ETV Bharat / sports

IND vs BAN 2nd Test: ಪಂತ್-ಅಯ್ಯರ್ ಆಕರ್ಷಕ ಆಟ, 2ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಮೇಲುಗೈ - ಕೆಎಲ್​ ರಾಹುಲ್

ಬಾಂಗ್ಲಾದೇಶದ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದ ಎರಡನೇ ದಿನದಾಟ ಮುಕ್ತಾಯವಾಗಿದ್ದು, ಭಾರತ 86 ಓವರ್​​ಗಳಲ್ಲಿ 314 ರನ್​ಗಳಿಗೆ ಆಲೌಟ್​ ಆಗಿದೆ. ಮೊದಲ ಇನ್ನಿಂಗ್ಸ್​ನಲ್ಲಿ ತಂಡ 87 ರನ್​ಗಳ ಮುನ್ನಡೆಯಲ್ಲಿದೆ.

ind-vs-ban-2nd-test-2-day-bangladesh-trail-by-80-runs
ಪಂತ್​ - ಅಯ್ಯರ್ ಆಕರ್ಷಕ ಆಟದಿಂದ ಮೇಲುಗೈ ಸಾಧಿಸಿದ ಟೀಂ ಇಂಡಿಯಾ
author img

By

Published : Dec 23, 2022, 6:17 PM IST

ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ರಿಷಭ್​ ಪಂತ್​ ಮತ್ತು ಶ್ರೇಯಸ್​ ಅಯ್ಯರ್ ಉಪಯುಕ್ತ ಅರ್ಧ ಶತಕದ ನೆರವಿನೊಂದಿಗೆ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 87 ರನ್​ಗಳ ಮುನ್ನಡೆ ಸಾಧಿಸಿತು. ಇಂದಿನ ಎರಡನೇ ದಿನದಾಟದಲ್ಲಿ ಭಾರತ 86 ಓವರ್​​ಗಳಲ್ಲಿ 314 ರನ್​ಗಳಿಗೆ ಆಲೌಟ್​ ಆಗಿದೆ. ದಿನದಾಂತ್ಯಕ್ಕೆ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಬಾಂಗ್ಲಾ 6 ಓವರ್​ಗಳಲ್ಲಿ 7 ರನ್​ ಕಲೆ ಹಾಕಿತು.

ಢಾಕಾದ ಶೇರ್​-ಎ-ಬಾಂಗ್ಲಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ಗುರುವಾರ ಮೊದಲ ದಿನ ಆಟದಲ್ಲೇ ಟೀಂ ಇಂಡಿಯಾದ ಬಾಂಗ್ಲಾ ತಂಡವನ್ನು 227 ರನ್​ಗಳಿಗೆ ಕಟ್ಟಿ ಹಾಕಿತ್ತು. ಇನ್ಸಿಂಗ್​ ಆರಂಭಿಸಿದ್ದ ಶುಭ್​ಮನ್​ ಗಿಲ್​ ಮತ್ತು ನಾಯಕ ಕೆ ಎಲ್​ ರಾಹುಲ್​​ ಎರಡನೇ ದಿನದಾಟಕ್ಕೆ ಕ್ರೀಸ್​ ಕಾಯ್ದುಕೊಂಡಿದ್ದರು. ಇಂದು ತಂಡದ ಒಟ್ಟು ಮೊತ್ತ 27 ರನ್​ ಆಗಿದ್ದಾಗ ರಾಹುಲ್​ (10) ಔಟಾಗಿ ನಿರಾಸೆ ಮೂಡಿಸಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಗಿಲ್​ (20) ಕೂಡ ಪೆವಿಲಿಯನ್​ ಸೇರಿದರು.

ಇದನ್ನೂ ಓದಿ: IPL ಹರಾಜು: ಸ್ಯಾಮ್‌ ಕರ್ರಾನ್‌ಗೆ ₹18 ಕೋಟಿ ಕೊಟ್ಟ ಪಂಜಾಬ್‌! ಚೆನ್ನೈ ತಂಡಕ್ಕೆ ಬೆನ್‌ ಸ್ಟೋಕ್ಸ್‌

ಮೊದಲ ಟೆಸ್ಟ್​ನಲ್ಲಿ ಉತ್ತಮವಾಗಿ ಬ್ಯಾಟ್​ ಬೀಸಿದ್ದ ಚೇತೇಶ್ವರ್ ಪೂಜಾರ ಮತ್ತು ಭರವಸೆಯ ಆಟಗಾರ ವಿರಾಟ್​ ಕೊಹ್ಲಿ ಅವರಿಂದಲೂ ಹೆಚ್ಚಿನ ರನ್​ಗಳನ್ನು ಕಲೆ ಹಾಕಲು ಸಾಧ್ಯವಾಗಲಿಲ್ಲ. 55 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ ಪೂಜಾರ 24 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. 73 ಎಸೆತಗಳನ್ನು ಎದುರಿಸಿದ ವಿರಾಟ್​ 3 ಬೌಂಡರಿಗಳೊಂದಿಗೆ ಕೇವಲ 24 ರನ್​ಗಳನ್ನಷ್ಟೇ ಬಾರಿಸಲು ಶಕ್ತವಾದರು. ಪರಿಣಾಮ ತಂಡದ ಮೊತ್ತ 94 ರನ್​ಗಳಾಗುವಷ್ಟರಲ್ಲೇ ಟೀಂ ಇಂಡಿಯಾ ಪ್ರಮುಖ 4 ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಪಂತ್​-ಅಯ್ಯರ್ ಅರ್ಧ ಶತಕ: ಈ ನಡುವೆ ಜೊತೆಯಾದ ರಿಷಭ್​ ಪಂತ್​ ಮತ್ತು ಶ್ರೇಯಸ್​ ಅಯ್ಯರ್ ಉತ್ತಮ ಬ್ಯಾಟ್​ ಬೀಸಿ ತಂಡಕ್ಕೆ ಆಸರೆಯಾದರು. ಈ ಜೋಡಿ ಐದನೇ ವಿಕೆಟ್​ಗೆ 188 ಎಸತೆಗಳಲ್ಲಿ 159 ರನ್​ಗಳ ಜೊತೆಯಾಟ ನೀಡಿ, ತಂಡವನ್ನು ಅಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿತು.

ಪಂತ್​ ಹಾಗೂ ಅಯ್ಯರ್ ಇಬ್ಬರೂ ಬಿರುಸಿನ ಬ್ಯಾಟ್​ ಆಕರ್ಷಕ ಅರ್ಧಶತಕವನ್ನೂ ಬಾರಿಸಿದರು. ಆದರೆ, ಪಂತ್​ ಶತಕದಂಚಿನಲ್ಲಿ ಎಡವಿದರು. 104 ಎಸೆತಗಳಲ್ಲಿ 5 ಸಿಕ್ಸರ್​ಗಳು ಮತ್ತು 7 ಬೌಂಡರಿಗಳೊಂದಿಗೆ 93 ರನ್​ಗಳನ್ನು ಗಳಿಸಿದ್ದ ಪಂತ್,​ ಮೆಹಿದಿ ಹಸನ್ ಮಿರಾಜ್ ಬೌಲಿಂಗ್​ನಲ್ಲಿ ಕ್ಯಾಚಿತ್ತ ನಿರ್ಮಿಸಿದರು.

ಇದನ್ನೂ ಓದಿ: ಕೆರಿಬಿಯನ್ ಕ್ರಿಕೆಟಿಗನಿಗೆ 16 ಕೋಟಿ ರೂ! ಕೆ.ಎಲ್‌ ರಾಹುಲ್‌ ತಂಡದಲ್ಲಿ ಪೂರನ್ ಆಟ

ನಂತರ ಬಂದ ಅಕ್ಷರ್​ ಪಟೇಲ್​ ಕೇವಲ 4 ರನ್​ಗಳಿಗೆ ಶಕೀಬ್​ ಅಲ್​ ಹಸನ್​ ಬೌಲಿಂಗ್​ನಲ್ಲಿ ಪೆವಿಲಿಯನ್​ ಸೇರಿಕೊಂಡರು. ಇದಾದ ಬಳಿಕ 87 ರನ್​ ಬಾರಿಸಿದ್ದ ಶ್ರೇಯಸ್​ ಅಯ್ಯರ್ ಅವರನ್ನೂ ಶಕೀಬ್​ ಅಲ್​ ಹಸನ್​ ಎಲ್​ಬಿ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು. ಅಯ್ಯರ್​ 105 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 10 ಬೌಂಡರಿಗಳೊಂದಿಗೆ 87 ರನ್ ಸಿಡಿಸಿದರು. ನಂತರದಲ್ಲಿ ಆರ್​.ಅಶ್ವಿನ್​ (12), ಜಯದೇವ್ ಉನಾದ್ಕತ್ (14*), ಉಮೇಶ್ ಯಾದವ್ (14) ಮತ್ತು ಮೊಹಮ್ಮದ್​ ಸಿರಾಜ್​ 7 ರನ್​ ಬಾರಿಸಿದರು.

ಇದನ್ನೂ ಓದಿ: ₹18.5 ಕೋಟಿ! ಐಪಿಎಲ್​ ಟೂರ್ನಿ ಇತಿಹಾಸದಲ್ಲೇ ಅತಿ ದುಬಾರಿ ಆಟಗಾರ ಸ್ಯಾಮ್ ಕರ್ರಾನ್!

ಬಾಂಗ್ಲಾ ಪರ ತೈಜುಲ್ ಇಸ್ಲಾಂ ಮತ್ತು ಶಕೀಬ್​ ಅಲ್​ ಹಸನ್ ತಲಾ 4 ವಿಕೆಟ್​ ಕಬಳಿಸಿ ಮಿಂಚಿದರು. ತಸ್ಕಿನ್ ಅಹ್ಮದ್ ಮತ್ತು ಮೆಹಿದಿ ಹಸನ್ ಮಿರಾಜ್ ತಲಾ ವಿಕೆಟ್​ ಪಡೆದರು. ಎರಡನೇ ಇನ್ನಿಂಗ್ಸ್​ ಆರಂಭಿಸಿದ ಬಾಂಗ್ಲಾದ ನಜ್ಮುಲ್ ಹೊಸೈನ್ ಶಾಂತೋ ಮತ್ತು ಜಾಕಿರ್ ಹಸನ್​ ಪರದಾಡಿದರು. ದಿನದಾಟ ಅಂತ್ಯಕ್ಕೆ 25 ಎಸೆತಗಳಲ್ಲಿ ಹೊಸೈನ್ ಕೇವಲ 5 ರನ್​ ಮತ್ತು 11 ಎಸೆತಗಳಲ್ಲಿ 2 ರನ್‌ ಬಾರಿಸಿರುವ ಜಾಕಿರ್ ಹಸನ್ ನಾಳೆಗೆ ಕ್ರೀಸ್​ ಕಾಯ್ದುಕೊಂಡಿದ್ದಾರೆ.​ 6 ಓವರ್​ಗಳಲ್ಲಿ ಬಾಂಗ್ಲಾ 7 ರನ್​ ಕಲೆ ಹಾಕಿದೆ.

ಇದನ್ನೂ ಓದಿ: 2nd Test Day 1: ಅಶ್ವಿನ್, ಉಮೇಶ್​ಗೆ ತಲಾ 4 ವಿಕೆಟ್.. 227 ರನ್​ಗಳಿಗೆ ಬಾಂಗ್ಲಾ ಸರ್ವಪತನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.