@BCCI) July 21, 2023 " class="align-text-top noRightClick twitterSection" data="
India 'A' 79/3 after 20 overs.
Follow the match - https://t.co/XnH1m6JqPM#ACCMensEmergingTeamsAsiaCup | #ACC pic.twitter.com/MI3dsS6Vid
">Abhishek Sharma departs after a steady start 👏
— BCCI (@BCCI) July 21, 2023
India 'A' 79/3 after 20 overs.
Follow the match - https://t.co/XnH1m6JqPM#ACCMensEmergingTeamsAsiaCup | #ACC pic.twitter.com/MI3dsS6VidAbhishek Sharma departs after a steady start 👏
— BCCI (@BCCI) July 21, 2023
India 'A' 79/3 after 20 overs.
Follow the match - https://t.co/XnH1m6JqPM#ACCMensEmergingTeamsAsiaCup | #ACC pic.twitter.com/MI3dsS6Vid
ಬಾಂಗ್ಲಾ ಪರ ಸಂಘಟಿತ ಬೌಲಿಂಗ್ ದಾಳಿ ನಡೆಸಿ ಮಾಹೆ ಡೀ ಹಸನ್, ತಂಝಿಮ್ ಹಸನ್ ಸಾಕಿಬ್, ರಕಿಬುಲ್ ಹಸನ್ ಮೂವರು ತಲಾ 2 ವಿಕೆಟ್ ಪಡೆದರೆ, ರಿಪಾನ್ ಮೊಂಡೋಲ್, ಸೈಫ್ ಹಸನ್ ಹಾಗು ಸೌಮ್ಯ ಸರ್ಕಾರ್ ಒಂದೊಂದು ವಿಕೆಟ್ ಪಡೆದು ಭಾರತ ಎ ಅಲೌಟ್ ಆಗಲು ಕಾರಣವಾದರು. 2 ಓವರ್ ಎಸೆದು ವಿಕೆಟ್ ಪಡೆಯುವಲ್ಲಿ ವಿಫಲವಾದ ಮಹಮ್ಮದುಲ್ ಹಸನ್ ಜಾಯ್ ಕೇವಲ 9 ರನ್ ನೀಡಿ ಗಮನ ಸೆಳೆದರು.
-
Hello from Colombo 👋
— BCCI (@BCCI) July 21, 2023 " class="align-text-top noRightClick twitterSection" data="
Inching closer to Semi-Final 2 of the #ACCMensEmergingTeamsAsiaCup 🙌
India 'A' face Bangladesh 'A' at the R. Premadasa Stadium 🏟️👌 #ACC pic.twitter.com/QcF2UKiOLv
">Hello from Colombo 👋
— BCCI (@BCCI) July 21, 2023
Inching closer to Semi-Final 2 of the #ACCMensEmergingTeamsAsiaCup 🙌
India 'A' face Bangladesh 'A' at the R. Premadasa Stadium 🏟️👌 #ACC pic.twitter.com/QcF2UKiOLvHello from Colombo 👋
— BCCI (@BCCI) July 21, 2023
Inching closer to Semi-Final 2 of the #ACCMensEmergingTeamsAsiaCup 🙌
India 'A' face Bangladesh 'A' at the R. Premadasa Stadium 🏟️👌 #ACC pic.twitter.com/QcF2UKiOLv
ತಂಡಗಳು; ಭಾರತ ಎ ಪ್ಲೇಯಿಂಗ್ ಇಲೆವೆನ್ : ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ನಿಕಿನ್ ಜೋಸ್, ಯಶ್ ಧುಲ್ (ನಾಯಕ), ರಿಯಾನ್ ಪರಾಗ್, ನಿಶಾಂತ್ ಸಿಂಧು, ಧ್ರುವ್ ಜುರೆಲ್ (ವಿಕೀ), ಮಾನವ್ ಸುತಾರ್, ಹರ್ಷಿತ್ ರಾಣಾ, ಯುವರಾಜ್‌ಸಿನ್ಹ್ ದೊಡಿಯಾ, ಆರ್‌ಎಸ್ ಹಂಗರ್ಗೆಕಾ
-
Innings Break!
— BCCI (@BCCI) July 21, 2023 " class="align-text-top noRightClick twitterSection" data="
Captain Yash Dhull's impressive 66 helps India 'A' set a target of 2⃣1⃣2⃣ for Bangladesh 'A'!
Stay tuned for the chase.
Scorecard - https://t.co/XnH1m6JqPM#ACCMensEmergingTeamsAsiaCup | #ACC pic.twitter.com/JOpsgEK9ws
">Innings Break!
— BCCI (@BCCI) July 21, 2023
Captain Yash Dhull's impressive 66 helps India 'A' set a target of 2⃣1⃣2⃣ for Bangladesh 'A'!
Stay tuned for the chase.
Scorecard - https://t.co/XnH1m6JqPM#ACCMensEmergingTeamsAsiaCup | #ACC pic.twitter.com/JOpsgEK9wsInnings Break!
— BCCI (@BCCI) July 21, 2023
Captain Yash Dhull's impressive 66 helps India 'A' set a target of 2⃣1⃣2⃣ for Bangladesh 'A'!
Stay tuned for the chase.
Scorecard - https://t.co/XnH1m6JqPM#ACCMensEmergingTeamsAsiaCup | #ACC pic.twitter.com/JOpsgEK9ws
ಬಾಂಗ್ಲಾದೇಶ ಎ ಪ್ಲೇಯಿಂಗ್ ಇಲೆವೆನ್ : ಮೊಹಮ್ಮದ್ ನಯಿಮ್, ತಂಜಿದ್ ಹಸನ್, ಜಾಕಿರ್ ಹಸನ್, ಸೈಫ್ ಹಸನ್ (ನಾಯಕ), ಮಹಮ್ಮದುಲ್ ಹಸನ್ ಜಾಯ್, ಸೌಮ್ಯ ಸರ್ಕಾರ್, ಅಕ್ಬರ್ ಅಲಿ (ವಿಕೀ), ಮಾಹೆ ಡೀ ಹಸನ್, ರಕಿಬುಲ್ ಹಸನ್, ತಂಜಿಮ್ ಹಸನ್ ಸಾಕಿಬ್, ರಿಪಾನ್ ಮೊಂಡೋಲ್
ಇದನ್ನೂ ಓದಿ : Virat Kohli: ಜಾಕ್ವೆಸ್ ಕಾಲಿಸ್ ದಾಖಲೆ ಮುರಿದು ಮುನ್ನುಗ್ಗಿದ ಕೊಹ್ಲಿ; 25,500 ರನ್ ಪೂರ್ಣಗೊಳಿಸಿದ ಭಾರತದ 2ನೇ ಆಟಗಾರ!