ETV Bharat / sports

ಬೃಹತ್ ಟಾರ್ಗೆಟ್​ ಬೆನ್ನಟ್ಟಿ ಗೆದ್ದ ಇಂಗ್ಲೆಂಡ್​.. ಭಾರತದ ವಿರುದ್ಧ ಹೊಸ ದಾಖಲೆ ಬರೆದ ಆಂಗ್ಲರು

author img

By

Published : Jul 5, 2022, 5:08 PM IST

ಐತಿಹಾಸಿಕ ಟೆಸ್ಟ್​ ಪಂದ್ಯದಲ್ಲಿ ಬೃಹತ್ ರನ್​ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಭರ್ಜರಿ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಹೊಸದೊಂದು ರೆಕಾರ್ಡ್​ ಬರೆದಿದೆ.

England Record Chase In Edgbaston
England Record Chase In Edgbaston

ಬರ್ಮಿಂಗ್​ಹ್ಯಾಮ್​​(ಎಡ್ಜಬಾಸ್ಟನ್​): ಪ್ರವಾಸಿ ಭಾರತದ ವಿರುದ್ಧ ನಡೆದ ಐದನೇ ಟೆಸ್ಟ್​​ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಐತಿಹಾಸಿಕ ಗೆಲುವು ದಾಖಲು ಮಾಡಿದೆ. ಈ ಮೂಲಕ ಐದು ಟೆಸ್ಟ್​ ಪಂದ್ಯಗಳ ಸರಣಿ 2-2 ಅಂತರದಲ್ಲಿ ಮುಕ್ತಾಯಗೊಂಡಿದೆ. ಇದರ ಜೊತೆಗೆ ಗರಿಷ್ಠ ರನ್​ ಚೇಸ್ ಮಾಡಿ, ಗೆದ್ದಿರುವ ದಾಖಲೆ ನಿರ್ಮಿಸಿದೆ.

ಕೊನೆಯ ಟೆಸ್ಟ್​ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​​ನಲ್ಲಿ ಹಿನ್ನಡೆ ಅನುಭವಿಸಿದ ಹೊರತಾಗಿ, ಇಂಗ್ಲೆಂಡ್ ತಂಡ ಈ ಟೆಸ್ಟ್​ನಲ್ಲಿ ಗೆಲುವು ದಾಖಲು ಮಾಡಿದೆ. ಜೊತೆಗೆ ಬೃಹತ್ ಟಾರ್ಗೆಟ್​ ಬೆನ್ನಟ್ಟಿ ಜಯ ದಾಖಲು ಮಾಡಿ ಹೊಸದೊಂದು ರೆಕಾರ್ಡ್ ಸೃಷ್ಟಿಸಿದೆ.

ಇದನ್ನೂ ಓದಿರಿ: ಟೀಂ ಇಂಡಿಯಾ ಐತಿಹಾಸಿಕ ಗೆಲುವಿನ ಕನಸು ಭಗ್ನ.. ಟೆಸ್ಟ್​ ಸರಣಿ 2-2 ಅಂತರದಲ್ಲಿ ಡ್ರಾ

ಭಾರತದ ವಿರುದ್ಧ ಗರಿಷ್ಠ ಸ್ಕೋರ್​ ಚೇಸ್​​: ಟೀಂ ಇಂಡಿಯಾ ನೀಡಿದ್ದ 378 ಬೃಹತ್ ರನ್​ ಚೇಸ್ ಮಾಡಿದ ಇಂಗ್ಲೆಂಡ್​ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಗೆದ್ದಿದೆ. ಇಷ್ಟೊಂದು ರನ್​ ಚೇಸ್​ ಮಾಡಿದ್ದು ಇದೇ ಮೊದಲ ಸಲ ಎಂಬುದು ಗಮನಾರ್ಹ. ಈ ಹಿಂದೆ 1977ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 339 ರನ್​ಗಳನ್ನ ಚೇಸ್ ಮಾಡಿತ್ತು. ಇದಾದ ಬಳಿಕ 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್​​ಬರ್ಗ್​​ನಲ್ಲಿ 240 ರನ್​​ ಚೇಸ್ ಮಾಡಿತ್ತು. ಆದರೆ, 378ರನ್​ ಚೇಸ್​ ಮಾಡಿ ಗೆಲುವು ದಾಖಲು ಮಾಡಿದ್ದು ಇದೇ ಮೊದಲು ಎಂಬುದು ಗಮನಾರ್ಹ.

ಇಂಗ್ಲೆಂಡ್ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಜೋ ರೂಟ್ ಅಜೇಯ 142 ರನ್​ ಹಾಗೂ ಬೈರ್​ ಸ್ಟೋ 114ರನ್​ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.