ಓವಲ್ (ಲಂಡನ್): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಬಿಗಿ ಹಿಡಿತ ಸಾಧಿಸುವ ಪ್ರಯತ್ನ ಮಾಡಿದೆ. ಆಸ್ಟ್ರೇಲಿಯಾ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ಗಳಿಗೆ ಕಡಿವಾಣ ಹಾಕುವಲ್ಲಿ ಬೌಲರ್ಗಳ ಯಶಸ್ವಿಯಾಗಿದೆ. ಮೂರನೇ ದಿನದಾಟ ಅಂತ್ಯಕ್ಕೆ ಆಸೀಸ್ ತಂಡ ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ 296 ರನ್‌ಗಳ ಮುನ್ನಡೆ ಪಡೆದಿದೆ.
ಲಂಡನ್ನ ಓವಲ್ ಮೈದಾನದಲ್ಲಿ ಜುಲೈ 7ರಿಂದ ಫೈನಲ್ ಪಂದ್ಯ ಆರಂಭವಾಗಿದೆ. ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್‌ಗಳ ಬೃಹತ್ ಕಲೆ ಹಾಕಿತ್ತು. ಇಂದು ಟೀಂ ಇಂಡಿಯಾ ಅಜಿಂಕ್ಯ ರಹಾನೆ (89) ಮತ್ತು ಶಾರ್ದೂಲ್ ಠಾಕೂರ್ (51) ಅವರ ನೆರವಿನಿಂದ 296 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ನಂತರ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ಬ್ಯಾಟರ್ಗಳನ್ನು ಭಾರತೀಯ ಬೌಲರ್ಗಳು ಕಟ್ಟಿ ಹಾಕುವಲ್ಲಿ ಸಫಲರಾಗಿದ್ದಾರೆ.
ಕೇವಲ 1 ರನ್ಗೆ ಆರಂಭಿಕ ಡೇವಿಡ್ ವಾರ್ನರ್ ಅವರನ್ನು ಮೊಹಮ್ಮದ್ ಸಿರಾಜ್ ಪೆವಿಲಿಯನ್ಗೆ ಸೇರಿಸಿ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ನೀಡಿದರು. ಮತ್ತೊಂದೆಡೆ, ಉಸ್ಮಾನ್ ಖಜಾವಾ ಅವರನ್ನು 13 ರನ್‌ಗಳಿಗೆ ಉಮೇಶ್ ಯಾದವ್ ಔಟ್ ಮಾಡಿದರು. ಇದರಿಂದ ತಂಡದ ಮೊತ್ತ 24 ರನ್ಗಳು ಆಗುವಷ್ಟರಲ್ಲಿ ಆಸೀಸ್ ಪ್ರಮುಖ ಎರಡು ವಿಕೆಟ್ಗಳನ್ನು ಕಳೆದುಕೊಂಡಿತ್ತು.
ಮತ್ತೊಂದೆಡೆ, ಮೂರನೇ ವಿಕೆಟ್ಗೆ ಮಾರ್ನಸ್ ಲ್ಯಾಬುಸ್ಚಾಗ್ನೆ ಹಾಗೂ ಸ್ಟೀವನ್ ಸ್ಮಿತ್ 62 ರನ್‌ಗಳ ಜೊತೆಯಾದ ನೀಡಿ ತಂಡಕ್ಕೆ ಆಸರೆಯಾದರು. 34 ರನ್ಗಳಿಸಿ ಆಡುತ್ತಿದ್ದ ಸ್ಟೀವನ್ ಸ್ಮಿತ್ ಅವರನ್ನು ರವೀಂದ್ರ ಜಡೇಜಾ ಔಟ್ ಮಾಡಿದರು. ಅಷ್ಟೇ ಅಲ್ಲ, ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾಗೆ ತಲೆ ನೋವಾಗಿದ್ದ ಟ್ರಾವಿಸ್ ಹೆಡ್ ಅವರನ್ನೂ 18 ರನ್‌ಗಳಿಗೆ ಜಡೇಜಾ ಪೆವಿಲಿಯನ್ ಸೇರಿದರು.
ಈ ಮೂಲಕ ಮತ್ತೆ ಭಾರತದ ಹಿಡಿತ ಸಾಧಿಸುವಂತೆ ಮಾಡಿದರು. ಸದ್ಯ 41 ರನ್ ಗಳಿಸಿರುವ ಮಾರ್ನಸ್ ಲ್ಯಾಬುಸ್ಚಾಗ್ನೆ ಹಾಗೂ ಕ್ಯಾಮರೂನ್ ಗ್ರೀನ್ (7) ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ಪರ ಜಡೇಜಾ 2 ವಿಕೆಟ್ ಪಡೆದು ಮಿಂಚಿದರೆ, ಮೊಹಮ್ಮದ್ ಸಿರಾಜ್ ಹಾಗೂ ಉಮೇಶ್ ಯಾದವ್ 1 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: WTC Final: ಭಾರತಕ್ಕೆ ರಹಾನೆ- ಶಾರ್ದೂಲ್ ಬಲ, 296 ರನ್‌ಗಳಿಗೆ ಆಲೌಟ್; ಆಸ್ಟ್ರೇಲಿಯಾಕ್ಕೆ 173 ರನ್‌ಗಳ ಮುನ್ನಡೆ