ETV Bharat / sports

ind vs nz: ಜೈಪುರದಲ್ಲಿಂದು ಮೊದಲ ಟಿ-20 ಫೈಟ್‌ - Rohith Sharma

ಜೈಪುರದಲ್ಲಿಂದು ಭಾರತ - ನ್ಯೂಜಿಲ್ಯಾಂಡ್​ ನಡುವಿನ ಮೊದಲ ಟಿ-20 ಪಂದ್ಯ ನಡೆಯಲಿದ್ದು, ಗೆಲುವಿಗಾಗಿ ಉಭಯ ತಂಡಗಳು ಭರ್ಜರಿ ಕಸರತ್ತು ನಡೆಸಿವೆ. ನೂತನ ಕೋಚ್‌ ರಾಹುಲ್‌ ದ್ರಾವಿಡ್‌, ರೋಹಿತ್‌ ಶರ್ಮಾ ನಾಯಕತ್ವ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಸರಣಿ ಇದಾಗಿದೆ.

ind vs nz: t-20 leagues 1st match preview
ind vs nz: ಜೈಪುರದಲ್ಲಿಂದು ಮೊದಲ ಟಿ-20 ಫೈಟ್‌
author img

By

Published : Nov 17, 2021, 6:39 AM IST

ಜೈಪುರ್‌: ಭಾರತ-ನ್ಯೂಜಿಲ್ಯಾಂಡ್​ (ind vs nz 1st t20) ನಡುವಿನ ಮೊದಲ ಟಿ - 20 ಪಂದ್ಯ ಜೈಪುರದಲ್ಲಿಂದು ನಡೆಯಲಿದ್ದು, ಗೆಲುವಿನ ಶುಭಾರಂಭಕ್ಕಾಗಿ ಉಭಯ ತಂಡಗಳು ಕಸರತ್ತು ನಡೆಸುತ್ತಿವೆ. ವಿಶೇಷವಾಗಿ ನಾಯಕತ್ವ ವಹಿಸಿರುವ ರೋಹಿತ್‌ ಶರ್ಮಾ ಹಾಗೂ ನೂತನ ಕೋಚ್‌ ರಾಹುಲ್‌ ದ್ರಾವಿಡ್‌ಗೆ ಇದು ಮೊದಲ ಸವಾಲಾಗಿದೆ.

t-20 leagues 1st match preview
ನೂತನ ಕೋಚ್‌ ರಾಹುಲ್‌ ದ್ರಾವಿಡ್‌, ರೋಹಿತ್‌ ಶರ್ಮಾ ನಾಯಕತ್ವ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಸರಣಿ ಇದು

ಮುಂದಿನ ವರ್ಷದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ ಟಿ - 20ಗೆ ಇನ್ನೂ 11 ತಿಂಗಳು ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್‌ ಮಾಡುವಂತ ಬಲಿಷ್ಠ ತಂಡ ಕಟ್ಟುವ ಜವಾಬ್ದಾರಿ ಶರ್ಮಾ, ದ್ರಾವಿಡ್‌ ಅವರ ಮೇಲಿದೆ.

ಆಲ್‌ರೌಂಡರ್‌ಗೆ ಹುಡುಕಾಟ!

ಭಾರತ ತಂಡದಲ್ಲಿ ಇದೀಗ ಆಲ್‌ರೌಂಡರ್‌ ಸ್ಥಾನಕ್ಕಾಗಿ ಹುಡುಕಾಟ ಶುರುವಾಗಿದೆ. ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಹಾರ್ದಿಕ್‌ ಪಾಂಡ್ಯ ಸ್ಥಾನದಲ್ಲಿ ಮತ್ತೊಬ್ಬ ಆಲ್‌ರೌಂಡರ್‌ ಅನ್ನು ತಯಾರು ಮಾಡಬೇಕೆಂಬ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಐಪಿಎಲ್‌ 14ನೇ ಆವೃತ್ತಿಯಲ್ಲಿ ಮಿಂಚಿರುವ ವೆಂಕಟೇಶ್‌ ಅಯ್ಯರ್‌ ಆ ಸ್ಥಾನವನ್ನು ತುಂಬುವ ಸಾಧ್ಯತೆ ಇದೆ.

ಬ್ಯಾಟಿಂಗ್‌ ಕ್ರಮಾಂಕದಲ್ಲಿ ವೆಂಕಟೇಶ್‌ ಅವರಂತಹ ಪವರ್‌ ಹಿಟ್ಟರ್‌ ಭಾರತ ತಂಡಕ್ಕೆ ಸದ್ಯ ಅವಶ್ಯಕತೆ ಇದೆ. ಕಿವೀಸ್‌ ಸರಣಿಗೆ ಸ್ಥಾನ ಪಡೆದಿರುವ ಅಯ್ಯರ್‌ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಮೂಲಕ ಸಿಕ್ಕ ಅವಕಾಶವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು, ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಋತುರಾಜ್‌ ಗಾಯಕ್ವಾಡ್‌, ಹರ್ಷಲ್‌ ಪಟೇಲ್‌, ಆವೇಶ್‌ ಖಾನ್‌, ಚಾಹಲ್‌ ಕೂಡ ನ್ಯೂಜಿಲೆಂಡ್‌ ವಿರುದ್ಧದ ಟಿ-20 ಸರಣಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಬೂಮ್ರಾಗೆ ವಿಶ್ರಾಂತಿ ನೀಡಿರುವ ಹಿನ್ನೆಲೆಯಲ್ಲಿ ಟೀಂ ಇಂಡಿಯಾ 140 ಕಿ.ಮೀ ವೇಗವಾಗಿ ಚೆಂಡು ಎಸೆಯುವಂತ ಪೇಸ್‌ ಬೌಲರ್‌ ಹುಡುಕಾಟದಲ್ಲಿದೆ. ಇದಕ್ಕಾಗಿಯೇ ಆವೇಶ್‌ ಖಾನ್‌, ಮಹಮ್ಮದ್‌ ಸಿರಾಜ್‌ ಅವರಿಗೆ ಇಂದಿನ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಪಂದ್ಯ ಸಂಜೆ 7.30 ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.