ETV Bharat / sports

ಸೆಮಿಸ್​ಗಾಗಿ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಕೌರ್​ ಪಡೆ: ಐರ್ಲೆಂಡ್ ಮೇಲೆ ಗೆಲುವಿನ ಇತಿಹಾಸ

author img

By

Published : Feb 20, 2023, 10:10 AM IST

ಸೆಮೀಸ್​ ಪ್ರವೇಶಕ್ಕೆ ಇಂದಿನ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಭಾರತದ ವನಿತೆಯರು - ಐರ್ಲೆಂಡ್​ ಎದುರಿನ ಮುಖಾಮುಖಿಯಲ್ಲಿ ಗೆಲುವಿನ ಇತಿಹಾಸ - ಫಾರ್ಮ್​ನಲ್ಲಿರುವ ವಿಕೆಟ್​ ಕೀಪರ್​ ರಿಚಾ ಘೋಷ್​​

ind-w-vs-ire-w-match-live-update-live-score-women-t20-world-cup-2023
ಐರ್ಲೆಂಡ್ ಮೇಲೆ ಗೆಲುವಿನ ಇತಿಹಾಸ

ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ಮಹಿಳಾ ವಿಶ್ವ ಕಪ್​ನ 8ನೇ ಆವೃತ್ತಿ ಸೆಮೀಸ್​ ನಿರ್ಣಯದ ಕಣಕ್ಕೆ ತಲುಪಿದೆ. ಭಾರತ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ 11 ರನ್​ನಿಂದ ಸೋಲನುಭವಿಸಿ ಸೆಮೀಸ್​ ಪ್ರವೇಶದಿಂದ ವಂಚಿತವಾಗಿತ್ತು. ಇಂದು ಐರ್ಲೆಂಡ್​ ವಿರುದ್ಧ ಭಾರತೀಯ ವನಿತೆಯರು ಕಣಕ್ಕಿಳಿಯುತ್ತಿದ್ದು, ಉತ್ತಮ ರನ್​ ರೇಟ್​ನಿಂದ ಗೆಲ್ಲುವ ಅಗತ್ಯ ಇದೆ.

ಭಾರತ ಮತ್ತು ಐರ್ಲೆಂಡ್ ನಡುವಿನ ಪಂದ್ಯವು ಸೇಂಟ್ ಜಾರ್ಜ್ ಪಾರ್ಕ್ ಗೆಕೆಬೆರಾದಲ್ಲಿ ಸಂಜೆ 6:30 ಕ್ಕೆ ನಡೆಯಲಿದೆ. ಭಾರತ ಮಹಿಳಾ ತಂಡ ವಿಶ್ವಕಪ್‌ನಲ್ಲಿ ಇದುವರೆಗೆ ಎರಡು ಪಂದ್ಯಗಳನ್ನು ಗೆದ್ದು ಬಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಮೂರು ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್​ ಪ್ರಥಮ ಸ್ಥಾನದಲ್ಲಿದ್ದು, ಸೆಮಿಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ.

ಐಸಿಸಿ ಶ್ರೇಯಾಂಕದಲ್ಲಿ 10ನೇ ಸ್ಥಾನದಲ್ಲಿರುವ ಐರ್ಲೆಂಡ್​ ಈಗಾಗಲೇ ಮೂರು ಪಂದ್ಯಗಳಲ್ಲಿ ಸೋತು ಸ್ಪರ್ಧೆಯಿಂದ ಹೊರಬಿದ್ದಿದೆ. ಭಾರತಕ್ಕೆ ಪಾಕಿಸ್ತಾನ ಸ್ಪರ್ಧಾಳುವಾಗಿದೆ. ಭಾರತ ಒಂದು ವೇಳೆ ಈ ಪಂದ್ಯದಲ್ಲಿ ಸೋತರ ಪಾಕಿಸ್ತಾನಕ್ಕೆ ಸೆಮೀಸ್​ ಅವಕಾಶ ಸಾಧ್ಯತೆ ಇದೆ. ಪಾಕ್​ಗೆ ಇಂಗ್ಲೆಂಡ್​ ಮೇಲೆ ಕೊನೆಯ ಪಂದ್ಯ (ಫೆಬ್ರವರಿ 21) ಇದ್ದು ಅದರಲ್ಲಿ, ಜಯಿಸಿದರೆ 4 ಅಂಕ ಆಗಲಿದೆ. ಪಾಕ್​ +0.981 ರನ್​ ರೇಟ್​ ಇರುವುದರಿಂದ ಭಾರತವನ್ನು ಮೂರನೇ ಸ್ಥಾನಕ್ಕೆ ತಳ್ಳಿ ಸೆಮೀಸ್​ ಪ್ರವೇಶ ಪಡೆಯಲಿದೆ.

ಇಲ್ಲಿಯವರೆಗೆ ಭಾರತ ಮತ್ತು ಐರ್ಲೆಂಡ್ (IND vs IRE) ಒಂದು ಪಂದ್ಯವನ್ನು ಆಡಿದೆ. 15 ನವೆಂಬರ್ 2018 ರಂದು ಮಹಿಳಾ ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ 52 ರನ್‌ಗಳಿಂದ ಐರ್ಲೆಂಡ್ ತಂಡವನ್ನು ಸೋಲಿಸಿತು. ಪಂದ್ಯದಲ್ಲಿ ಮಿಥಾಲಿ ರಾಜ್ 56 ಎಸೆತಗಳಲ್ಲಿ 51 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಮೊದಲೆರಡು ಪಂದ್ಯದಲ್ಲಿ ಟಾಸ್​ ಸೋತು ಪಂದ್ಯ ಗೆದ್ದಿದ್ದ ಭಾರತ, ಇಂಗ್ಲೆಂಡ್​ ವಿರುದ್ಧ ಟಾಸ್​ ಗೆದ್ದು ಪಂದ್ಯದಲ್ಲಿ ಸೋಲನುಭವಿಸಿತು. ಸತತ ಮೂರು ಪಂದ್ಯಗಳಿಂದ ವಿಕೆಟ್​ ಕೀಪರ್ ರಿಚಾ ಘೋಷ್​ 30+ ರನ್​ ಮಾಡುತ್ತಿದ್ದು ಭಾರತಕ್ಕೆ ಆಸರೆಯಾಗಿದ್ದಾರೆ. ಬೌಲಿಂಗ್​ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು, ಆಂಗ್ಲರ ವಿರುದ್ಧ ರೇಣುಕಾ ಸಿಂಗ್​ 15 ರನ್​ ಬಿಟ್ಟುಕೊಟ್ಟು 5 ವಿಕೆಟ್​ ಕಬಳಿಸಿ ಟ್ವಿ20 ವಿಶ್ವಕಪ್​ನಲ್ಲಿ ಐದು ವಿಕೆಟ್​ ಗಳಿಸಿದ ದಾಖಲೆ ಬರೆದಿದ್ದಾರೆ.

ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಮೇಲೆ 7 ವಿಕೆಟ್​ಗಳ ಜಯವನ್ನು ಸಾಧಸಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನವನ್ನು 149 ರನ್​ಗೆ ಕಟ್ಟಿಹಾಕಿದ ಭಾರತೀಯ ವನಿತೆಯರು ಕೊನೆಯ ಒಂದು ಓವರ್​ ಉಳಿಸಿಕೊಂಡು ಪಂದ್ಯ ಗೆದ್ದಿದ್ದರು. ವೆಸ್ಟ್​ ಇಂಡೀಸ್​ ಎದುರು ರಿಚಾ ಘೋಷ್​ ಮತ್ತು ನಾಯಕಿ ಕೌರ್​ ಅವರ ಅದ್ಭುತ ಪ್ರದರ್ಶನದಿಂದ ಗೆಲುವು ದಾಖಲಾಗಿತ್ತು. ಇಂಗ್ಲೆಂಡ್​ ಮೇಲೆ ಕೇವಲ 11 ರನ್​ಗಳಿಂದ ಭಾರತ ಸೋಲನುಭವಿಸಿತ್ತು. ಇಂದಿನ ಪಂದ್ಯದಲ್ಲಿ ಗೆಲ್ಲುವ ಫೆವ್​ರೀಟ್​​​ ತಂಡ ಭಾರತವೇ ಆಗಿದೆ. ಪಂದ್ಯ ಭಾರತೀಯ ಕಾಲಮಾನ 6:30ಕ್ಕೆ ಆರಂಭವಾಗಲಿದೆ. ದಕ್ಷಿಣ ಆಫ್ರಿಕಾದ ಸೇಂಟ್ ಜಾರ್ಜ್ ಪಾರ್ಕ್ ಗೆಕೆಬೆರಾದಲ್ಲಿ ಆಯೋಜಿಸಲಾಗಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲಿ 5 ವಿಕೆಟ್‌ ಗೊಂಚಲು! ಪಂದ್ಯ ಸೋತರೂ ಮನಸ್ಸು ಗೆದ್ದ ರೇಣುಕಾ ಸಿಂಗ್‌​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.