ETV Bharat / sports

WTC Final: ಕಾಂಗರೂ ಪಡೆಗೆ ಒಲಿದ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್.. ಎರಡನೇ ಫೈನಲ್​ನಲ್ಲೂ ಮುಗ್ಗರಿಸಿದ ಭಾರತ

author img

By

Published : Jun 11, 2023, 5:20 PM IST

Updated : Jun 11, 2023, 5:38 PM IST

ವಿದೇಶಿ ನೆಲದಲ್ಲಿ ಭಾರತ ಬ್ಯಾಟಿಂಗ್​ ವೈಫಲ್ಯ ಮುಂದುವರೆದಿದ್ದು, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಗೆಲ್ಲುವಲ್ಲಿ ವಿಫಲವಾಗಿದೆ.

ICC World Test Championship Final 2023
ICC World Test Championship Final 2023

ಓವೆಲ್​ (ಲಂಡನ್​): ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ 2023ನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಎರಡನೇ ಬಾರಿಗೆ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಆಡಿದ ಭಾರತ ಕಪ್​ ಗೆಲ್ಲುವಲ್ಲಿ ಮುಗ್ಗರಿಸಿದೆ. ಇದರಿಂದ 10 ವರ್ಷಗಳಿಂದ ಐಸಿಸಿ ಕಪ್​ ಬರ ಮುಂದುವರೆದಿದೆ. ಅಂತಿಮ ದಿನಕ್ಕೆ 280 ರನ್​ ಭಾರತಕ್ಕೆ ಬೇಕಾಗಿತ್ತು. ಆಸ್ಟ್ರೇಲಿಯಾಕ್ಕೆ 7 ವಿಕೆಟ್ ಬೇಕಿತ್ತು, ಇದನ್ನು ಮೊದಲ ಇನ್ನಿಂಗ್ಸ್​ನಲ್ಲೇ ಕಬಳಿಸಿ ಗೆದ್ದುಕೊಂಡಿತು.

ಆಸ್ಟ್ರೇಲಿಯಾ ಭೋಜನಕ್ಕೂ ಮುನ್ನ ಭಾರತ 7 ವಿಕೆಟ್​ಗಳನ್ನು ಕಬಳಿಸಿ 209 ರನ್​ ಬೃಹತ್​ ಗೆಲುವು ಬರೆಯಿತು. ನ್ಯೂಜಿಲೆಂಡ್​ ಮೊದಲ ಟೆಸ್ಟ್ ​ಚಾಂಪಿಯನ್​ಶಿಪ್​ ಗೆದ್ದರೆ ಆಸ್ಟ್ರೇಲಿಯಾ ಎರಡನೇ ತಂಡವಾಗಿದೆ.

ನಾಲ್ಕನೇ ದಿನದ ಆಟದ ಅಂತ್ಯಕ್ಕೆ ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ 3 ವಿಕೆಟ್​ ಕಳೆದುಕೊಂಡು 164 ರನ್​ ಗಳಿಸಿತ್ತು. ಕ್ರಿಸ್​ನಲ್ಲಿ 44 ರನ್​ ಗಳಸಿದ ವಿರಾಟ್​ ಕೊಹ್ಲಿ ಮತ್ತು 20 ರನ್​ ಮಾಡಿದ್ದ ಅಜಿಂಕ್ಯ ರಹಾನೆ ಇದ್ದರು. ಐದನೇ ದಿನಕ್ಕೆ ಅನುಭವಿ ದ್ವಯರ ಮೇಲೆ ಭಾರತದ ಭರವಸೆ ನೆಟ್ಟಿತ್ತು. ಆದರೆ ಅಂತಿಮ ದಿನದ ಆಟ ಆರಂಭವಾಗುತ್ತಿದ್ದಂತೆ ಆಸ್ಟ್ರೇಲಿಯಾದ ದಾಳಿ ಪ್ರಭಲವಾಗುತ್ತಾ ಬಂತು.

ಇಂದಿನ ಏಳನೇ ಓವರ್​ನಲ್ಲಿ ಬೋಲ್ಯಾಂಡ್​ ಭಾರತವನ್ನು ಸಂಕಷ್ಟಕ್ಕೆ ನೂಕಿದರು. ಒಂದೇ ಓವರ್​ನಲ್ಲಿ ವಿರಾಟ್​ ಕೊಹ್ಲಿ ಮತ್ತು ರವೀಂದ್ರ ಜಡೇಜ ಅವರ ವಿಕೆಟ್​ ಕಬಳಿಸಿದರು. ಇದರಿಂದ ಭಾರತಕ್ಕೆ ಗೆಲುವು ದೂರ ಸಾಗಿತು. ಅಲ್ಲದೇ ಪ್ರಿಡಿಕ್ಷನ್​ಗಳ ಪ್ರಕಾರ ಆಸ್ಟ್ರೇಲಿಯಾಕ್ಕೆ 94 ಪ್ರತಿಶತದಷ್ಟು ಗೆಲುವಿನ ಅಂಶಇತ್ತು. ಅದರಂತೆ ಕಾಂಗರೂ ಪಡೆ ತನ್ನ ಬೌಲಿಂಗ್​ ಪ್ರದರ್ಶನವನ್ನು ನೀಡಿತು.

78 ಬಾಲ್​ನಲ್ಲಿ 7 ಬೌಂಡರಿಯಿಂದ 49ರನ್​ ಗಳಿಸಿ ಆಡುತ್ತಿದ್ದ ವಿರಾಟ್​ 1 ರನ್​ನಿಂದ ಟೆಸ್ಟ್​ನ 29ನೇ ಅರ್ಧಶತಕದಿಂದ ವಂಚಿತರಾದರು. ಅಲ್ಲದೇ ಅವರ ಬೆನ್ನಲ್ಲೇ ಬಂದ ಆಲ್​ರೌಂಡರ್​ ರವೀಂದ್ರ ಜಡೇಜ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿ ಬೇಸರ ಉಂಟುಮಾಡಿದರು. ಈ ಎರಡು ವಿಕೆಟ್​ ನಂತರ ಕೀಪರ್​ ಶ್ರೀಕರ್ ಭರತ್​ ಮತ್ತು ಅಜಿಂಕ್ಯಾ ರಹಾನೆ ಮೊದಲ ಇನ್ನಿಂಗ್ಸ್​ನಂತೆ ರನ್​ ನಿರೀಕ್ಷಿಸಲಾಗಿತ್ತು.

ಆದರೆ ಅಜಿಂಕ್ಯಾ ರಹಾನೆ 108 ಬಾಲ್​ನಲ್ಲಿ 7 ಬೌಂಡರಿಯಿಂದ 46 ರನ್​ ಗಳಿಸಿ ಆಡುವಾಗ ವಿಕೆಟ್​ ಕೊಟ್ಟರು. ಭಾರತ ತಂಡಲ್ಲಿದ್ದ ಏಕೈಕ ಭರವಸೆಯಾಗಿದ್ದ ರಹಾನೆ ವಿಕೆಟ್​ ನಷ್ಟವಾಗುತ್ತಿದ್ದಂತೆ ಗೆಲುವು ಇನ್ನಷ್ಟೂ ದೂರವಾಯಿತು. ನಂತರ ಬಂದ ಶಾರ್ದೂಲ್​ ಠಾಕೂರ್​ ಕಳೆದ ಪಂದ್ಯದ ರೀತಿಯಲ್ಲಿ ಭರತ್​ ಜೊತೆ ವಿಕೆಟ್​ ನಿಲ್ಲಿಸುತ್ತಾರೆ ಎಂಬ ಭರವಸೆ ಇತ್ತಾದರೂ ಈಡೇರಲಿಲ್ಲ.

ಶಾರ್ದೂಲ್​ ಸ್ವತಃ 450 ರನ್ ​ಗುರಿಯನ್ನು ಭಾರತ ಸಾಧಿಸಬಹುದು ಎಂದು ಮೂರನೇ ದಿನದ ಪಂದ್ಯದ ನಂತರ ಹೇಳಿಕೊಂಡಿದ್ದರು. ಆದರೆ ಇದನ್ನು ಸಾಧ್ಯವಾಗಿಸುವಲ್ಲಿ ಭಾರತ ಬ್ಯಾಟರ್​ಗಳಿಗೆ ಆಸಿಸ್​ ಬೌಲರ್​ಗಳು ಅವಕಾಶ ಮಾಡಿಕೊಡಲಿಲ್ಲ. ಅಲ್ಲದೇ ಮೊದಲ ಇನ್ನಿಂಗ್ಸ್​ನಲ್ಲಿ ಸತತ ವಿಕೆಟ್​ ತೆಗೆದು ಗೆಲುವಿಗೆ ಸನಿಹರಾದರು.

ಶಾರ್ದೂಲ್​ ಠಾಕೂರ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರೆ, ಅವರ ಬೆನ್ನಲ್ಲೆ 23 ರನ್ ಗಳಿಸಿದ ಆಡುತ್ತಿದ್ದ ಶ್ರೀಕರ್​ ಭರತ್ ಕೂಡಾ ವಿಕೆಟ್​ ಕೊಟ್ಟರು. ನಂತರದ ಬಾಲಂಗೂಚಿಗಳಾದ ಯಾದವ್​ 1 ಮತ್ತು ಸಿರಾಜ್​ 1 ರನ್​ ಗಳಿಸಿ ವಿಕೆಟ್​ ಕೊಟ್ಟರು.

ಆಸ್ಟ್ರೇಲಿಯಾದ ನಾಥನ್​ ಲಿಯಾನ್​ 4, ಸ್ಕಾಟ್​ ಬೋಲ್ಯಾಂಡ್​ 3, ಮಿಚೆಲ್​ ಸ್ಟಾರ್ಕ್​ 2 ಮತ್ತು ನಾಯಕ ಕಮಿನ್ಸ್​​ 1 ರನ್​ ಗಳಿಸಿದರು. ಟ್ರಾವೆಸ್​ ಹೆಡ್​ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಮೂಲಕ ಭಾರತವನ್ನು ಆಲ್​ಔಟ್​ ಮಾಡಿ ಮತ್ತೊಂದು ಐಸಿಸಿ ಟ್ರೋಪಿಯನ್ನು ಗೆದ್ದುಕೊಂಡರು. ಆಸ್ಟ್ರೇಲಿಯಾ 9ನೇ ಐಸಿಸಿ ಕಪ್​ ಗೆದ್ದುಕೊಂಡಿದೆ.

ಇದನ್ನೂ ಓದಿ: WTC Final: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್‌ನಲ್ಲಿಂದು ಅಂತಿಮ ಸೆಣಸಾಟ; ಭಾರತದ ಗೆಲುವಿಗೆ ಬೇಕು 280 ರನ್‌; ಕೊಹ್ಲಿ, ರಹಾನೆ ಮೇಲೆ ಗೆಲುವಿನ ಹೊಣೆ

Last Updated : Jun 11, 2023, 5:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.