ಮುಂಬೈ(ಮಹಾರಾಷ್ಟ್ರ): ಮುಂಬೈನ ವಾಂಖೆಡೆ ಮೈದಾನದಲ್ಲಿಂದು ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ತಂಡ ಸೆಣಸಾಟ ನಡೆಸುತ್ತಿವೆ. ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಅಫ್ಘಾನ್ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾ ಬೌಲಿಂಗ್ ನಡೆಸಿದೆ.
ವಿಶ್ವಕಪ್ ಕ್ರಿಕೆಟ್ 2023ರ 39ನೇ ಪಂದ್ಯ ಇದಾಗಿದೆ. ಸೂಪರ್ ಫೋರ್ ತಲುಪಲು ಅಫ್ಘಾನಿಸ್ತಾನಕ್ಕೆ ಈ ಪಂದ್ಯದ ಗೆಲುವು ನಿರ್ಣಾಯಕವಾಗಿದೆ. ಆಸೀಸ್ ಒಂದು ವೇಳೆ ಅಫ್ಘಾನ್ ತಂಡವನ್ನು ಮಣಿಸಿದರೆ, ನೇರವಾಗಿ ಸೆಮಿಫೈನಲ್ಗೆ ತಲುಪಲಿದೆ. ಹೀಗಾಗಿ ಎರಡು ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ.
-
Hashmatullah Shahidi won the toss and elected to bat first 🏏#CWC23 | #AUSvAFG 📝: https://t.co/3xJ2D4xpEI pic.twitter.com/dwj4os48hp
— ICC Cricket World Cup (@cricketworldcup) November 7, 2023 " class="align-text-top noRightClick twitterSection" data="
">Hashmatullah Shahidi won the toss and elected to bat first 🏏#CWC23 | #AUSvAFG 📝: https://t.co/3xJ2D4xpEI pic.twitter.com/dwj4os48hp
— ICC Cricket World Cup (@cricketworldcup) November 7, 2023Hashmatullah Shahidi won the toss and elected to bat first 🏏#CWC23 | #AUSvAFG 📝: https://t.co/3xJ2D4xpEI pic.twitter.com/dwj4os48hp
— ICC Cricket World Cup (@cricketworldcup) November 7, 2023
ಉಭಯ ತಂಡಗಳು ಕೆಲವು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿದಿವೆ. ಅಫ್ಘಾನ್ ತಂಡ ಫಜ್ಹಲಕ್ ಫಾರೂಕಿ ಬದಲಿಗೆ, ನವೀನ್ ಉಲ್ ಹಕ್ ಸ್ಥಾನ ತುಂಬಿದರೆ, ಆಸ್ಟ್ರೇಲಿಯಾ ಪ್ರಮುಖ ಎರಡು ಬದಲಾವಣೆ ಕಂಡಿವೆ. ಸ್ಟೀವ್ ಸ್ಮಿತ್ ಮತ್ತು ಕ್ಯಾಮರೂನ್ ಗ್ರೀನ್ ಬದಲಿಗೆ ಮಿಚೆಲ್ ಮಾರ್ಷ್ ಮತ್ತು ಮ್ಯಾಕ್ಸ್‌ವೆಲ್ ಆಗಮಿಸಿದ್ದಾರೆ.
ಆಸ್ಟ್ರೇಲಿಯಾ ಆಡಿರುವ 7 ಪಂದ್ಯಗಳ ಪೈಕಿ 5ರಲ್ಲಿ ಗೆಲುವು, 2 ಸೋಲು ಕಂಡರೆ, ಅಫ್ಘನ್ 7 ಪಂದ್ಯಗಳ ಪೈಕಿ 4ರಲ್ಲಿ ಗೆಲುವು, 3ರಲ್ಲಿ ಸೋಲು ಕಂಡಿದೆ. ಆಸೀಸ್ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರೆ, ಅಫ್ಘನ್ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಅಫ್ಘನ್ ವಿರುದ್ಧದ ಇಂದಿನ ಪಂದ್ಯದಲ್ಲಿ ಆಸೀಸ್ ಜಯದೊಂದಿಗೆ 12 ಅಂಕ ಪಡೆದು ಸೆಮೀಸ್ಗೆ ಪ್ರವೇಶ ಮಾಡುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಸೂಪರ್ ಫೋರ್ ತಲುಪಲು ಅಫ್ಘಾನಿಸ್ತಾನಕ್ಕೂ ಕೂಡ ಈ ಪಂದ್ಯದ ಗೆಲುವು ನಿರ್ಣಾಯಕವಾಗಿದೆ. ಯಾವ ತಂಡ ಗೆಲವು ಸಾಧಿಸಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಅಫ್ಘಾನಿಸ್ತಾನ ತಂಡದ ಪ್ಲೇಯಿಂಗ್ 11 : ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ(ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್(ವಿಕೆಟ್ ಕೀಪರ್), ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ನವೀನ್-ಉಲ್-ಹಕ್.
ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್ 11 : ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.