ರೋಸೌ (ಡೊಮಿನಿಕಾ): ಇಂದಿನಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಉದಯೋನ್ಮುಖ ಪ್ರತಿಭೆ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿಯುವುದನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಖಚಿತಪಡಿಸಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25ರ ರುತುವಿನ ಮೊದಲ ಟೆಸ್ಟ್‌ನಲ್ಲಿ ಭಾರತ ಹೊಸ ಆರಂಭಿಕ ಸಂಯೋಜನೆಗೆ ಒತ್ತು ನೀಡಿದೆ. ಹೀಗಾಗಿ, ಹಿಟ್‌ಮ್ಯಾನ್ ಶರ್ಮಾ ಜೊತೆಗೆ 21 ವರ್ಷದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಪಂದ್ಯಾರಂಭ ಮಾಡುವರು.
ಜೈಸ್ವಾಲ್‌ರಿಗೆ ಈ ವರ್ಷ ವೈಟ್ ಬಾಲ್ ಕ್ರಿಕೆಟ್ ಭಾರಿ ಯಶಸ್ಸು ತಂದುಕೊಟ್ಟಿದೆ. 2023ರ ಐಪಿಎಲ್‌ನಲ್ಲಿ 48ರ ಸರಾಸರಿಯಲ್ಲಿ 163.61 ಸ್ಟ್ರೈಕ್ ರೇಟ್‌ನೊಂದಿಗೆ ಅವರು 625 ರನ್‌ಗಳನ್ನು ಗಳಿಸಿದರೆ, 26 ಪ್ರಥಮ ದರ್ಜೆ ಇನ್ನಿಂಗ್ಸ್‌ಗಳಲ್ಲಿ 80ಕ್ಕಿಂತ ಹೆಚ್ಚು ಸರಾಸರಿ ಬ್ಯಾಟ್ ಬೀಸಿದ್ದಾರೆ. ಜೈಸ್ವಾಲ್ ಕಳೆದ ವರ್ಷ ದುಲೀಪ್ ಟ್ರೋಫಿ ಫೈನಲ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 265 ರನ್ ಗಳಿಸುವ ಮೂಲಕ ರೆಡ್ ಬಾಲ್ ಕ್ರಿಕೆಟ್‌ನ ಸಾಮರ್ಥ್ಯ ತೋರಿದ್ದರು. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಅವರು ಆಯ್ಕೆ ಆಗಿಲ್ಲ. ಅವರ ಜಾಗದಲ್ಲಿ ಈ ಮೊದಲು ರೋಹಿತ್ ಜೊತೆಗೆ ಓಪನರ್ ಆಗಿದ್ದ ಶುಭಮನ್ ಗಿಲ್ ಆಡಲಿದ್ದಾರೆ.
-
India will take a new-look top-order into their World Test Championship opener against the West Indies in Dominica 👀#WTC25
— ICC (@ICC) July 12, 2023 " class="align-text-top noRightClick twitterSection" data="
Details 👇https://t.co/02uKKF0vx7
">India will take a new-look top-order into their World Test Championship opener against the West Indies in Dominica 👀#WTC25
— ICC (@ICC) July 12, 2023
Details 👇https://t.co/02uKKF0vx7India will take a new-look top-order into their World Test Championship opener against the West Indies in Dominica 👀#WTC25
— ICC (@ICC) July 12, 2023
Details 👇https://t.co/02uKKF0vx7
ಮೊದಲ ಟೆಸ್ಟ್‌ಗೂ ಮುಂಚಿತವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಂಡಿಯನ್ ಕ್ಯಾಪ್ಟನ್, "ಗಿಲ್ ಅವರು 3ನೇ ಕ್ರಮಾಂಕದಲ್ಲಿ ಆಡುತ್ತಾರೆ. ಏಕೆಂದರೆ ಗಿಲ್ ಸ್ವತಃ 3ನೇ ಕ್ರಮಾಂಕದಲ್ಲಿ ಆಡಲು ಬಯಸಿದ್ದಾರೆ. ನಾನು ನನ್ನೆಲ್ಲ ಕ್ರಿಕೆಟ್‌ಗಳನ್ನು 3 ಮತ್ತು 4ರಲ್ಲಿ ಆಡಿದ್ದೇನೆ ಎಂದು ಗಿಲ್ ರಾಹುಲ್ ದ್ರಾವಿಡ್ ಜೊತೆ ಚರ್ಚಿಸಿದ್ದಾರೆ. ನಾನು 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ ತಂಡಕ್ಕೆ ಉತ್ತಮ ಪ್ರದರ್ಶನ ನೀಡಬಹುದೆಂದು ಭಾವಿಸುತ್ತೇನೆ. ಆರಂಭದಲ್ಲಿ ಎಡ ಮತ್ತು ಬಲ ಸಂಯೋಜನೆಗೆ ಸಹಕಾರಿ ಆಗಲಿದೆ ಎಂದು ಸಲಹೆ ನೀಡಿದ್ದಾರೆ" ಎಂದು ತಿಳಿಸಿದರು.
ಭಾರತದಲ್ಲಿ ಗಂಭೀರ್, ಸೆಹ್ವಾಗ್ ಜೋಡಿ ಎಡ-ಬಲದ ಹೊಂದಾಣಿಕೆ ಹೊಂದಿತ್ತು. ನಂತರ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಬಹಳ ವರ್ಷಗಳ ಕಾಲ ಆರಂಭಿಕರಾಗಿ ತಂಡದಲ್ಲಿ ಕಾಣಿಸಿಕೊಂಡರು. ಈಗ ಜೈಸ್ವಾಲ್ ಆರಂಭಿಕರಾಗಿ ಬರುತ್ತಿರುವುದರ ಬಗ್ಗೆ ನಾಯಕ ರೋಹಿತ್ ಸಂತಸ ವ್ಯಕ್ತಪಡಿಸಿದ್ದಲ್ಲದೇ ಬಹಳ ವರ್ಷಗಳಿಂದ ಭಾರತ ಎಡ-ಬಲ ಜೋಡಿಯನ್ನು ಹುಡುಕುತ್ತಿತ್ತು ಎಂದಿದ್ದಾರೆ. ಅಲ್ಲದೇ ದೀರ್ಘ ಸಮಯ ಆರಂಭಿಕರಾಗಿ ಜೈಸ್ವಾಲ್ ಭಾರತದ ಜೊತೆ ಇರುತ್ತಾರೆ ಎಂಬ ಸಂದೇಶವನ್ನೂ ನೀಡಿದ್ದಾರೆ.
ರೋಹಿತ್ ಪ್ರಕಾರ, ಭಾರತವು ಮೊದಲ ಟೆಸ್ಟ್‌ನಲ್ಲಿ ಇಬ್ಬರು ಸ್ಪಿನ್ನರ್‌ಗಳ ಜೊತೆ ತನ್ನ ಬೌಲಿಂಗ್ ತಂಡವನ್ನು ಹೊಂದಿರಲಿದೆ. ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಎರಡು ಸ್ಪಿನ್ನರ್ ಸ್ಥಾನಗಳನ್ನು ತುಂಬುವ ನಿರೀಕ್ಷೆಯಿದೆ. ಅಕ್ಷರ್ ಪಟೇಲ್ ಸ್ಥಾನ ಸಿಗುವುದು ಅನುಮಾನ. ಆದರೆ ರೋಹಿತ್ ಶರ್ಮಾ ಯಾರ ಹೆಸರನ್ನೂ ನಿರ್ದಿಷ್ಟವಾಗಿ ತೆಗೆದುಕೊಂಡಿರದ ಕಾರಣ ಟಾಸ್ ನಂತರವೇ ತಿಳಿಯಲಿದೆ.
ವೆಸ್ಟ್ ಇಂಡೀಸ್ ವಿರುದ್ಧ ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆ.ಎಸ್. ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್ ಮತ್ತು ನವದೀಪ್ ಸೈನಿ.
ಇದನ್ನೂ ಓದಿ: ವಿಂಡೀಸ್ನಲ್ಲಿ ರೋಹಿತ್ ಶರ್ಮಾರನ್ನ ಹಾಡಿ ಹೊಗಳಿದ ಅಜಿಂಕ್ಯ ರಹಾನೆ