ಮುಂಬೈ: ಇಂಗ್ಲೆಂಡ್ ವನಿತೆಯರ ವಿರುದ್ಧದ ಟೆಸ್ಟ್ನಲ್ಲಿ 347 ರನ್ಗಳ ದಾಖಲೆಯ ಜಯ ಗಳಿಸಿದ್ದ, ಭಾರತದ ವನಿತೆಯರು ಆಸ್ಟ್ರೇಲಿಯಾ ವಿರುದ್ಧವೂ ಅದೇ ಲಯ ಮುಂದುವರಿಸಿ ಏಕೈಕ ಟೆಸ್ಟ್ ಸರಣಿಯಲ್ಲಿ 8 ವಿಕೆಟ್ಗಳಿಂದ ಜಯಭೇರಿ ಬಾರಿಸಿತು. ಬ್ಯಾಟಿಂಗ್, ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತದ ವನಿತೆಯರು ಕಾಂಗರೂ ಪಡೆಯನ್ನು ನಾಲ್ಕೇ ದಿನದಲ್ಲಿ ಹೊಸಕಿ ಹಾಕಿ, ಮೊದಲ ಜಯ ದಾಖಲಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡರು.
-
Vice-Captain Smriti Mandhana hit the winning runs as #TeamIndia register a 8⃣-wicket win over Australia in Mumbai 👏👏
— BCCI Women (@BCCIWomen) December 24, 2023 " class="align-text-top noRightClick twitterSection" data="
Scorecard ▶️ https://t.co/7o69J2XRwi#INDvAUS | @IDFCFIRSTBank pic.twitter.com/FiJorgZUMs
">Vice-Captain Smriti Mandhana hit the winning runs as #TeamIndia register a 8⃣-wicket win over Australia in Mumbai 👏👏
— BCCI Women (@BCCIWomen) December 24, 2023
Scorecard ▶️ https://t.co/7o69J2XRwi#INDvAUS | @IDFCFIRSTBank pic.twitter.com/FiJorgZUMsVice-Captain Smriti Mandhana hit the winning runs as #TeamIndia register a 8⃣-wicket win over Australia in Mumbai 👏👏
— BCCI Women (@BCCIWomen) December 24, 2023
Scorecard ▶️ https://t.co/7o69J2XRwi#INDvAUS | @IDFCFIRSTBank pic.twitter.com/FiJorgZUMs
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಪೂಜಾ ವಸ್ತ್ರಕಾರ್ ಮತ್ತು ಸ್ನೇಹ ರಾಣಾ ದಾಳಿಗೆ ಸಿಲುಕಿದ ಅಲಿಸ್ಸಾ ಹೀಲಿ ನೇತೃತ್ವದ ತಂಡ 219 ರನ್ಗೆ ಆಲೌಟ್ ಆಗಿತ್ತು. ದಿಟ್ಟ ಪ್ರದರ್ಶನ ನೀಡಿದ ಭಾರತ 406 ರನ್ ಗಳಿಸಿ 187 ರನ್ಗಳ ಮುನ್ನಡೆ ಸಾಧಿಸಿತು. ಎರಡನೇ ಇನಿಂಗ್ಸ್ನಲ್ಲಿ ಆಸೀಸ್ ಮತ್ತೆ ವೈಫಲ್ಯ ಅನುಭವಿಸಿ 261 ರನ್ ಗಳಿಸಿ, 74 ರನ್ಗಳ ಗುರಿ ನೀಡಿತು. ಅತ್ಯಲ್ಪ ಗುರಿಯನ್ನು ಮುಟ್ಟಿದ ಭಾರತದ ವನಿತೆಯರು ಜಯದ ಸಿಹಿ ಅನುಭವಿಸಿದರು.
-
Back-to-back Test wins for @BCCIWomen! 🏏 They yearned for the purest form, and they conquered it with brilliance. Kudos to @ImHarmanpreet, @mandhana_smriti, @amolmuzumdar11, and our phenomenal girls, backed by the incredible support staff. History made today! 🇮🇳#INDvsAus… pic.twitter.com/gFMp6QVxop
— Jay Shah (@JayShah) December 24, 2023 " class="align-text-top noRightClick twitterSection" data="
">Back-to-back Test wins for @BCCIWomen! 🏏 They yearned for the purest form, and they conquered it with brilliance. Kudos to @ImHarmanpreet, @mandhana_smriti, @amolmuzumdar11, and our phenomenal girls, backed by the incredible support staff. History made today! 🇮🇳#INDvsAus… pic.twitter.com/gFMp6QVxop
— Jay Shah (@JayShah) December 24, 2023Back-to-back Test wins for @BCCIWomen! 🏏 They yearned for the purest form, and they conquered it with brilliance. Kudos to @ImHarmanpreet, @mandhana_smriti, @amolmuzumdar11, and our phenomenal girls, backed by the incredible support staff. History made today! 🇮🇳#INDvsAus… pic.twitter.com/gFMp6QVxop
— Jay Shah (@JayShah) December 24, 2023
ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸತತ ಸೋಲು ಕಂಡಿದ್ದ ಭಾರತ ಗೆಲ್ಲುವ ಛಲದೊಂದಿಗೆ ಕಣಕ್ಕಿಳಿಯಿತು. ಇದನ್ನು ಮೊದಲ ಇನಿಂಗ್ಸ್ನಲ್ಲೇ ತಂಡ ತೋರಿಸಿಕೊಟ್ಟಿತು. ಬೌಲಿಂಗ್ ಅಸ್ತ್ರಗಳಾದ ಪೂಜಾ ವಸ್ತ್ರಕಾರ್ 4, ಸ್ನೇಹ ರಾಣಾ 3, ದೀಪ್ತಿ ಶರ್ಮಾ 2 ವಿಕೆಟ್ ಪಡೆದು ಮಾರಕ ದಾಳಿ ನಡೆಸಿದರು. ಇದರಿಂದ ಅಲಿಸ್ಸಾ ಹೀಲಿ ಪಡೆ 219 ರನ್ಗೆ ಆಲೌಟ್ ಆಯಿತು. ಭಾರತದ ಪರವಾಗಿ ಸ್ಮೃತಿ ಮಂಧಾನ, ರಿಚಾ ಘೋಷ್, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ ಅರ್ಧಶತಕ ಬಾರಿಸುವ ಮೂಲಕ 409 ರನ್ಗಳ ಬೃಹತ್ ಮೊತ್ತ ಪೇರಿಸಿದರು. ಜೊತೆಗೆ 187 ರನ್ಗಳ ಮುನ್ನಡೆ ಸಾಧಿಸಿದರು.
-
𝙃𝙄𝙎𝙏𝙊𝙍𝙔 𝙄𝙉 𝙈𝙐𝙈𝘽𝘼𝙄! 🙌#TeamIndia women register their first win against Australia in Test Cricket 👏👏
— BCCI Women (@BCCIWomen) December 24, 2023 " class="align-text-top noRightClick twitterSection" data="
Scorecard ▶️ https://t.co/7o69J2XRwi#INDvAUS | @IDFCFIRSTBank pic.twitter.com/R1GKeuRa69
">𝙃𝙄𝙎𝙏𝙊𝙍𝙔 𝙄𝙉 𝙈𝙐𝙈𝘽𝘼𝙄! 🙌#TeamIndia women register their first win against Australia in Test Cricket 👏👏
— BCCI Women (@BCCIWomen) December 24, 2023
Scorecard ▶️ https://t.co/7o69J2XRwi#INDvAUS | @IDFCFIRSTBank pic.twitter.com/R1GKeuRa69𝙃𝙄𝙎𝙏𝙊𝙍𝙔 𝙄𝙉 𝙈𝙐𝙈𝘽𝘼𝙄! 🙌#TeamIndia women register their first win against Australia in Test Cricket 👏👏
— BCCI Women (@BCCIWomen) December 24, 2023
Scorecard ▶️ https://t.co/7o69J2XRwi#INDvAUS | @IDFCFIRSTBank pic.twitter.com/R1GKeuRa69
ದೊಡ್ಡ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಕಾಂಗರೂ ಪಡೆ ಮತ್ತೆ ಸ್ನೇಹ ರಾಣಾ ದಾಳಿಗೆ ಸಿಲುಕಿ 261 ರನ್ಗೆ ಗಂಟುಮೂಟೆ ಕಟ್ಟಿತು. ಇದರಿಂದ ಕೇವಲ 75 ರನ್ಗಳ ಗೆಲುವಿನ ಗುರಿ ನೀಡಿತು. 4 ವಿಕೆಟ್ ಕಿತ್ತ ಸ್ನೇಹ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ರಾಜೇಶ್ವರಿ ಗಾಯಕ್ವಾಡ್, ಹರ್ಮನ್ಪ್ರೀತ್ 2 ವಿಕೆಟ್ ಪಡೆದರು. ಅತ್ಯಲ್ಪ ಗುರಿಯನ್ನು ಭಾರತ 2 ವಿಕೆಟ್ ಕಳೆದುಕೊಂಡು 18.4 ಓವರ್ಗಳಲ್ಲಿ ಮುಟ್ಟಿತು.
ಮಿಂಚಿದ ಸ್ಮೃತಿ ಮಂಧಾನ, ಸ್ನೇಹ ರಾಣಾ: ಪಂದ್ಯದ ಗೆಲುವಿನಲ್ಲಿ ಸ್ಮೃತಿ ಮಂಧಾನ ಮತ್ತು ಸ್ನೇಹ ರಾಣಾ ಪಾಲು ಹೆಚ್ಚಿದೆ. ಸ್ಮೃತಿ ಮೊದಲ ಇನಿಂಗ್ಸ್ನಲ್ಲಿ 74, 2ನೇ ಇನಿಂಗ್ನಲ್ಲಿ 38 ಸೇರಿ 112 ರನ್ ಗಳಿಸಿದರು. ಎರಡೂ ಇನಿಂಗ್ಸ್ಗಳಲ್ಲಿ 7 ವಿಕೆಟ್ ಕಿತ್ತು ಕಾಂಗರೂಗಳನ್ನು ಕಾಡಿದ ಸ್ನೇಹ ರಾಣಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
-
3⃣ wickets in the first innings 👌
— BCCI Women (@BCCIWomen) December 24, 2023 " class="align-text-top noRightClick twitterSection" data="
4⃣ wickets in the second! 😎
Congratulations to @SnehRana15 who is adjudged the Player of the Match in the #INDvAUS Test 👏👏
Scorecard ▶️ https://t.co/7o69J2XRwi#TeamIndia | @IDFCFIRSTBank pic.twitter.com/x7PcTdIaMu
">3⃣ wickets in the first innings 👌
— BCCI Women (@BCCIWomen) December 24, 2023
4⃣ wickets in the second! 😎
Congratulations to @SnehRana15 who is adjudged the Player of the Match in the #INDvAUS Test 👏👏
Scorecard ▶️ https://t.co/7o69J2XRwi#TeamIndia | @IDFCFIRSTBank pic.twitter.com/x7PcTdIaMu3⃣ wickets in the first innings 👌
— BCCI Women (@BCCIWomen) December 24, 2023
4⃣ wickets in the second! 😎
Congratulations to @SnehRana15 who is adjudged the Player of the Match in the #INDvAUS Test 👏👏
Scorecard ▶️ https://t.co/7o69J2XRwi#TeamIndia | @IDFCFIRSTBank pic.twitter.com/x7PcTdIaMu
ಆಸೀಸ್ ವಿರುದ್ಧ ಮೊದಲ ಜಯ: ಭಾರತ ಮತ್ತು ಆಸ್ಟ್ರೇಲಿಯಾ ವನಿತೆಯರ ನಡುವೆ ಈವರೆಗೂ 11 ಟೆಸ್ಟ್ಗಳು ನಡೆದಿವೆ. ಇದರಲ್ಲಿ 10 ರಲ್ಲಿ ಭಾರತ ಸೋಲು ಕಂಡಿದೆ. ಮುಂಬೈನಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಹರ್ಮನ್ಪ್ರೀತ್ ಕೌರ್ ಪಡೆ ಗೆಲುವಿನ ಖಾತೆ ತೆರೆಯಿತು.
ಇದನ್ನೂ ಓದಿ: ಮಹಿಳಾ ಕ್ರಿಕೆಟ್ ಟೆಸ್ಟ್: ಭಾರತದ ಬಿಗು ಬೌಲಿಂಗ್ ದಾಳಿ, ಆಸೀಸ್ಗೆ 46 ರನ್ಗಳ ಮುನ್ನಡೆ