ಕೊಲಂಬೊ(ಶ್ರೀಲಂಕಾ): ಆತಿಥೇಯ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ. ಒಂದೇ ಪಂದ್ಯದಲ್ಲಿ ಐವರು ಹೊಸಬರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು ಒಂದು ಹೊಸ ರೆಕಾರ್ಡ್.
-
Five players are making their ODI debut for India today – Sanju Samson, Nitish Rana, Rahul Chahar, Chetan Sakariya and K Gowtham 👏#SLvINDpic.twitter.com/q6NYWV4W9N
— ICC (@ICC) July 23, 2021 " class="align-text-top noRightClick twitterSection" data="
">Five players are making their ODI debut for India today – Sanju Samson, Nitish Rana, Rahul Chahar, Chetan Sakariya and K Gowtham 👏#SLvINDpic.twitter.com/q6NYWV4W9N
— ICC (@ICC) July 23, 2021Five players are making their ODI debut for India today – Sanju Samson, Nitish Rana, Rahul Chahar, Chetan Sakariya and K Gowtham 👏#SLvINDpic.twitter.com/q6NYWV4W9N
— ICC (@ICC) July 23, 2021
ಲಂಕಾ ವಿರುದ್ಧದ ಎರಡು ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿರುವ ಕಾರಣ, ಇಂದಿನ ಪಂದ್ಯದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ದೊರೆತಿದೆ. ಹೀಗಾಗಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಿಂಚು ಹರಿಸಿರುವ ನಿತೀಶ್ ರಾಣಾ, ಚೇತೇಶ್ವರ್ ಸಕಾರಿಯಾ, ಕೆ. ಗೌತಮ್ ಹಾಗೂ ರಾಹುಲ್ ಚಹರ್ ಅವಕಾಶ ಪಡೆದುಕೊಂಡಿದ್ದಾರೆ.
- ಇಂದಿನ ಪಂದ್ಯದಲ್ಲಿ ಡೆಬ್ಯು ಮಾಡಿದ ಪ್ಲೇಯರ್ಸ್
1. ಸಂಜು ಸ್ಯಾಮ್ಸನ್,
2. ನಿತೀಶ್ ರಾಣಾ,
3. ಕೆ. ಗೌತಮ್,
4. ಚೇತನ್ ಸಕಾರಿಯಾ
5. ರಾಹುಲ್ ಚಹರ್
ವಿಶೇಷವೆಂದರೆ 1980ರಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ ದಿಲೀಪ್ ದೋಶಿ, ,ಕೀರ್ತಿ ಆಜಾದ್, ರೋಜರ್ ಬಿನ್ನಿ, ಸಂದೀಪ್ ಪಾಟೀಲ್ ಹಾಗೂ ತಿರುಮಲೈ ಶ್ರೀನಿವಾಸನ್ ಭಾರತದ ಪರ ಪದಾರ್ಪಣೆ ಮಾಡಿದ್ದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಈಗಾಗಲೇ 7 ಟಿ-20 ಪಂದ್ಯಗಳನ್ನು ಟೀಂ ಇಂಡಿಯಾ ಪರ ಆಡಿದ್ದಾರೆ. ಆದರೆ ಇದೇ ಮೊದಲ ಸಲ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದಾರೆ. ಇವರಿಗೆ ಇಶಾನ್ ಕಿಶನ್ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ.
ಉಳಿದಂತೆ ಕೃನಾಲ್ ಜಾಗಕ್ಕೆ ಕನ್ನಡಿಗ ಕೆ. ಗೌತಮ್ ಅವಕಾಶ ಪಡೆದುಕೊಂಡಿದ್ದು, ಭುವನೇಶ್ವರ್ ಸ್ಥಾನದಲ್ಲಿ ನವದೀಪ್ ಸೈನಿ ಆಡುತ್ತಿದ್ದಾರೆ. ಕುಲ್ದೀಪ್ ಹಾಗೂ ದೀಪಕ್ ಚಹರ್ ಸ್ಥಾನಕ್ಕೆ ಚೇತನ್ ಸಕಾರಿಯಾ,ರಾಹುಲ್ ಚಹರ್ ಆಯ್ಕೆಯಾಗಿದ್ದಾರೆ. ಉಳಿದಂತೆ ನೀತಿಶ್ ರಾಣಾಗೂ ಮಣೆ ಹಾಕಲಾಗಿದೆ.
ಇದನ್ನೂ ಓದಿ: IND vs SL: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಶಿಖರ್ ಪಡೆ, ಕನ್ನಡಿಗ ಗೌತಮ್ ಸೇರಿ ಐವರು ಪದಾರ್ಪಣೆ