ಕಾನ್ಪುರ : ಕಿವೀಸ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ತಂಡದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪ್ರವಾಸದ ಬಳಿಕ ರಹಾನೆ ಮತ್ತೊಮ್ಮೆ ಮೈದಾನಕ್ಕಿಳಿಯಲಿದ್ದು, ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಬೇಕಾದ ಸವಾಲು ಎದುರಿಗಿದೆ. ರಾಹುಲ್ ದ್ರಾವಿಡ್ ಕೋಚ್ ಆದ ಬಳಿಕ ಭಾಗವಹಿಸುತ್ತಿರುವ ಮೊದಲ ಟೆಸ್ಟ್ ಸರಣಿ ಇದಾಗಿದೆ.
-
#TeamIndia Playing XI for the 1st Test at Kanpur.
— BCCI (@BCCI) November 25, 2021 " class="align-text-top noRightClick twitterSection" data="
Shreyas Iyer is all set to make his Test debut.
Live - https://t.co/WRsJCUhS2d #INDvNZ @Paytm pic.twitter.com/K55isD6yso
">#TeamIndia Playing XI for the 1st Test at Kanpur.
— BCCI (@BCCI) November 25, 2021
Shreyas Iyer is all set to make his Test debut.
Live - https://t.co/WRsJCUhS2d #INDvNZ @Paytm pic.twitter.com/K55isD6yso#TeamIndia Playing XI for the 1st Test at Kanpur.
— BCCI (@BCCI) November 25, 2021
Shreyas Iyer is all set to make his Test debut.
Live - https://t.co/WRsJCUhS2d #INDvNZ @Paytm pic.twitter.com/K55isD6yso
ಸದ್ಯ ಕೊನೆಗೊಂಡಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿರುವ ಕಿವೀಸ್ಗೆ ಕೂಡ ಟೆಸ್ಟ್ ಸರಣಿಯು ಸವಾಲಿನದಾಗಿದೆ. ಭಾರತದ ಪಿಚ್, ವಾತಾವರಣಕ್ಕೆ ಕೇನ್ ಪಡೆ ಹೇಗೆ ಹೊಂದಿಕೊಳ್ಳಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರ ಎರಡು ತಂಡಗಳ ಮುಖಾಮುಖಿಯು ಎಲ್ಲರ ಗಮನ ಸೆಳೆಯಲಿದೆ.
ಎರಡೂ ತಂಡಗಳ 11ರ ಬಳಗ:
ಭಾರತ: ಶುಭಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಶ್ರೇಯಸ್ ಅಯ್ಯರ್, ಅಜಿಂಕ್ಯ ರಹಾನೆ(ನಾಯಕ), ವೃದ್ಧಿಮಾನ್ ಸಹಾ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಉಮೇಶ್ ಯಾದವ್
ನ್ಯೂಜಿಲ್ಯಾಂಡ್: ಟಾಮ್ ಲ್ಯಾಥಮ್, ಡಬ್ಲ್ಯೂ ಯಂಗ್, ಕೇನ್ ವಿಲಿಯಮ್ಸನ್(ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲಸ್, ಟಾಮ್ ಬ್ಲಂಡೆಲ್, ಆರ್ ರವೀಂದ್ರ, ಟಿಮ್ ಸೌಥಿ, ಅಜಾಜ್ ಪಟೇಲ್, ಕೈಲ್ ಜೇಮಿಸನ್, ವಿಲ್ ಸೋಮರ್‌ವಿಲ್ಲೆ
ಇದನ್ನೂ ಓದಿ: IPL 2022: ಸಿಎಸ್ಕೆಯಿಂದ ಧೋನಿ, ಜಡೇಜಾ, ಋತುರಾಜ್ ರಿಟೈನ್, ಲಕ್ನೋ ತಂಡಕ್ಕೆ ರಾಹುಲ್ ಕ್ಯಾಪ್ಟನ್