ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಭಾರತ ತನ್ನಲ್ಲೇ ಉಳಿಸಿಕೊಂಡಿದೆ. ಸರಣಿಯಲ್ಲಿ 2-1ರಿಂದ ಜಯ ಸಾಧಿಸಿದ್ದಲ್ಲದೇ, ಜೂನ್ 7 ರಂದು ಇಂಗ್ಲೆಂಡ್ನಲ್ಲಿ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಮಾರ್ಚ್ 17 ರಿಂದ ಆಸಿಸ್ ಎದುರು ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿ ಏಕದಿನ ವಿಶ್ವಕಪ್ ಮತ್ತು ಏಷ್ಯಾ ಕಪ್ ಹಿನ್ನೆಲೆಯಲ್ಲಿ ಭಾರತಕ್ಕೆ ಮಹತ್ವದ್ದಾಗಿದೆ. ಈ ಏಕದಿನ ಸರಣಿ ನಂತರ ಭಾರತದಲ್ಲಿ ಪುರುಷರ ಐಪಿಎಲ್ ಪ್ರಾರಂಭವಾಗುತ್ತದೆ.
ಟೀಂ ಇಂಡಿಯಾ ಮಾರ್ಚ್ 17 ರಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಮೊದಲ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ. ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ, ಅವರ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ತಂಡದ ನಾಯಕತ್ವವನ್ನು ಹೊಂದಿದ್ದಾರೆ. ಇಡೀ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ತಂಡದ ಉಪನಾಯಕರಾಗಿರುತ್ತಾರೆ. ತಂಡಕ್ಕೆ ಶಾರ್ದೂಲ್ ಠಾಕೂರ್ ಮೆರಳಿದ್ದಾರೆ.
-
Hello and welcome to the Wankhede Stadium, where #TeamIndia will kickstart the ODI series against Australia.#INDvAUS @mastercardindia pic.twitter.com/OXt3tuOS14
— BCCI (@BCCI) March 15, 2023 " class="align-text-top noRightClick twitterSection" data="
">Hello and welcome to the Wankhede Stadium, where #TeamIndia will kickstart the ODI series against Australia.#INDvAUS @mastercardindia pic.twitter.com/OXt3tuOS14
— BCCI (@BCCI) March 15, 2023Hello and welcome to the Wankhede Stadium, where #TeamIndia will kickstart the ODI series against Australia.#INDvAUS @mastercardindia pic.twitter.com/OXt3tuOS14
— BCCI (@BCCI) March 15, 2023
ಮಂಗಳವಾರ ಬೆಳಗ್ಗೆ ಮುಂಬೈಗೆ ಪ್ರಮುಖ ಆಟಗಾರರು ತಲುಪಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಐದು ಪಂದ್ಯಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಟೀಂ ಇಂಡಿಯಾ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ ಎರಡರಲ್ಲಿ ಗೆದ್ದಿದೆ. ಬಹಳಾ ಸಮಯದ ನಂತರ ಜಡೇಜಾ ಏಕದಿನ ಕ್ರಿಕೆಟ್ನಲ್ಲಿ ಆಡುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಮೂರನೇ ಪಂದ್ಯದದಲ್ಲಿ ಗಾಯಗೊಂಡು ಹೊರಗುಳಿದಿದ್ದರು ಅವರ ಬದಲಿ ತಂಡದಲ್ಲಿ ಯಾರನ್ನು ಸೂಚಿಸಲಾಗಿಲ್ಲ.
ವಿರಾಟ್ ಬ್ಯಾಟ್ನಿಂದ ಈ ದಾಖಲೆಗಳ ನಿರೀಕ್ಷೆ: ವಿರಾಟ್ ಕೊಹ್ಲಿ 272 ನೇ ಏಕದಿನ ಪಂದ್ಯವನ್ನು ಆಡಲಿದ್ದಾರೆ. ವಿರಾಟ್ 271 ಏಕದಿನ ಪಂದ್ಯಗಳಲ್ಲಿ 57.7 ಸರಾಸರಿಯಲ್ಲಿ 12,809 ರನ್ ಗಳಿಸಿದ್ದಾರೆ. ಕೊಹ್ಲಿ 191 ರನ್ ಗಳಿಸಿದರೆ 13,000 ರನ್ ಪೂರೈಸುತ್ತಾರೆ. ಏಕದಿನದಲ್ಲಿ ಇಷ್ಟು ರನ್ ದಾಖಲಿಸಿದ ಭಾರತದ ಎರಡನೇ ಮತ್ತು ವಿಶ್ವದ 5ನೇ ಬ್ಯಾಟರ್ ಆಗಲಿದ್ದಾರೆ.
ಸಚಿನ್ ದಾಖಲೆ ಸರಿಗಟ್ಟುತ್ತಾರ ವಿರಾಟ್, ರೋಹಿತ್?: ವಿರಾಟ್ ಮತ್ತು ರೋಹಿತ್ ಶರ್ಮಾ ಇದುವರೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ 8-8 ಶತಕಗಳನ್ನು ಗಳಿಸಿದ್ದಾರೆ. ಒಂದು ವೇಳೆ ಕೊಹ್ಲಿ ಹಾಗೂ ರೋಹಿತ್ ಸರಣಿಯಲ್ಲಿ 2 ಶತಕ ಬಾರಿಸಿದರೆ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ 9 ಶತಕಗಳನ್ನು ಗಳಿಸಿದ್ದಾರೆ. ಇಬ್ಬರೂ ಶತಕ ಗಳಿಸಿದರೆ ತೆಂಡೂಲ್ಕರ್ ದಾಖಲೆ ಸರಿಗಟ್ಟಲಿದ್ದಾರೆ.
ಪಾಂಟಿಂಗ್ ದಾಖಲೆ ಮುರಿಯುತ್ತಾರ ವಿರಾಟ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರಿನಲ್ಲಿದೆ. ಈ ಸರಣಿಯಲ್ಲಿ ಕೊಹ್ಲಿ 82 ರನ್ ಗಳಿಸಿದರೆ, ಪಾಂಟಿಂಗ್ ಅವರ 2164 ರನ್‌ಗಳ ದಾಖಲೆಯನ್ನು ಮುರಿಯಲಿದ್ದಾರೆ. ವಿರಾಟ್ ಆಸ್ಟ್ರೇಲಿಯಾ ವಿರುದ್ಧ 43 ಏಕದಿನ ಪಂದ್ಯಗಳಲ್ಲಿ 2083 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸ ಭಾರತ ಏಕದಿನ ವೇಳಾಪಟ್ಟಿ:
ಮೊದಲ ಏಕದಿನ ಪಂದ್ಯ: ಮಾರ್ಚ್ 17, ಮುಂಬೈ
ಎರಡನೇ ಏಕದಿನ ಪಂದ್ಯ: ಮಾರ್ಚ್ 19, ವಿಶಾಖಪಟ್ಟಣ
ಮೂರನೇ ಏಕದಿನ ಪಂದ್ಯ: ಮಾರ್ಚ್ 22, ಚೆನ್ನೈ
ಇದನ್ನೂ ಓದಿ: ಏಕದಿನ ಸರಣಿಯ ನಾಯಕತ್ವದ ಹೊಣೆಯೂ ಸ್ಮಿತ್ ಹೆಗಲಿಗೆ