ETV Bharat / sports

ವಿಂಡೀಸ್‌​ ಟಿ-20 ಸರಣಿಯಿಂದ ಕೆ.ಎಲ್.ರಾಹುಲ್ ಔಟ್: ಉಪನಾಯಕನಾಗಿ ರಿಷಬ್​ ಪಂತ್​ಗೆ ಬಡ್ತಿ - rishab pant elevated as India's vice-captain

ಹೊಡಿಬಡಿ ಆಟಗಾರ ರಿಷಬ್​ ಪಂತ್​ ಮೊದಲ ಬಾರಿಗೆ ಭಾರತ ತಂಡದ ಪ್ರಮುಖ ಸ್ಥಾನಕ್ಕೆ ಲಗ್ಗೆ ಇಟ್ಟಂತಾಗಿದೆ. ಇವರಿಗೆ ಐಪಿಎಲ್​ನ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ನಾಯಕನಾದ ಅನುಭವ ಇದೆ.

rishabh-pant
rishabh-pant
author img

By

Published : Feb 15, 2022, 11:59 AM IST

ಪ್ರವಾಸಿ ವೆಸ್ಟ್ ಇಂಡೀಸ್​ ವಿರುದ್ಧ ನಡೆಯುವ ಮೂರು ಪಂದ್ಯಗಳ ಟಿ-20 ಸರಣಿಗೆ ವಿಕೆಟ್ ಕೀಪರ್​ ರಿಷಬ್​ ಪಂತ್​ಗೆ ಉಪನಾಯಕನಾಗಿ ಬಡ್ತಿ ನೀಡಲಾಗಿದೆ. ಸ್ನಾಯು ಸೆಳೆತಕ್ಕೊಳಗಾಗಿ ಸರಣಿಯಿಂದ ಹೊರಬಿದ್ದ ಕೆ.ಎಲ್.ರಾಹುಲ್​ ಬದಲಾಗಿ ರಿಷಬ್​ ಪಂತ್​ಗೆ ಈ ಸ್ಥಾನ ನೀಡಲಾಗಿದೆ.

ಈ ಮೂಲಕ ಹೊಡಿಬಡಿ ಆಟಗಾರ ರಿಷಬ್​ ಪಂತ್​ ಮೊದಲ ಬಾರಿಗೆ ಭಾರತ ತಂಡದ ಪ್ರಮುಖ ಸ್ಥಾನಕ್ಕೆ ಲಗ್ಗೆ ಇಟ್ಟಂತಾಗಿದೆ. ಈ ಇವರು​ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ನಾಯಕನಾದ ಅನುಭವ ಇದೆ.

ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ಎಲ್ಲಾ ಮಾದರಿಯ ನಾಯಕತ್ವದಿಂದ ಹಿಂದೆ ಸರಿದ ಬಳಿಕ ರೋಹಿತ್​ ಶರ್ಮಾರನ್ನು ಏಕದಿನ ಮತ್ತು ಟಿ-20 ತಂಡಕ್ಕೆ ನಾಯಕನನ್ನಾಗಿ ಘೋಷಣೆ ಮಾಡಲಾಗಿದೆ. ಅಲ್ಲದೇ, ಆರಂಭಿಕ ಆಟಗಾರ ಕೆ.ಎಲ್.ರಾಹುಲ್​ಗೆ ಉಪನಾಯಕನ ಸ್ಥಾನ ನೀಡಲಾಗಿತ್ತು.

ವೆಸ್ಟ್​ ಇಂಡೀಸ್​ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ರಾಹುಲ್ ​ಸ್ನಾಯು ಸೆಳೆತಕ್ಕೆ ಒಳಗಾಗಿ ಏಕದಿನ ಮತ್ತು ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ರಿಷಬ್​ ಪಂತ್​ಗೆ ಅದೃಷ್ಟ ಒಲಿದು ಬಂದಿದೆ.

ಸುಂದರ್​ ಬದಲಾಗಿ ಕುಲದೀಪ್​ ಯಾದವ್​: ಇನ್ನು ಆಲ್​ರೌಂಡರ್​ ಆಟಗಾರ ವಾಷಿಂಗ್ಟನ್​ ಸುಂದರ್​ ಕೂಡ ಸ್ನಾಯು ಸೆಳೆತಕ್ಕೆ ಒಳಗಾಗಿ ಸರಣಿಯಿಂದ ಹೊರಬಿದ್ದಿದ್ದು, ಸ್ಪಿನ್ನರ್​ ಕುಲದೀಪ್​ ಯಾದವ್​ರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಅಕ್ಷರ್​ ಪಟೇಲ್ ಕೂಡ ಗಾಯಗೊಂಡು​ ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದರು.

ಇದನ್ನೂ ಓದಿ: ವಿಂಡೀಸ್ ವಿರುದ್ಧದ ಟಿ-20 ಸರಣಿಯಿಂದ ವಾಷಿಂಗ್ಟನ್ ಸುಂದರ್​ ಔಟ್, ಕುಲ್ದೀಪ್​ಗೆ ಬುಲಾವ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.