ರಾಯಪುರ್: ಭಾರತ-ನ್ಯೂಜಿಲ್ಯಾಂಡ್ ಏಕದಿನ ಸರಣಿಯ ಎರಡನೇ ಪಂದ್ಯ ರಾಯ್‌ಪುರದಲ್ಲಿ ಆರಂಭವಾಗಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದೆ. ರೋಹಿತ್ ಶರ್ಮಾ ಮೊದಲ ಪಂದ್ಯದ ಬಳಗವನ್ನೇ ಮುಂದುವರಿಸಿದ್ದಾರೆ. ಟಾಸ್ ವೇಳೆ ಒಂದು ತಮಾಷೆಯ ಘಟನೆ ನಡೆದಿದೆ. ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ನಿರ್ಧಾರ ಕೈಗೊಳ್ಳಲು ಮರೆತಿದ್ದಾರೆ. ಟಾಸ್ ಗೆದ್ದ ನಂತರ ರವಿಶಾಸ್ತ್ರಿ ಅವರು ನಿಮ್ಮ ಆಯ್ಕೆ ಏನೆಂದು ಕೇಳಿದ್ದಾರೆ. ಈ ವೇಳೆ ರೋಹಿತ್ ಶರ್ಮಾ ತಮ್ಮ ನಿರ್ಧಾರ ಮರೆತಿದ್ದಾರೆ. ತಮ್ಮ ನಿರ್ಧಾರವನ್ನು ತೆಗೆದುಕೊಳ್ಳಲು ರೋಹಿತ್ಗೆ 20 ಸೆಕೆಂಡುಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡರು. ಬಳಿಕ ಫೀಲ್ಡಿಂಗ್ ಮಾಡುವುದಾಗಿ ಹೇಳಿದರು.
-
🚨 Toss Update 🚨#TeamIndia win the toss and elect to field first in the second #INDvNZ ODI.
— BCCI (@BCCI) January 21, 2023 " class="align-text-top noRightClick twitterSection" data="
Follow the match ▶️ https://t.co/V5v4ZINCCL @mastercardindia pic.twitter.com/YBw3zLgPnv
">🚨 Toss Update 🚨#TeamIndia win the toss and elect to field first in the second #INDvNZ ODI.
— BCCI (@BCCI) January 21, 2023
Follow the match ▶️ https://t.co/V5v4ZINCCL @mastercardindia pic.twitter.com/YBw3zLgPnv🚨 Toss Update 🚨#TeamIndia win the toss and elect to field first in the second #INDvNZ ODI.
— BCCI (@BCCI) January 21, 2023
Follow the match ▶️ https://t.co/V5v4ZINCCL @mastercardindia pic.twitter.com/YBw3zLgPnv
ಸತತ 7ನೇ ಏಕದಿನ ಸರಣಿ ಗೆಲ್ಲುವ ಅವಕಾಶ: ಇಂದಿನ ಪಂದ್ಯವನ್ನು ಗೆದ್ದು ಸರಣಿಯನ್ನು ಗೆಲ್ಲಲು ಭಾರತ ಕಣ್ಣಿಟ್ಟಿದ್ದು, ಕಿವೀಸ್ ತಂಡ ಈ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲ ಸಾಧಿಸಲು ಬಯಸಿದೆ. ನ್ಯೂಜಿಲ್ಯಾಂಡ್ ವಿರುದ್ಧ ಈ ಪಂದ್ಯವನ್ನು ಗೆದ್ದರೆ ಟೀಂ ಇಂಡಿಯಾ ಸತತ 7ನೇ ಏಕದಿನ ಸರಣಿಯನ್ನು ಗೆದ್ದಂತಾಗುತ್ತದೆ. ಕಳೆದ 4 ವರ್ಷಗಳಿಂದ ತಂಡ ತವರಿನಲ್ಲಿ ಏಕದಿನ ಸರಣಿಯನ್ನು ಕಳೆದುಕೊಂಡಿಲ್ಲ. ಇದಕ್ಕೂ ಮೊದಲು 2019 ರಲ್ಲಿ, ಆಸ್ಟ್ರೇಲಿಯಾ ಅವರನ್ನು 5 ಪಂದ್ಯಗಳ ಸರಣಿಯಲ್ಲಿ 3-2 ರಿಂದ ಸೋಲಿಸಿತು. 2010 ರಿಂದ, ಭಾರತ ತಂಡವು ತವರಿನಲ್ಲಿ 25 ODI ಸರಣಿಗಳನ್ನು ಆಡಿದೆ. ಈ ಪೈಕಿ 23ರಲ್ಲಿ ಗೆದ್ದಿದ್ದು 2 ರಲ್ಲಿ ಮಾತ್ರ ಸೋಲು ಕಂಡಿದೆ.
ರಾಯ್‌ಪುರ ಪಿಚ್ ವರದಿ: ರಾಯ್‌ಪುರ ಪಿಚ್ ವೇಗದ ಬೌಲರ್‌ಗಳನ್ನು ನಿರಾಶೆಗೊಳಿಸಬಹುದಾಗಿದೆ. ಆದ್ದರಿಂದ ಬ್ಯಾಟ್ಸ್‌ಮನ್‌ಗಳು ದೊಡ್ಡ ಸ್ಕೋರ್ ಮಾಡುವುದನ್ನು ತಡೆಯಲು ಬೌಲಿಂಗ್ ವಿಭಾಗದಲ್ಲಿ ಬದಲಾವಣೆಗಳನ್ನು ಅವಲಂಬಿಸಬೇಕಾಗುತ್ತದೆ. ಆದರೆ, ಚೆಂಡು ಹಳೆಯದಾದ ತಕ್ಷಣ ಸ್ಪಿನ್ನರ್‌ಗಳಿಗೆ ಸಾಕಷ್ಟು ನೆರವು ಸಿಗಲಿದೆ. ಆಟವು ಮುಂದುವರೆದಂತೆ ಈ ಪಿಚ್ನಲ್ಲಿ ಬ್ಯಾಟಿಂಗ್ ಮಾಡಲು ಸುಲಭವಾಗುತ್ತದೆ. ಆದ್ದರಿಂದ ಯಾವುದೇ ತಂಡವು ರಾಯ್‌ಪುರದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಬಯಸುತ್ತದೆ.
ಉಭಯ ತಂಡಗಳ 11 ಆಟಗಾರರ ಪಟ್ಟಿ: ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ನ್ಯೂಜಿಲ್ಯಾಂಡ್ : ಫಿನ್ ಅಲೆನ್, ಡ್ವೇನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ಸಿ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಶಿಪ್ಲಿ, ಲೋಕಿ ಫರ್ಗುಸನ್, ಬ್ಲೇರ್ ಟೆಕ್ನರ್.
ಓದಿ: ಏಳನೇ ಬಾರಿ ಸರಣಿ ಗೆಲ್ಲುವ ತವಕದಲ್ಲಿ ಭಾರತ.. ನ್ಯೂಜಿಲ್ಯಾಂಡ್ಗೆ‘ಮಾಡು ಇಲ್ಲವೇ ಮಡಿ ಪಂದ್ಯ