ETV Bharat / sports

WTC Final: ಆಸ್ಟ್ರೇಲಿಯಾ ಬಿಗಿ ಹಿಡಿತ; ಹೆಡ್‌ 146, ಸ್ಮಿತ್‌ 95; ನಡೆಯದ ಭಾರತದ ವೇಗಿಗಳ ಆಟ

ಲಂಡನ್​ನ ಓವಲ್​ ಮೈದಾನದಲ್ಲಿ​​ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೊದಲ ದಿನದಾಟ ಅಂತ್ಯವಾಗಿದೆ.

Etv Bharat
Etv Bharat
author img

By

Published : Jun 7, 2023, 11:01 PM IST

Updated : Jun 8, 2023, 2:35 PM IST

ಓವಲ್​ (ಲಂಡನ್): ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ (ಡಬ್ಲ್ಯೂಟಿಸಿ) ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ದಿನದಾಟ ಅಂತ್ಯಕ್ಕೆ 85 ಓವರುಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 327 ರನ್​ ಬಾರಿಸಿ ಬೃಹತ್​ ಮೊತ್ತ ಕಲೆ ಹಾಕುವತ್ತ ಮುನ್ನಡೆದಿದೆ. ನಾಲ್ಕನೇ ವಿಕೆಟ್​ಗೆ ಟ್ರಾವಿಸ್ ಹೆಡ್​ ಹಾಗೂ ಸ್ಟೀವ್ ಸ್ಮಿತ್​​ ಭರ್ಜರಿ ಜೊತೆಯಾಟ ನೀಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ. ಟ್ರಾವಿಸ್ ಹೆಡ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಬ್ಯಾಟ್​ ಬೀಸಿ ಶತಕ ಸಿಡಿಸಿದರೆ, ಸ್ಮಿತ್​ ತಾಳ್ಮೆಯ ಆಟದ ಮೂಲಕ ಉತ್ತಮ ಸಾಥ್​ ನೀಡಿದರು.

ಇದಕ್ಕೂ ಮೊದಲು ಟಾಸ್ ಗೆದ್ದ ಭಾರತದ ನಾಯಕ ಬೌಲಿಂಗ್​ ಆಯ್ದುಕೊಂಡರು. ಊಟದ ವಿರಾಮದ ವೇಳೆಗೆ ಟೀಂ ಇಂಡಿಯಾ ಉತ್ತಮ ಹಿಡಿತ ಸಾಧಿಸಿತು. 3.4 ಓವರ್​ನಲ್ಲೇ ಮೊಹಮ್ಮದ್ ಸಿರಾಜ್ ಆರಂಭಿಕ ಉಸ್ಮಾನ್ ಖವಾಜಾ ಶೂನ್ಯಕ್ಕೆ ಔಟ್ ಮಾಡಿದರು. 43 ರನ್​ ಗಳಿಸಿ ಆಡುತ್ತಿದ್ದ ಮತ್ತೊಬ್ಬ ಆರಂಭಿಕ ಡೇವಿಡ್​ ವಾರ್ನರ್​ ಅವರನ್ನು ಶಾರ್ದೂಲ್ ಠಾಕೂರ್​ ಪೆವಿಲಿಯನ್​ ಸೇರಿಸಿದರು. ಇದರಿಂದ 23 ಓವರ್​ಗೆ ಆಸೀಸ್ 74 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡಿತ್ತು. ನಂತರದ ಸೆಷನ್​ಗಳಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಕಮ್​ಬ್ಯಾಕ್​ ಮಾಡಿತು. ಚಹಾ ವಿರಾಮಕ್ಕೆ 97 ರನ್​ ಕಲೆ ಹಾಕಿ ಒಂದು ವಿಕೆಟ್ ಮಾತ್ರ​ ಒಪ್ಪಿಸಿತು. 62 ಎಸೆತಗಳಲ್ಲಿ 26 ರನ್​ ಗಳಿಸಿದ್ದ ಲ್ಯಾಬುಸ್ಚಾಗ್ನೆ ಅವರನ್ನು ಮೊಹಮ್ಮದ್ ಶಮಿ ಔಟ್​ ಮಾಡಿದರು.

ಹೆಡ್ - ಸ್ಮಿತ್ ಜುಗಲ್​ಬಂಧಿ: ಮತ್ತೊಂದೆಡೆ, ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಜುಗಲ್​ಬಂಧಿ ಆಸೀಸ್​ ತಂಡಕ್ಕೆ ಬೃಹತ್​ ಮೊತ್ತ ಕಲೆ ಹಾಕಲು ನೆರವಾಯಿತು. ನಾಲ್ಕನೇ ವಿಕೆಟ್​ಗೆ ಇಬ್ಬರು ಬ್ಯಾಟರ್​ಗಳು 370 ಬಾಲ್​ಗಳಲ್ಲಿ 251 ರನ್​ಗಳ ಭರ್ಜರಿ ಜೊತೆಯಾಟ ನೀಡಿದರು. ನಾಳೆಗೂ ಈ ಬ್ಯಾಟರ್​ಗಳು ಕ್ರೀಸ್​ ಕಾಯ್ದುಕೊಂಡಿದ್ದು, ಮತ್ತಷ್ಟು ರನ್​ ಕಲೆ ಹಾಕುವ ಸಾಧ್ಯತೆ ಇದೆ.

ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದು ಟ್ರಾವಿಸ್ ಹೆಡ್​ ಏಕದಿನದ ಮಾದರಿಯಲ್ಲಿ ಬಿರುಸಿನ ಬ್ಯಾಟ್​ ಬೀಸಿದರು. 22 ಬೌಂಡರಿಗಳು ಹಾಗೂ ಒಂದು ಸಿಕ್ಸರ್​ ಸಮೇತ ಕೇವಲ 156 ಎಸೆತಗಳಲ್ಲಿ 146 ರನ್​ ಸಿಡಿಸಿದರು. ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ ಆರನೇ ಶತಕ ಬಾರಿಸಿದ ಹೆಡ್​ಗೆ ವಿದೇಶಿ ನೆಲದಲ್ಲಿ ಚೊಚ್ಚಲ ಸೆಂಚುರಿ ಇದಾಗಿದೆ. ಅಲ್ಲದೇ, ಭಾರತದ ವಿರುದ್ಧ ಸಹ ಹೆಡ್​ ಅವರಿಗಿದು ಮೊದಲ ಶತಕವಾಗಿದೆ. ಮತ್ತೊಂದೆಡೆ, ಸ್ಟೀವ್ ಸ್ಮಿತ್ ತಾಳ್ಮೆ ಆಟದ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 38ನೇ ಅರ್ಧ ಶತಕ ದಾಖಲಿಸಿದ್ದಾರೆ. ಟ್ರಾವಿಸ್ ಹೆಡ್ ಉತ್ತಮ ಸಾಥ್​ ನೀಡಿದ ಸ್ಮಿತ್ ಶತಕದ ಹೊಸ್ತಿಲಿಗೆ ಬಂದು ತಲುಪಿದ್ದಾರೆ. ​227 ಬಾಲ್​ಗಳ ಎದುರಿಸಿ 95 ರನ್​ ಕಲೆ ಹಾಕಿದರು. ಟೀ ಇಂಡಿಯಾ ಪರ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್​, ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ: ನಿವೃತ್ತಿ ವಾಪಸ್ ಪಡೆದು ಆ್ಯಶಸ್ ಟೆಸ್ಟ್‌ ಸರಣಿಗೆ ಇಂಗ್ಲೆಂಡ್‌ ತಂಡ ಸೇರಿದ ಮೋಯಿನ್​ ಅಲಿ

Last Updated : Jun 8, 2023, 2:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.