ಅಹ್ಮದಾಬಾದ್(ಗುಜರಾತ್): ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಟೀಂ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಇದೀಗ ತಂಡ ಸರ್ಪಡೆಯಾಗಿದ್ದು, ನೆಟ್ನಲ್ಲಿ ಅಭ್ಯಾಸ ಆರಂಭ ಮಾಡಿದ್ದಾರೆ. ಇವರ ಜೊತೆಗೆ ಹೆಚ್ಚುವರಿಯಾಗಿ ತಂಡ ಸೇರಿಕೊಂಡಿರುವ ಮಯಾಂಕ್ ಅಗರವಾಲ್ ಹಾಗೂ ಕೋವಿಡ್ನಿಂದ ಚೇತರಿಸಿಕೊಂಡಿರುವ ನವದೀಪ್ ಸೈನಿ ಕೂಡ ತರಬೇತಿಯಲ್ಲಿ ಭಾಗಿಯಾದರು.
-
Look who are here! 🙌
— BCCI (@BCCI) February 7, 2022 " class="align-text-top noRightClick twitterSection" data="
The trio has joined the squad and sweated it out in the practice session today. 💪#TeamIndia | #INDvWI | @Paytm pic.twitter.com/Nb9Gmkx98f
">Look who are here! 🙌
— BCCI (@BCCI) February 7, 2022
The trio has joined the squad and sweated it out in the practice session today. 💪#TeamIndia | #INDvWI | @Paytm pic.twitter.com/Nb9Gmkx98fLook who are here! 🙌
— BCCI (@BCCI) February 7, 2022
The trio has joined the squad and sweated it out in the practice session today. 💪#TeamIndia | #INDvWI | @Paytm pic.twitter.com/Nb9Gmkx98f
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ರೋಹಿತ್ ಪಡೆ ಈಗಾಗಲೇ 1-0 ಅಂತರದ ಮುನ್ನಡೆ ಸಾಧಿಸಿದ್ದು, ನಾಡಿದ್ದು ಎರಡನೇ ಏಕದಿನ ಪಂದ್ಯ ಆರಂಭಗೊಳ್ಳಲಿದೆ. ತಂಡಕ್ಕೆ ಕೆಎಲ್ ರಾಹುಲ್ ಮರಳಿರುವ ಕಾರಣ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಇಶನ್ ಕಿಶನ್ ಆಡುವ 11ರ ಬಳಗದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿರಿ: 'ಹರಾಜಿನಲ್ಲಿ ಭಾಗಿಯಾಗಲು ಅನೇಕ ಫ್ರಾಂಚೈಸಿ ನನ್ನನ್ನು ಸಂಪರ್ಕಿಸಿದ್ದವು'... ವಿರಾಟ್ ಕೊಹ್ಲಿ!
ರಾಹುಲ್, ನವದೀಪ್ ಸೈನಿ ಹಾಗೂ ಮಯಾಂಕ್ ಅಗರವಾಲ್ ನೆಟ್ನಲ್ಲಿ ಅಭ್ಯಾಸ ಮಾಡುತ್ತಿರುವ ಪೋಟೋವೊಂದನ್ನ ಭಾರತೀಯ ಕ್ರಿಕೆಟ್ ಮಂಡಳಿ ಹಂಚಿಕೊಂಡಿದೆ.
ಕೋವಿಡ್ನಿಂದಾಗಿ ತಂಡದ ಆರಂಭಿಕ ಆಟಗಾರ ಶಿಖರ್ ಧವನ್, ಋತುರಾಜ್ ಗಾಯಕ್ವಾಡ್ ಹಾಗೂ ಶ್ರೇಯಸ್ ಅಯ್ಯರ್ ಕ್ವಾರಂಟೈನ್ಗೊಳಗಾಗಿದ್ದು, ಅವರು ಎರಡನೇ ಏಕದಿನ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ.