ETV Bharat / sports

ZIM vs IND 2nd ODI: ಟೀಂ ಇಂಡಿಯಾ ಮಾರಕ ಬೌಲಿಂಗ್​​.. 161ರನ್​ಗಳಿಗೆ ಜಿಂಬಾಬ್ವೆ ಆಲೌಟ್​

ಹರಾರೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲೂ ಜಿಂಬಾಬ್ವೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಕೇವಲ 161ರನ್​​​ಗಳಿಗೆ ಆಲೌಟ್​ ಆಗಿದೆ.

Zimbabwe vs India 2nd ODI
Zimbabwe vs India 2nd ODI
author img

By

Published : Aug 20, 2022, 4:15 PM IST

ಹರಾರೆ(ಜಿಂಬಾಬ್ವೆ): ಆತಿಥೇಯ ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಬೌಲರ್ ಪಾರಮ್ಯ ಮೆರೆದಿದ್ದಾರೆ. ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಟೀಂ ಇಂಡಿಯಾ ಎದುರಾಳಿ ತಂಡವನ್ನ ಕೇವಲ 161ರನ್​​​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.

ಹರಾರೆಯ ಸ್ಪೋರ್ಟ್ಸ್​​ ಕ್ಲಬ್​ ಮೈದಾನದಲ್ಲಿ ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಟೀಂ ಇಂಡಿಯಾ ಮಾರಕ ಬೌಲಿಂಗ್​ ಎದುರಿಸುವಲ್ಲಿ ವಿಫಲವಾದ ಜಿಂಬಾಬ್ವೆ 38.1 ಓವರ್​​​​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 161ರನ್​​ಗಳಿಸಿದೆ. ತಂಡದ ಪರ ಸೇನ್​ ವಿಲಿಯನ್ಸ್​​​(42) ಹಾಗೂ ಬುರ್ಲೆ(39) ವೈಯಕ್ತಿಕ ಗರಿಷ್ಠ ಸ್ಕೋರ್​ರ ಆಗಿದ್ದಾರೆ. ಆರಂಭಿಕರಾದ ಕೈಟಿನೊ(7), ಇನೊಸಿಟ್​(16) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲೂ ಮಾದವೀರ್​(2), ಚಕುಬಾ(2) ನಿರಾಸೆ ಅನುಭವಿಸಿದರು.

ಅನುಭವಿ ಸಿಕಂದರ್ ರಾಜಾ(16) ತಂಡಕ್ಕೆ ಹೇಳಿಕೊಳ್ಳುವಂತಹ ಕಾಣಿಕೆ ನೀಡಲಿಲ್ಲ. 6ನೇ ವಿಕೆಟ್​​ಗೆ ಒಂದಾದ ವಿಲಿಯಮ್ಸ್​​(42) ಹಾಗೂ ಬುರ್ಲೆ(39) ತಂಡವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇವರ ವಿಕೆಟ್​ ಪತನಗೊಳ್ಳುತ್ತಿದ್ದಂತೆ ಜಾಂಗ್ವೆ(6), ಬ್ರಾಂಡ್​(9), ತನಕ್​​(4) ವಿಕೆಟ್​ ಒಪ್ಪಿಸಿದರು. ಟೀಂ ಇಂಡಿಯಾ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಶಾರ್ದೂಲ್ ಠಾಕೂರ್​ 3 ವಿಕೆಟ್ ಪಡೆದರೆ, ಸಿರಾಜ್, ಪ್ರಸಿದ್ಧ ಕೃಷ್ಣ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್ ಹಾಗೂ ದೀಪಕ್ ಹೂಡಾ ತಲಾ 1 ವಿಕೆಟ್ ಪಡೆದುಕೊಂಡರು.

ಇದನ್ನೂ ಓದಿ: IND vs ZIM ODI: ಧವನ್​- ಗಿಲ್​​ ಜೊತೆಯಾಟ.. ಜಿಂಬಾಬ್ವೆ ವಿರುದ್ಧ 10 ವಿಕೆಟ್​ ಜಯ

ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್​ಗಳ ಗೆಲುವು ದಾಖಲು ಮಾಡಿದ್ದು, ಈ ಪಂದ್ಯದಲ್ಲಿ ಚಹರ್, ಕೃಷ್ಣ ಹಾಗೂ ಅಕ್ಸರ್ ತಲಾ 3 ವಿಕೆಟ್ ಪಡೆದುಕೊಂಡಿದ್ದರು. ಬ್ಯಾಟಿಂಗ್​ನಲ್ಲಿ ಮಿಂಚಿದ್ದ ಧವನ್​(81), ಶುಬಮನ್ ಗಿಲ್​(82)ರನ್​​ಗಳಿಕೆ ಮಾಡಿದ್ದರು.

ಟೀಂ ಇಂಡಿಯಾ: ಕೆ.ಎಲ್ ರಾಹುಲ್​(ಕ್ಯಾಪ್ಟನ್​), ಶಿಖರ್ ಧವನ್​, ಶುಬ್​ಮನ್ ಗಿಲ್​​, ಇಶಾನ್ ಕಿಶನ್​, ದೀಪಕ್ ಹೂಡಾ, ಸಂಜು ಸ್ಯಾಮ್ಸನ್​(ವಿ.ಕೀ), ಅಕ್ಷರ್ ಪಟೇಲ್​, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್​, ಪ್ರಸಿದ್ಧ ಕೃಷ್ಣ, ಮೊಹಮ್ಮದ್​ ಸಿರಾಜ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.