ಹೈದರಾಬಾದ್: ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್‌ರೌಂಡರ್ ಮಿಚೆಲ್ ಮಾರ್ಷ್ ವೈಯಕ್ತಿಕ ಕಾರಣಗಳಿಗಾಗಿ ಪರ್ತ್‌ಗೆ ತೆರಳಿದ್ದಾರೆ. ವಿಶ್ವಕಪ್ ಟೂರ್ನಿಯಿಂದ ಸ್ವಲ್ಪ ಸಮಯದವರೆಗೆ ಅವರು ಹೊರಗುಳಿಯಲಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಮಾಹಿತಿ ನೀಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಮಾಡಿರುವ ಆಸ್ಟ್ರೇಲಿಯಾ ಕ್ರಿಕೆಟ್, ಮಿಚೆಲ್ ಮಾರ್ಷ್ ವೈಯಕ್ತಿಕ ಕಾರಣಗಳಿಂದ ಬುಧವಾರ ಮನೆಗೆ ಮರಳಿದ್ದಾರೆ. ಅನಿರ್ದಿಷ್ಟಾವಧಿವರೆಗೆ ಅವರು ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಘೋಷಿಸಿದೆ. ಅದರೆ, ಯಾವ ಕಾರಣಕ್ಕಾಗಿ ಅವರು ತೆರಳಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. ಎಷ್ಟು ಸಮಯದವರೆಗೆ ತಂಡದಿಂದ ಹೊರಗುಳಿಯಲಿದ್ದಾರೆ, ಮಿಚೆಲ್ ಮಾರ್ಷ್ ಅವರ ಬದಲಿ ಆಟಗಾರ ಯಾರು ಎಂಬುದು ಸ್ಪಷ್ಟವಾಗಿಲ್ಲ.
-
Mitch has returned home for personal reasons and is out of the World Cup indefinitely. pic.twitter.com/jIy2LGJkcI
— Cricket Australia (@CricketAus) November 2, 2023 " class="align-text-top noRightClick twitterSection" data="
">Mitch has returned home for personal reasons and is out of the World Cup indefinitely. pic.twitter.com/jIy2LGJkcI
— Cricket Australia (@CricketAus) November 2, 2023Mitch has returned home for personal reasons and is out of the World Cup indefinitely. pic.twitter.com/jIy2LGJkcI
— Cricket Australia (@CricketAus) November 2, 2023
ಈಗಾಗಲೇ ಆಸ್ಟ್ರೇಲಿಯಾ ಇಬ್ಬರು ಪ್ರಮುಖ ಆಲ್‌ರೌಂಡರ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ. ಕಳೆದ ಸೋಮವಾರ ಗ್ಲೆನ್ ಮ್ಯಾಕ್ಸ್‌ವೆಲ್ ಗಾಲ್ಫ್ ಕಾರ್ಟ್‌ನಲ್ಲಿ ಹೋಗುತ್ತಿದ್ದಾಗ, ಹಿಂಭಾಗದಿಂದ ಬಿದ್ದು ತಲೆ ಮತ್ತು ಮೂಗಿಗೆ ಗಾಯಗಳಾಗಿವೆ. ಹೀಗಾಗಿ ಶನಿವಾರದ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ನಡುವೆ ಉತ್ತಮ ಫಾರ್ಮ್‌ನಲ್ಲಿದ್ದ ಮಾರ್ಷ್ ಕೂಡ ಮನೆಗೆ ಹಿಂತಿರುಗಿದ್ದು ತಂಡಕ್ಕೆ ಸ್ವಲ್ಪ ಹಿನ್ನಡೆ ಉಂಟುಮಾಡಿದೆ.
ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಮಾರ್ಷ್ ಒಟ್ಟು 225 ರನ್ ಗಳಿಸಿದ್ದು, ಎರಡು ವಿಕೆಟ್ ಪಡೆದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಆಕರ್ಷಕ ಶತಕ (121) ಸಿಡಿಸಿದ್ದರು.
ಇದನ್ನೂ ಓದಿ : ವಿಶ್ವಕಪ್ ಕ್ರಿಕೆಟ್: ಕಾಂಗರೂ ಪಡೆಯ ಬಿಗಿ ಕ್ಷೇತ್ರ ರಕ್ಷಣೆ.. ಕಿವೀಸ್ಗೆ 5 ರನ್ನಿಂದ ಸೋಲು
ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ (ನವೆಂಬರ್ 4) ಇಂಗ್ಲೆಂಡ್ ವಿರುದ್ಧ ಪಂದ್ಯವಾಡಲಿದೆ. ಪ್ಯಾಟ್ ಕಮ್ಮಿನ್ಸ್ ನಾಯಕತ್ವದಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಒಂದಾಗಿ ಕಣಕ್ಕಿಳಿದಿದ್ದ ಆಸೀಸ್, ಸತತವಾಗಿ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳನ್ನು ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಏರಿಳಿತ ಕಂಡಿದೆ.
ಶ್ರೀಲಂಕಾ, ಪಾಕಿಸ್ತಾನ, ನೆದರ್ಲ್ಯೆಂಡ್ಸ್ ಹಾಗು ನ್ಯೂಜಿಲೆಂಡ್ ವಿರುದ್ಧ ನಾಲ್ಕು ಪಂದ್ಯಗಳನ್ನು ಗೆಲ್ಲುವ ಮೂಲಕ ಫಾರ್ಮ್‌ಗೆ ಮರಳಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದ ನಂತರ, ಆಸ್ಟ್ರೇಲಿಯಾ ಮುಂಬೈ ಮತ್ತು ಪುಣೆಯಲ್ಲಿ ಕ್ರಮವಾಗಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಮೂರು ಗೆಲುವು ಕೊನೆಯ ನಾಲ್ಕರ ಹಂತ ತಲುಪಲು ಸಹಾಯವಾಗಬಹುದು.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಅಲೆಕ್ಸ್ ಕ್ಯಾರಿ(ವಿ.ಕೀ), ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್ (ವಿ.ಕೀ), ಜೋಶ್ ಇಂಗ್ಲಿಸ್ (ವಿ.ಕೀ), ಮಾರ್ನಸ್ ಲ್ಯಾಬುಸ್‌ಚಾಗ್ನೆ, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ
ಇದನ್ನೂ ಓದಿ: ಕಾಂಗರೂ ಪಡೆಗೆ ಭಾರಿ ಹಿನ್ನಡೆ: ಸ್ಟಾರ್ ಆಟಗಾರ ಮ್ಯಾಕ್ಸ್ವೆಲ್ಗೆ ಗಾಯ.. ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಅಲಭ್ಯ