ETV Bharat / sports

ಭಾರತವನ್ನು ಅದರ ನೆಲದಲ್ಲಿ ಸೋಲಿಸುವುದು ಅಸಾಧ್ಯ: ಪಾಕ್​ ಮಾಜಿ ಆಟಗಾರರ ಬಣ್ಣನೆ - ರಮೀಜ್​ ರಾಜಾ ಭಾರತ ತಂಡವನ್ನು ಹಾಡಿ ಹೊಗಳಿದ್ದಾರೆ

ಬಾರ್ಡರ್​ ಗವಾಸ್ಕರ್​ ಟ್ರೋಫಿ - ಭಾರತ ಆಸ್ಟ್ರೇಲಿಯಾ ಟೆಸ್ಟ್​ ಸರಣಿ - ಭಾರತ ತಂಡದ ಪ್ರದರ್ಶನ ಹೊಗಳಿದ ಪಾಕ್​ ಮಾಜಿ ಆಟಗಾರ - ಪಾಕ್​ ಕ್ರಿಕೆಟ್​ ಮಂಡಳಿ ಮಾಜಿ ಅಧ್ಯಕ್ಷ ರಮೀಜ್​ ರಾಜಾ - ಭಾರತ ಕ್ರಿಕೆಟ್​ ಮೆಚ್ಚಿದ ರಮೀಜ್​ ರಾಜಾ

ಪಾಕ್​ ಮಾಜಿ ಆಟಗಾರ ಬಣ್ಣನೆ
ಪಾಕ್​ ಮಾಜಿ ಆಟಗಾರ ಬಣ್ಣನೆ
author img

By

Published : Feb 21, 2023, 2:09 PM IST

ನವದೆಹಲಿ: ತವರು ನೆಲದಲ್ಲಿ ಭಾರತ ಕ್ರಿಕೆಟ್​ ತಂಡವನ್ನು ಯಾವುದೇ ತಂಡಗಳು ಸೋಲಿಸುವುದು ಅಸಾಧ್ಯ. ಈಗಿನ ಆಟಗಾರರು ಅಷ್ಟು ಬಲಿಷ್ಠವಾಗಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಮಾಜಿ ಅಧ್ಯಕ್ಷ ರಮೀಜ್​ ರಾಜಾ ಭಾರತ ತಂಡವನ್ನು ಹಾಡಿ ಹೊಗಳಿದ್ದಾರೆ.

ತಮ್ಮದೇ ಯೂಟ್ಯೂಬ್​ ಚಾನಲ್​ನಲ್ಲಿ ಭಾರತ ಕ್ರಿಕೆಟ್​ ತಂಡದ ವಿಜಯಯಾತ್ರೆಯ ಗುಣಗಾನ ಮಾಡಿರುವ ರಮೀಜ್​ ರಾಜಾ, ಭಾರತ ತಂಡ ತನ್ನ ನೆಲದಲ್ಲಿ ಎಂದಿಗೂ ಬಲಿಷ್ಠ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಪ್ರದರ್ಶನ ಇದಕ್ಕೆ ಸಾಕ್ಷಿ. ಅದರಲ್ಲೂ ರವೀಂದ್ರ ಜಡೇಜಾ, ಅಶ್ವಿನ್​, ಅಕ್ಷರ್​ ಪಟೇಲ್​ ಅವರ ಆಟ ಅಮೋಘವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ನಾಯಕ ರೋಹಿತ್ ಶರ್ಮಾ ನೇತೃತ್ವದ ತಂಡವನ್ನು ಬಹುವಾಗಿ ಮೆಚ್ಚಿಕೊಂಡಿರುವ ರಮೀಜ್​ ರಾಜಾ, ಟೆಸ್ಟ್​ ಪಂದ್ಯಗಳ ಎರಡೂ ಇನ್ನಿಂಗ್ಸ್‌ಗಳಲ್ಲಿ ಭಾರತೀಯ ಸ್ಪಿನ್​ ಪಡೆ ಅಸಾಧಾರಣ ಪ್ರದರ್ಶನ ತೋರಿತು. ಅದರಲ್ಲೂ ರವೀಂದ್ರ ಜಡೇಜಾ ಆಟ ನಿಜಕ್ಕೂ ನಂಬಲಸಾಧ್ಯ. ಜಡ್ಡು ಸ್ಪಿನ್​ ದಾಳಿಯನ್ನು ಯಾವುದೇ ಆಸೀಸ್​ ಆಟಗಾರರು ಎದುರಿಸಲು ಪರದಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಕ್ಷರ್​ ಪಟೇಲ್​ ಸಾಹಸ ಪ್ರಸ್ತಾಪ: ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರ ಆಟವನ್ನೂ ಹೊಗಳಿರುವ ರಾಜಾ, 2ನೇ ಟೆಸ್ಟ್​ನ ಮೊದಲ ಇನಿಂಗ್ಸ್​ನಲ್ಲಿ ಭಾರತ ಕುಸಿತ ಕಂಡಾಗ 74 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು. ಇದು ತಂಡಕ್ಕೆ ನೆರವಾಯಿತು. ಒತ್ತಡದಲ್ಲಿ ಅಕ್ಷರ್​ ಪಟೇಲ್​ ಅದ್ಭುತವಾಗಿ ಬ್ಯಾಟ್​ ಮಾಡಿದರು. ಭಾರತವನ್ನು ಕಡಿಮೆ ಸ್ಕೋರ್‌ಗೆ ಆಲೌಟ್ ಮಾಡುವ ಆಸ್ಟ್ರೇಲಿಯಾದ ಎಲ್ಲ ತಂತ್ರವನ್ನು ಪಟೇಲ್​ ಹುಸಿ ಮಾಡಿದರು. ಅಶ್ವಿನ್​ ಕೂಡ ಉತ್ತಮ ಜೊತೆಯಾಟ ನೀಡಿದ್ದನ್ನೂ ಮೆಚ್ಚಿದ್ದಾರೆ.

ಸ್ಪಿನ್​ ಪಿಚ್​ ಆರೋಪಕ್ಕೆ ಟೀಕೆ: ಭಾರತ ಪೂರ್ಣ ಸ್ಪಿನ್​ ಪಿಚ್​ ತಯಾರಿಸಿ ಆಸ್ಟ್ರೇಲಿಯಾವನ್ನು ಕಟ್ಟಿಹಾಕುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಆಸೀಸ್​ ತವರು ನೆಲವಾದ ಪರ್ತ್​, ಬ್ರಿಸ್ಬೇನ್​ ಮೈದಾನದಲ್ಲಿ ವೇಗದ ಪಿಚ್​ ತಯಾರಿಸಿಕೊಳ್ಳುತ್ತದೆ. ಅದೇ ರೀತಿ ಇಂಡಿಯಾ ದೆಹಲಿ, ನಾಗ್ಪುರದಲ್ಲಿ ಸ್ಪಿನ್​ ಸ್ನೇಹಿ ಪಿಚ್​ ರೂಪಿಸಿದೆ. ಅದರಲ್ಲಿ ತಪ್ಪಿಲ್ಲ. ತಂಡ ಪ್ರವಾಸಕ್ಕೂ ಮೊದಲು ಉತ್ತಮ ತಯಾರಿ ನಡೆಸದಿರುವುದೇ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.

ಅದ್ಭುತ ಸ್ಪಿನ್ನರ್​ಗಳನ್ನು ಹೊಂದಿರುವ ಭಾರತವನ್ನು​ ಅದರದ್ದೇ ನೆಲದಲ್ಲಿ ಸೋಲಿಸುವುದು ಅಸಾಧ್ಯ. ತಂಡದ ಸ್ಪಿನ್​ ಎದುರು ಆಸೀಸ್​ ಆಟ ಸಾಧಾರಣವಾಗಿದೆ. 2ನೇ ಟೆಸ್ಟ್​ನ ಒಂದೇ ಅವಧಿಯಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡಿತು. ಜಡೇಜಾ ಅಸಾಧಾರಣ ಬೌಲಿಂಗ್ ಇದಕ್ಕೆ ಕಾರಣ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹೇಳಿದರು.

ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದ್ದು, ಸರಣಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ ತಲುಪಲು ಇನ್ನೊಂದು ಪಂದ್ಯ ಗೆದ್ದರೂ ಸಾಕು. ಆಸ್ಟ್ರೇಲಿಯಾ ಟ್ರೋಫಿ ಗೆಲ್ಲುವ ಆಸೆ ಕೈಬಿಟ್ಟರೂ ಉಳಿದ ಎರಡು ಟೆಸ್ಟ್‌ಗಳಲ್ಲಿ ಗೆದ್ದು ಸರಣಿಯನ್ನು ಸಮಬಲಗೊಳಿಸಿಕೊಳ್ಳುವ ಗುರಿ ಹೊಂದಿದ್ದಾರೆ.

ಓದಿ: ಭಾರತದ ಸ್ಪಿನ್​ ದಾಳಿಗೆ ಆಸ್ಟ್ರೇಲಿಯಾ ತತ್ತರ.. ಬ್ಯಾಟಿಂಗ್​ ಸುಧಾರಣೆಗೆ ನೆರವು ನೀಡಲು ಸಿದ್ಧ: ಮಾಜಿ ಕ್ರಿಕೆಟಿಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.