ಅಹ್ಮದಾಬಾದ್: ಭಾರತದ ಸ್ಪಿನ್ದ್ವಯರಾದ ವಾಷಿಂಗ್ಟನ್ ಸುಂದರ್ ಮತ್ತು ಯುಜ್ವೆಂದ್ರ ಚಹಲ್ ಅವರ ಕರಾರುವಾಕ್ ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಕೇವಲ 177 ರನ್ಗಳ ಸಾಧಾರಣ ಗುರಿ ನೀಡಿದೆ.
ಅದಿಕೃತವಾಗಿ ನಾಯಕತ್ವ ವಹಿಸಿಕೊಂಡ ರೋಹಿತ್ ಶರ್ಮಾ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರಕ್ಕೆ ತಕ್ಕಂತೆ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್ 3ನೇ ಓವರ್ನಲ್ಲೇ ಆರಂಭಿಕ ಶಾಯ್ ಹೋಪ್ ವಿಕೆಟ್ ಪಡೆದು ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರು.
2ನೇ ವಿಕೆಟ್ಗೆ ಒಂದಾದ ಬ್ರೆಂಡನ್ ಕಿಂಗ್ ಮತ್ತು ಬ್ರಾವೋ 31 ರನ್ಗಳ ಜೊತೆಯಾಟ ನೀಡಿದರು. ಆದರೆ ಸುಂದರ್ 13 ರನ್ಗಳಿಸಿದ್ದ ಕಿಂಗ್ ವಿಕೆಟ್ ಪಡೆಯುತ್ತಿದ್ದಂತೆ ವಿಂಡೀಸ್ ಪತನ ಆರಂಭವಾಯಿತು.
-
Four wickets for @yuzi_chahal as West Indies are bowled out for 176 in 43.5 overs.
— BCCI (@BCCI) February 6, 2022 " class="align-text-top noRightClick twitterSection" data="
Scorecard - https://t.co/VNmt1PeR9o #INDvWI @Paytm pic.twitter.com/gDHCPVOPlQ
">Four wickets for @yuzi_chahal as West Indies are bowled out for 176 in 43.5 overs.
— BCCI (@BCCI) February 6, 2022
Scorecard - https://t.co/VNmt1PeR9o #INDvWI @Paytm pic.twitter.com/gDHCPVOPlQFour wickets for @yuzi_chahal as West Indies are bowled out for 176 in 43.5 overs.
— BCCI (@BCCI) February 6, 2022
Scorecard - https://t.co/VNmt1PeR9o #INDvWI @Paytm pic.twitter.com/gDHCPVOPlQ
ಸುಂದರ್ ಮತ್ತು ಚಹಲ್ ದಾಳಿಗೆ ಸಿಲುಕಿದ ವಿಂಡೀಸ್ 79 ರನ್ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಡರೇನ್ ಬ್ರಾವೋ 18, ಶಮರ್ ಬ್ರೂಕ್ಸ್ 12, ನಿಕೋಲಸ್ ಪೂರನ್ 18, ನಾಯಕ ಕೀರನ್ ಪೊಲಾರ್ಡ್ (0) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಚೇತರಿಕೆ ನೀಡಿದ ಹೋಲ್ಡರ್-ಅಲೆನ್ ಜೋಡಿ
79ಕ್ಕೆ 7 ವಿಕೆಟ್ ಕಳೆದುಕೊಂಡು 100ರನ್ ತಲುಪುವುದು ಅನುಮಾನ ಎನ್ನುವು ಪರಿಸ್ಥಿತಿಯಲ್ಲಿ ಒಂದಾದ ಜೇಸನ್ ಹೋಲ್ಡರ್ ಮತ್ತು ಫ್ಯಾಬಿಯನ್ ಅಲೆನ್ 78 ರನ್ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಈ ಸಂದರ್ಭದಲ್ಲಿ ಮತ್ತೆ ಕಣಕ್ಕಿಳಿದ ಸುಂದರ್ 43 ಎಸೆತಗಳಲ್ಲಿ 29 ರನ್ಗಳಿಸಿದ್ದ ಅಲೆನ್ ವಿಕೆಟ್ ಪಡೆದು ಬ್ರೇಕ್ ನೀಡಿದರು. 10 ರನ್ಗಳ ಅಂತರದಲ್ಲಿ 71 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 57 ರನ್ಗಳಿಸಿ ಪ್ರಸಿಧ್ ಕೃಷ್ಣ ಬೌಲಿಂಗ್ನಲ್ಲಿ ಪಂತ್ಗೆ ಕ್ಯಾಚ್ ನೀಡಿ ಔಟಾದರು.
ಭಾರತದ ಪರ ಯುಜ್ವೇಂದ್ರ ಚಹಲ್ 49ಕ್ಕೆ4, ವಾಷಿಂಗ್ಟನ್ ಸುಂದರ್ 30ಕ್ಕೆ 3, ಪ್ರಸಿಧ್ ಕೃಷ್ಣ 29ಕ್ಕೆ2 ಮತ್ತು ಸಿರಾಜ್ 26ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ:ಲತಾ ಮಂಗೇಶ್ಕರ್ ಅಪ್ರತಿಮ ಕ್ರಿಕೆಟ್ ಪ್ರೇಮಿ, 2011ರ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಗೆಲುವಿಗಾಗಿ ಉಪವಾಸ ಮಾಡಿದ್ರು