ಕಾನ್ಪುರ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ದಿನ ಶ್ರೇಯಸ್ ಅಯ್ಯರ್ (75) ಮತ್ತು ರವೀಂದ್ರ ಜಡೇಜಾ (50) ಅವರ ಅಜೇಯ ಅರ್ಧಶತಕದ ನೆರವಿನಿಂದ 4 ವಿಕೆಟ್ ಕಳೆದುಕೊಂಡು 258 ರನ್ಗಳಿಸಿ ಉತ್ತಮ ಆರಂಭ ಪಡೆದಿದೆ.
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರಹಾನೆ ಮೊದಲಿಗೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ ಮಯಾಂಕ್ ಅಗರ್ವಾಲ್ ಕೇವಲ 13 ರನ್ಗಳಿಸಿ ಕೈಲ್ ಜೇಮಿಸನ್‌ಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಶೆ ಅನುಭವಿಸಿದರು.
-
STUMPS on Day 1 of the 1st Test.
— BCCI (@BCCI) November 25, 2021 " class="align-text-top noRightClick twitterSection" data="
An unbeaten 113-run partnership between @ShreyasIyer15 & @imjadeja propel #TeamIndia to a score of 258/4 on Day 1.
Scorecard - https://t.co/WRsJCUhS2d #INDvNZ @Paytm pic.twitter.com/7dNdUM0HkM
">STUMPS on Day 1 of the 1st Test.
— BCCI (@BCCI) November 25, 2021
An unbeaten 113-run partnership between @ShreyasIyer15 & @imjadeja propel #TeamIndia to a score of 258/4 on Day 1.
Scorecard - https://t.co/WRsJCUhS2d #INDvNZ @Paytm pic.twitter.com/7dNdUM0HkMSTUMPS on Day 1 of the 1st Test.
— BCCI (@BCCI) November 25, 2021
An unbeaten 113-run partnership between @ShreyasIyer15 & @imjadeja propel #TeamIndia to a score of 258/4 on Day 1.
Scorecard - https://t.co/WRsJCUhS2d #INDvNZ @Paytm pic.twitter.com/7dNdUM0HkM
ಗಿಲ್-ಪೂಜಾರ ಅರ್ಧಶತಕದ ಜೊತೆಯಾಟ
21ರನ್ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಯುವ ಬ್ಯಾಟರ್ ಶುಬ್ಮನ್ ಗಿಲ್ ಮತ್ತು ಪೂಜಾರ 2ನೇ ವಿಕೆಟ್ಗೆ 61 ರನ್ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ಆದರೆ ಭೋಜನ ವಿರಾಮದ ಬಳಿಕ 93 ಎಸೆತಗಳಲ್ಲಿ 5ಬೌಂಡರಿ ಮತ್ತು 1 ಸಿಕ್ಸರ್ ಸಹಿತ 52 ರನ್ಗಳಿಸಿದ್ದ ಗಿಲ್ ಜೇಮಿಸನ್‌ಗೆ 2ನೇ ಬಲಿಯಾದರೆ 26 ರನ್ಗಳಿಸಿದ್ದ ಪೂಜಾರ ಸೌಥಿಗೆ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ನಾಯಕ ಅಜಿಂಕ್ಯ ರಹಾನೆ ಕೂಡ 63 ಎಸೆತಗಳಲ್ಲಿ 35 ರನ್ಗಳಿಸಿ ಜೇಮಿಸನ್‌ಗೆ 3ನೇ ಬಲಿಯಾದರು.
ಶತಕದ ಜೊತೆಯಾಟದ ಮೂಲಕ ಕಿವೀಸ್ ಕಾಡಿದ ಅಯ್ಯರ್-ಜಡೇಜಾ
81ಕ್ಕೆ1 ವಿಕೆಟ್ ಇದ್ದ ಭಾರತ ತಂಡ 154 ರನ್ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಆದರೆ ಈ ಸಂದರ್ಭದಲ್ಲಿ ಒಂದಾದ ಪದಾರ್ಪಣೆ ಬ್ಯಾಟರ್ ಶ್ರೇಯಸ್ ಮತ್ತು ಜಡೇಜಾ ಜೋಡಿ ಕಿವೀಸ್ ಬೌಲರ್ಗಳನ್ನು ಯಶಸ್ವಿಯಾಗಿ ಎದುರಿಸಿ 5ನೇ ವಿಕೆಟ್ಗೆ ಮುರಿಯದ 113 ರನ್ಗಳ ಜೊತೆಯಾಟ ನಡೆಸಿದ್ದಾರೆ. ಶ್ರೇಯಸ್ ಅಯ್ಯರ್ 136 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ ಅಜೇಯ 75 ಮತ್ತು ಜಡೇಜಾ 100 ಎಸೆತಗಳಲ್ಲಿ ಅಜೇಯ 50 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.