ಲಖನೌ (ಉತ್ತರಪ್ರದೇಶ): ಅಫ್ಘಾನಿಸ್ತಾನದ ಯುವ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್ ಪೂರೈಸಿದ್ದಾರೆ. ಲಖನೌದಲ್ಲಿ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ 34ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ತಮ್ಮ ಮೊದಲ ವಿಕೆಟ್‌ನೊಂದಿಗೆ ಈ ಸಾಧನೆಯನ್ನು ಮಾಡಿದರು. ಮುಜೀಬ್ ಈ ಸಾಧನೆ ಮಾಡಿದ ಆಫ್ಘಾನಿಸ್ತಾನದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ. ಅಲ್ಲದೆ, ಮುಜೀಬ್ ಜಂಟಿಯಾಗಿ ಅತಿವೇಗದ 100 ODI ವಿಕೆಟ್‌ಗಳನ್ನು ಪಡೆದ ಎರಡನೇ ಅಫ್ಘಾನ್ ಬೌಲರ್ ಸಹ ಆಗಿದ್ದಾರೆ.
2017ರಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಮುಜೀಬ್ 73 ಪಂದ್ಯಗಳಲ್ಲಿ ಏಕದಿನ ವಿಕೆಟ್‌ಗಳ ಶತಕ ಪೂರೈಸಿ ದೌಲತ್ ಝದ್ರಾನ್ ಅವರನ್ನು ಸರಿಗಟ್ಟಿದರು. ಅಫ್ಘಾನ್ ಆಟಗಾರರ ಪೈಕಿ ರಶೀದ್ ಖಾನ್ ಅವರು 44 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅವರು ಅತ್ಯಂತ ವೇಗವಾಗಿ 100 ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ರಶೀದ್ (178), ಜದ್ರಾನ್ (115) ಮತ್ತು ಮುಜೀಬ್ ಹೊರತುಪಡಿಸಿ, ಮೊಹಮ್ಮದ್ ನಬಿ (157) ಅಫ್ಘಾನಿಸ್ತಾನ ಪರ 100 ಕ್ಕೂ ಹೆಚ್ಚು ಏಕದಿನ ವಿಕೆಟ್‌ಗಳನ್ನು ಪಡೆದ ಬೌಲರ್ಗಳು ಆಗಿದ್ದಾರೆ. 22 ವರ್ಷದ ಆಟಗಾರ 23 ODI ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ. ಮುಜೀಬ್ ಏಕದಿನ ಪಂದ್ಯಗಳಲ್ಲಿ ಮೂರು ಬಾರಿ ನಾಲ್ಕು ವಿಕೆಟ್ ಮತ್ತು ಒಂದು ಬಾರಿ ಐದು ವಿಕೆಟ್ ಪಡೆದ ಸಾಧನೆ ಹೊಂದಿದ್ದಾರೆ.
ಈ ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧದ ಗೆಲುವು ಅಫ್ಘಾನಿಸ್ತಾನಕ್ಕೆ ನಾಲ್ಕನೇ ಜಯವಾಗಿದೆ. ಅಫ್ಘಾನಿಸ್ತಾನ ಈ ಹಿಂದೆ ಹಾಲಿ ಚಾಂಪಿಯನ್ ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಸೋಲಿಸಿದ್ದರು. ನೆದರ್ಲೆಂಡ್ಸ್ ವಿರುದ್ಧ ಅಫ್ಘಾನಿಸ್ತಾನ ತಂಡ ಉತ್ತಮ ಪ್ರದರ್ಶನವನ್ನು ತೋರಿತು. ಅತ್ಯುತ್ತಮ ಫೀಲ್ಡಿಂಗ್ ಮತ್ತು ಬೌಲಿಂಗ್ ನಡೆಸಿದ ಅಫ್ಘಾನ ನೆದರ್ಲೆಂಡ್ಸ್ ತಂಡವನ್ನು 179 ಕ್ಕೆ ಕಟ್ಟಿ ಹಾಕಿತು. ನಂತರ ಅತ್ಯಂತ ಸುಲಭವಾಗಿ ಗುರಿಯನ್ನು ಬೆನ್ನಟ್ಟಿದರು. ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ವಿಶ್ವಕಪ್‌ನಲ್ಲಿ ಇದು ನಾಲ್ಕನೇ ಗೆಲುವು ಆಗಿದೆ.
ಇನ್ನು ಅಫ್ಘಾನಿಸ್ತಾನ ನೆದರ್ಲೆಂಡ್ಸ್ ವಿರುದ್ಧ 111 ಎಸೆತಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ಗಳ ಗೆಲುವು ಸಾಧಿಸಿದ್ದು, ಈ ಆವೃತ್ತಿಯ ವಿಶ್ವಕಪ್‌ನಲ್ಲಿ ಉಳಿದಿರುವ ಎಸೆತಗಳ ವಿಷಯದಲ್ಲಿ ತಂಡದ ಮೂರನೇ ಅತಿದೊಡ್ಡ ಜಯವಾಗಿದೆ. ಉಳಿದೆರಡು ಶ್ರೀಲಂಕಾದ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಎಂಟು ವಿಕೆಟ್‌ಗಳ ಗೆಲುವು (146 ಎಸೆತಗಳು ಬಾಕಿ) ಮತ್ತು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಏಳು ವಿಕೆಟ್‌ಗಳ ಜಯ (117 ಎಸೆತಗಳು ಬಾಕಿ) ಸಾಧಿಸಿತ್ತು.
ಇನ್ನು ಶುಕ್ರವಾರ(ನ.3) ನಡೆದ ಪಂದ್ಯದಲ್ಲಿ ನಾಲ್ಕು ನೆದರ್ಲೆಂಡ್ಸ್ ಬ್ಯಾಟರ್‌ಗಳು ರನ್ ಔಟ್ ಆಗಿದ್ದಾರೆ. ಇದು ODI ವಿಶ್ವಕಪ್‌ನ ಇನ್ನಿಂಗ್ಸ್‌ನಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರನ್ ಔಟ್‌ಗಳ 12 ನೇ ನಿದರ್ಶನವಾಗಿದೆ. ಈ ಗೆಲುವಿನ ಮೂಲಕ ಅಫ್ಘಾನಿಸ್ತಾನ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿದಿದ್ದು, ಸೆಮಿಫೈನಲ್‌ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ನವೆಂಬರ್ 7 ರಂದು ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ಐದು ಬಾರಿ ವಿಶ್ವ ಚಾಂಪಿಯನ್‌ಶಿಪ್ ಆಸ್ಟ್ರೇಲಿಯಾ ತಂಡವನ್ನು ಅಫ್ಘಾನಿಸ್ತಾನ ಎದುರಿಸಲಿದೆ. ಮುಜೀಬ್, ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಅವರ ಸ್ಪಿನ್ ದಾಳಿ ಆಸೀಸ್ ವಿರುದ್ಧದ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಬಹುದು.
ಓದಿ: ವಿಶ್ವಕಪ್ನಿಂದ ಹೊರ ಬಿದ್ದ ಹಾರ್ದಿಕ್ ಪಾಂಡ್ಯ.. ಆಲ್ರೌಂಡರ್ ಜಾಗದಲ್ಲಿ ಕನ್ನಡಿಗನಿಗೆ ಸ್ಥಾನ