ಜೈಪುರ್(ರಾಜಸ್ಥಾನ): ನಾಳೆಯಿಂದ ಆತಿಥೇಯ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ಮಧ್ಯೆ ಮೂರು ಟಿ20 (India vs New Zealand T20 Series) ಪಂದ್ಯಗಳ ಸರಣಿ ಆರಂಭಗೊಳ್ಳಲಿದೆ. ಇದಕ್ಕಾಗಿ ಉಭಯ ತಂಡಗಳು ಈಗಾಗಲೇ ಜೈಪುರ್ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ಮೊದಲ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿವೆ.
ಟೀಂ ಇಂಡಿಯಾ ನಾಯಕತ್ವ ಜವಾಬ್ದಾರಿ ರೋಹಿತ್ ಶರ್ಮಾ ಹೆಗಲಿಗೆ ಬಿದ್ದಿದೆ. ಪ್ರವಾಸಿ ನ್ಯೂಜಿಲ್ಯಾಂಡ್ ತಂಡದ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ (Kane Williamson) ವಿಶ್ರಾಂತಿ ಪಡೆದುಕೊಂಡಿದ್ದು, ವೇಗದ ಬೌಲರ್ ಟಿಮ್ ಸೌಥಿ (Tim Southee) ಅವರಿಗೆ ತಂಡ ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ತದನಂತರ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಗೆ ಕೇನ್ ತಂಡ ಸೇರಿಕೊಳ್ಳಲಿದ್ದಾರೆ.
-
Kane Williamson will miss this week’s three-game T20 series against India as he prioritises preparing for the Test series starting on November 25 in Kanpur. #INDvNZ https://t.co/zff00W47ER
— BLACKCAPS (@BLACKCAPS) November 16, 2021 " class="align-text-top noRightClick twitterSection" data="
">Kane Williamson will miss this week’s three-game T20 series against India as he prioritises preparing for the Test series starting on November 25 in Kanpur. #INDvNZ https://t.co/zff00W47ER
— BLACKCAPS (@BLACKCAPS) November 16, 2021Kane Williamson will miss this week’s three-game T20 series against India as he prioritises preparing for the Test series starting on November 25 in Kanpur. #INDvNZ https://t.co/zff00W47ER
— BLACKCAPS (@BLACKCAPS) November 16, 2021
ಉಳಿದಂತೆ ಕೈಲ್ ಜೇಮಿಸನ್, ಮಿಚೆಲ್, ಗ್ಲೆನ್ ಫಿಲಿಪ್ಸ್ ಹಾಗೂ ಮಿಚೆಲ್ ಸ್ಯಾಂಟ್ನರ್ ಟಿ20 ಹಾಗೂ ಟೆಸ್ಟ್ ಸರಣಿಗೆ ಲಭ್ಯರಿದ್ದಾರೆ. ಟೆಸ್ಟ್ ಸರಣಿ ಮೇಲೆ ಹೆಚ್ಚಿನ ಗಮನಹರಿಸುವ ಉದ್ದೇಶದಿಂದ ಕೇನ್ ವಿಲಿಯಮ್ಸನ್ ವಿಶ್ರಾಂತಿ ಪಡೆದುಕೊಂಡಿದ್ದಾಗಿ ಕ್ರಿಕೆಟ್ ನ್ಯೂಜಿಲ್ಯಾಂಡ್ ತಿಳಿಸಿದೆ.
ನ್ಯೂಜಿಲ್ಯಾಂಡ್ T20 ತಂಡ:
ಟಾಡ್ ಆಸ್ಟಲ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಲೂಕಿ ಫರ್ಗ್ಯೂಸನ್, ಮಾರ್ಟಿನ್ ಗಪ್ಟಿಲ್, ಕೈಲ್ ಜೇಮಿಸನ್, ಆಡಮ್ ಮಿಲ್ನೆ, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್, ಇಶ್ ಸೋಧಿ, ಟಿಮ್ ಸೌಥಿ(ಕ್ಯಾಪ್ಟನ್)
ಇದನ್ನೂ ಓದಿ: IND vs NZ: ರಾಹುಲ್ ದ್ರಾವಿಡ್ ಗರಡಿಯಲ್ಲಿ ಅಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
ಭಾರತ T20 ತಂಡ:
ರೋಹಿತ್ ಶರ್ಮಾ (ಕ್ಯಾಪ್ಟನ್), ಕೆ.ಎಲ್.ರಾಹುಲ್ (ಉ.ನಾ), ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಹಾಲ್, ಆರ್.ಅಶ್ವಿನ್, ಅಕ್ಸರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.
ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಗಾಗಿ ಟೀಂ ಇಂಡಿಯಾ ಹೊಸ ಪ್ರತಿಭೆಗಳಿಗೆ ಮಣೆ ಹಾಕಿದೆ. ಪ್ರಮುಖವಾಗಿ ವೆಂಕಟೇಶ್ ಅಯ್ಯರ್, ಋತುರಾಜ್ ಗಾಯಕ್ವಾಡ್, ದೀಪಕ್ ಚಹರ್ ಸೇರಿದಂತೆ ಅನೇಕರಿಗೆ ಅವಕಾಶ ಸಿಕ್ಕಿದೆ. ಚುಟುಕು ಸರಣಿಗೆ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿದ್ದು, ಕನ್ನಡಿಗ ಕೆ.ಎಲ್. ರಾಹುಲ್ ಉಪನಾಯಕರಾಗಿ ಈಗಾಗಲೇ ಆಯ್ಕೆಯಾಗಿದ್ದಾರೆ. ಕೋಚ್ ಆಗಿ ರಾಹುಲ್ ದ್ರಾವಿಡ್ (Coach Rahul Dravid) ತಂಡ ಸೇರಿಕೊಂಡಿದ್ದಾರೆ.