ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ನತ್ತ ದಾಪುಗಾಲು ಇಟ್ಟಿದೆ. ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಕೆಎಲ್ ರಾಹುಲ್ ಪಡೆಗೆ ಎರಡನೇ ಪಂದ್ಯದ ಗೆಲುವಿಗೆ ಕೇವಲ 100 ರನ್ಗಳ ಬಾಕಿ ಇದೆ.
ಎರಡನೇ ಪಂದ್ಯದಲ್ಲಿ ತನ್ನ ಮೊದಲ ಇನ್ಸಿಂಗ್ಸ್ನಲ್ಲಿ ಬಾಂಗ್ಲಾದೇಶ 227 ರನ್ಗಳನ್ನು ಬಾರಿಸಿತ್ತು. ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 314 ರನ್ ಬಾರಿಸಿ 87 ರನ್ಗಳ ಮುನ್ನಡೆ ಸಾಧಿಸಿತ್ತು. ಇಂದು ಎರಡನೇ ಇನ್ನಿಂಗ್ಸ್ನಲ್ಲಿ 231 ರನ್ಗಳಿಗೆ ಬಾಂಗ್ಲಾ ತಂಡವನ್ನು ಟೀಂ ಇಂಡಿಯಾ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ.
-
Stumps on Day 3️⃣ of the second #BANvIND Test.#TeamIndia move to 45/4 & require 100 runs to win with @akshar2026 & @JUnadkat at the crease.
— BCCI (@BCCI) December 24, 2022 " class="align-text-top noRightClick twitterSection" data="
Scorecard - https://t.co/CrrjGfXPgL pic.twitter.com/d9w83R8qLt
">Stumps on Day 3️⃣ of the second #BANvIND Test.#TeamIndia move to 45/4 & require 100 runs to win with @akshar2026 & @JUnadkat at the crease.
— BCCI (@BCCI) December 24, 2022
Scorecard - https://t.co/CrrjGfXPgL pic.twitter.com/d9w83R8qLtStumps on Day 3️⃣ of the second #BANvIND Test.#TeamIndia move to 45/4 & require 100 runs to win with @akshar2026 & @JUnadkat at the crease.
— BCCI (@BCCI) December 24, 2022
Scorecard - https://t.co/CrrjGfXPgL pic.twitter.com/d9w83R8qLt
ಈ ಮೂಲಕ ಟೀಂ ಇಂಡಿಯಾ ಗೆಲುವಿಗೆ ಕೇವಲ 145 ರನ್ಗಳ ಟಾರ್ಗೆಟ್ ಇದೆ. ಆದರೆ, ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ಆರಂಭಿಕ ಆಘಾತ ಅನುಭವಿಸಿದ್ದು, ಇಂದು ಮೂರನೇ ದಿನದ ಅಂತ್ಯಕ್ಕೆ 23 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 45 ರನ್ಗಳನ್ನು ಕಲೆ ಹಾಕಿದೆ. ಪಂದ್ಯ ಗೆಲುವಿಗೆ 100 ರನ್ಗಳು ಬಾಕಿದ್ದು, 26 ರನ್ ಬಾರಿಸಿರುವ ಅಕ್ಷರ್ ಪಟೇಲ್ ಮತ್ತು 3 ರನ್ ಗಳಿಸಿರುವ ಜಯದೇವ್ ಉನದ್ಕತ್ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ: IND vs BAN 2nd Test: ಪಂತ್-ಅಯ್ಯರ್ ಆಕರ್ಷಕ ಆಟ, 2ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಮೇಲುಗೈ