ಮುಂಬೈ: ಮಯಾಂಕ್ ಅಗರ್ವಾಲ್ ಅಬ್ಬರದ ಶತತದ ನೆರವಿನಿಂದ ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 325ಕ್ಕೆ ಆಲೌಟ್ ಆಗಿದೆ. ಆದರೆ ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಕೇವಲ 38 ರನ್ಗಳಾಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದೆ.
ಶುಕ್ರವಾರ 221 ರನ್ಗಳಿಸಿದ್ದ ಭಾರತ ಶನಿವಾರ 325ಕ್ಕೆ ಆಲೌಟ್ ಆಯಿತು. ವೃದ್ಧಿಮಾನ್ ಸಹಾ 27ಕ್ಕೆ ಔಟಾದರೆ, 120 ರನ್ಗಳಿಸಿದ್ದ ಮಯಾಂಕ್ ಅಗರ್ವಾಲ್ 150 ರನ್ಗಳಿಸಿ ಔಟಾದರು. 311 ಎಸೆತಗಳಲ್ಲಿ 17 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದರು. ಅಕ್ಷರ್ ಪಟೇಲ್ 128 ಎಸೆತಗಳಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 52 ರನ್ಗಳಿಸಿದರು.
-
What a session!
— ICC (@ICC) December 4, 2021 " class="align-text-top noRightClick twitterSection" data="
Wickets, wickets, and wickets 🤯#WTC23 | #INDvNZ | https://t.co/EdvFj8QtKD pic.twitter.com/HDT8rH5zFr
">What a session!
— ICC (@ICC) December 4, 2021
Wickets, wickets, and wickets 🤯#WTC23 | #INDvNZ | https://t.co/EdvFj8QtKD pic.twitter.com/HDT8rH5zFrWhat a session!
— ICC (@ICC) December 4, 2021
Wickets, wickets, and wickets 🤯#WTC23 | #INDvNZ | https://t.co/EdvFj8QtKD pic.twitter.com/HDT8rH5zFr
ನ್ಯೂಜಿಲ್ಯಾಂಡ್ ಪರ ಅಜಾಜ್ ಪಟೇಲ್ ಭಾರತದ ಎಲ್ಲ 10 ವಿಕೆಟ್ ಪಡೆದು ವಿಶ್ವದಾಖಲೆಗೆ ಪಾತ್ರರಾದರು. ಜಿಮ್ ಲೇಖರ್(1956) ಮತ್ತು ಅನಿಲ್ ಕುಂಬ್ಳೆ(1999) ನಂತರ ಈ ಸಾಧನೆ ಮಾಡಿದ ವಿಶ್ವದ 3ನೇ ಬೌಲರ್ ಎನಿಸಿಕೊಂಡರು.
ಕಿವೀಸ್ ಆರಂಭಿಕ ಆಘಾತ
326ರನ್ಗಳನ್ನು ಹಿಂಬಾಲಿಸಿದ ನ್ಯೂಜಿಲ್ಯಾಂಡ್ ಚಹಾ ವಿರಾಮದ ವೇಳೆ 6 ವಿಕೆಟ್ ಕಳೆದುಕೊಂಡಿದೆ. ಟಾಮ್ ಲೇಥಮ್(10), ವಿಲ್ ಯಂಗ್(4), ಡೇರಿಲ್ ಮಿಚೆಲ್(8), ರಾಸ್ ಟೇಲರ್(1), ರಚಿನ್ ರವೀಂದ್ರ(4) ಪೆವಿಲಿಯನ್ ಸೇರಿಕೊಂಡಿದ್ದಾರೆ.
ಭಾರತದ ಪರ ಮೊಹಮ್ಮದ್ ಸಿರಾಜ್ 19ಕ್ಕೆ 3, ಅಕ್ಷರ್ ಪಟೇಲ್ 8ಕ್ಕೆ1, ರವಿಚಂದ್ರನ್ ಅಶ್ವಿನ್ 3ಕ್ಕೆ1, ಜಯಂತ್ ಯಾದವ್ 1 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:ಟೀಂ ಇಂಡಿಯಾ ವಿರುದ್ಧ ಒಂದೇ ಇನ್ಸಿಂಗ್ಸ್‌ನಲ್ಲಿ 10 ವಿಕೆಟ್ ಪಡೆದು ಅಜಾಜ್ ಪಟೇಲ್ ದಾಖಲೆ