ETV Bharat / sports

ನ್ಯೂಜಿಲ್ಯಾಂಡ್​ ವಿರುದ್ಧ ಚೊಚ್ಚಲ ಟೆಸ್ಟ್​ ಶತಕ ಸಿಡಿಸಿದ ಅಯ್ಯರ್​.. ಪದಾರ್ಪಣೆ ಪಂದ್ಯದಲ್ಲೇ ಶ್ರೇಯಸ್​ಗೆ ಶ್ರೇಯಸ್ಸು

ಟೆಸ್ಟ್​ ವೃತ್ತಿ ಜೀವನದ ಮೊದಲ ಪಂದ್ಯದಲ್ಲೇ ಶ್ರೇಯಸ್​ ಅಯ್ಯರ್​ ಶತಕ ಸಿಡಿಸಿದ್ದಾರೆ. ಈ ಪ್ರದರ್ಶನವನ್ನು ಮೆಚ್ಚಿರುವ ಕ್ರಿಕೆಟ್​ ದಿಗ್ಗಜರು ಶುಭ ಕೋರುತ್ತಿದ್ದಾರೆ.

Shreyas Iyer debut century, Shreyas Iyer debut century against New Zealand, Ind vs NZ first test, Kanpur test, ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ, ನ್ಯೂಜಿಲೆಂಡ್ ವಿರುದ್ಧ ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ, ಭಾರತ ವಿರುದ್ಧ ನ್ಯೂಜಿಲ್ಯಾಂಡ್​ ಮೊದಲ ಟೆಸ್ಟ್, ಕಾನ್ಪುರ ಟೆಸ್ಟ್,
ನ್ಯೂಜಿಲ್ಯಾಂಡ್​ ವಿರುದ್ಧ ತನ್ನ ಚೊಚ್ಚಲ ಟೆಸ್ಟ್​ ಶತಕ ಸಿಡಿಸಿದ ಅಯ್ಯರ್​
author img

By

Published : Nov 26, 2021, 10:34 AM IST

Updated : Nov 26, 2021, 10:42 AM IST

ಹೈದರಾಬಾದ್​(ಡೆಸ್ಕ್): ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಪದಾರ್ಪಣೆ ಪಂದ್ಯದಲ್ಲೇ ಅದ್ಭುತ ಶತಕ ಸಿಡಿಸಿರುವ ಶ್ರೇಯಸ್​ ಅಯ್ಯರ್​ ಅವರಿಗೆ ಭಾರತ ಕ್ರಿಕೆಟ್​ ತಂಡ ಅಭಿನಂದನೆ ಸಲ್ಲಿಸಿದೆ.

ಗಾಯದಿಂದ ಚೇತರಿಸಿಕೊಂಡ ನಂತರ ಸಿಕ್ಕ ಒಂದೊಂದೇ ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ಶ್ರೇಯಸ್​ ಗುರುವಾರ ದಿಗ್ಗಜರ ಅನುಪಸ್ಥಿತಿಯಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಆಡುವ ಅವಕಾಶ ಪಡೆದಿದ್ದರು. ಟೀಮ್ ಇಂಡಿಯಾ 106 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್​ಗೆ ಆಗಮಿಸಿದ ಮುಂಬೈಕರ್​ 4ನೇ ವಿಕೆಟ್​ಗೆ ನಾಯಕ ರಹಾನೆ(35) ಜೊತೆಗೆ 39 ರನ್​ ಸೇರಿಸಿದರು.

ರಹಾನೆ ಔಟಾದ ನಂತರ ಅನುಭವಿ ಜಡೇಜಾ ಜೊತೆಗೂಡಿದ ಯುವ ಪ್ರತಿಭೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಈ ಜೋಡಿ 5ನೇ ವಿಕೆಟ್​ ಜೊತೆಯಾಟದಲ್ಲಿ 113 ರನ್​ ಸೇರಿಸಿ ಭಾರತವನ್ನು ಸುಸ್ಥಿತಿಗೆ ತಂದು ನಿಲ್ಲಿಸಿದರು. ಇಂದು ಆಟ ಮುಂದುವರಿಸಿದ ಶ್ರೇಯಸ್​ ಅಯ್ಯರ್​ ಶತಕ ಗಳಿಸುವಲ್ಲಿ ಯಶಸ್ವಿಯಾದರು. ತಮ್ಮ ಮೊದಲ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​ ಶತಕ ಗಳಿಸಿ ಮಿಂಚಿದ್ದಾರೆ. ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ 16ನೇ ಆಟಗಾರ ಶ್ರೇಯಸ್​ ಆಗಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕೋಚ್​ ರಿಕಿ ಪಾಂಟಿಂಗ್ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಶ್ರೇಯಸ್​ ಅಯ್ಯರ್​ಗೆ ಶುಭ ಕೋರಿದ್ದಾರೆ." ಕಳೆದ ಕೆಲವು ವರ್ಷಗಳಿಂದ ನಿಮ್ಮ ಕಠಿಣ ಪರಿಶ್ರಮವನ್ನು ನೋಡಿದ್ದೇನೆ. ಟೆಸ್ಟ್​ ಕ್ಯಾಪ್ ಪಡೆಯಲು ನೀವು ಅರ್ಹರು. ತುಂಬಾ ಹೆಮ್ಮೆಯಾಗುತ್ತಿದೆ ಶ್ರೇಯಸ್​ ಅಯ್ಯರ್'' ಎಂದು ಟ್ವೀಟ್​ ಮಾಡಿದ್ದರು.

167 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್​ ನೆರವಿನಿಂದ 104 ರನ್​ಗಳಿಸಿ ಶ್ರೇಯಸ್​ ಅಯ್ಯರ್​ ಆಟ ಮುಂದುವರಿಸಿದ್ದಾರೆ. ಭಾರತ ತಂಡ 94 ಓವರ್​​ಗಳಿಗೆ 6 ವಿಕೆಟ್​ಗಳನ್ನು ಕಳೆದುಕೊಂಡು 292 ರನ್​ಗಳನ್ನು ಗಳಿಸಿ ಮುನ್ನಡೆಯುತ್ತಿದೆ.

Last Updated : Nov 26, 2021, 10:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.