ETV Bharat / sports

ಪಾಕ್-ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೆಸ್ಟೈನ್ ಪರ ಬಾವುಟ ಪ್ರದರ್ಶಿಸಿದ ನಾಲ್ವರ ಬಂಧನ​, ಬಿಡುಗಡೆ - ಪ್ಯಾಲೆಸ್ಟೇನ್​ ಪರ ಘೋಷಣೆ ಕೂಗಿ ಧ್ವಜ

Waving Palestinian flag during Pak-Bangla match: ಇಲ್ಲಿನ ಈಡನ್​ ಗಾರ್ಡನ್ಸ್​ ಮೈದಾನನಲ್ಲಿ ನಿನ್ನೆ ನಡೆದ ಪಾಕಿಸ್ತಾನ ಮತ್ತು ಬಾಂಗ್ಲಾ ನಡುವಿನ ಪಂದ್ಯದ ಸಂದರ್ಭದಲ್ಲಿ ಪ್ಯಾಲೆಸ್ಟೈನ್​ ಪರ ಘೋಷಣೆ ಕೂಗಿ ಬಾವುಟ ಪ್ರದರ್ಶಿಸಿದ ನಾಲ್ವರನ್ನು ಬಂಧಿಸಲಾಗಿದೆ.

world-cup-2023-palestine-flag-and-a-tale-of-cricket-loving-pak-couple-in-eden-gardens
ವಿಶ್ವಕಪ್​ 2023 : ಪಾಕಿಸ್ತಾನ - ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೆಸ್ಟೇನ್ ಪರ ಘೋಷಣೆ, ಧ್ವಜ ಪ್ರದರ್ಶನ..ನಾಲ್ವರ ಬಂಧನ​
author img

By ETV Bharat Karnataka Team

Published : Nov 1, 2023, 10:17 AM IST

Updated : Nov 1, 2023, 10:32 AM IST

ಕೊಲ್ಕತ್ತಾ ( ಪಶ್ಚಿಮ ಬಂಗಾಳ) : ಇಲ್ಲಿನ ಈಡನ್​ ಗಾರ್ಡನ್ಸ್​​ನಲ್ಲಿ ನಡೆದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್​ ಪಂದ್ಯದಲ್ಲಿ ಪಾಕಿಸ್ತಾನ ಭರ್ಜರಿ ಗೆಲುವು ದಾಖಲಿಸಿತು. ಏಳು ವಿಕೆಟ್‌ಗಳಿಂದ ಪಾಕಿಸ್ತಾನ ಬಾಂಗ್ಲಾ ತಂಡವನ್ನು ಬಗ್ಗುಬಡಿಯಿತು. ಈ ಮೂಲಕ ಸತತ ಸೋಲಿನಿಂದ ಕಂಗೆಟ್ಟಿದ್ದ ಪಾಕ್​ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಆದರೂ ಸೆಮಿಫೈನಲ್​ ಪ್ರವೇಶಿಸುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ.

ಈ ಪಂದ್ಯದ ವೇಳೆ ಪ್ಯಾಲೆಸ್ಟೈನ್ ಪರ ಘೋಷಣೆ ಕೂಗಿ ಬಾವುಟ ಪ್ರದರ್ಶನ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆ ಮಾಡಿ ಬಿಡುಗಡೆಗೊಳಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೋಲ್ಕತ್ತಾ ಪೊಲೀಸ್​ ಅಧಿಕಾರಿ, ಈಡನ್​ ಗಾರ್ಡನ್ಸ್​ನಲ್ಲಿ ಪ್ಯಾಲೆಸ್ಟೈನ್​ ಪರ ಘೋಷಣೆ ಕೂಗಿದ ಮತ್ತು ಭಾವುಟ ಪ್ರದರ್ಶಿಸಿದ ನಾಲ್ವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಬಂಧಿತರು ಯಾಕೆ ಕೃತ್ಯ ಎಸಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇಸ್ರೇಲ್-ಹಮಾಸ್​ ಉಗ್ರರ ನಡುವೆ ಸಂಘರ್ಷ: ಇಸ್ರೇಲ್​ ಮತ್ತು ಪ್ಯಾಲೆಸ್ಟೈನ್ ಹಮಾಸ್​ ಉಗ್ರರ ನಡುವೆ ಕಳೆದ ಅಕ್ಟೋಬರ್​ 7ರಿಂದ ಸಂಘರ್ಷ ನಡೆಯುತ್ತಿದೆ. ಹಮಾಸ್​ ಹೆಡೆಮುರಿ ಕಟ್ಟಲು ಮುಂದಾಗಿರುವ ಇಸ್ರೇಲ್​​ ಸೇನಾ ಪಡೆ ಗಾಜಾ ಪಟ್ಟಿ ಮೇಲೆ ದಾಳಿ ನಡೆಸುತ್ತಿದೆ. ಇಸ್ರೇಲ್​ ದಾಳಿಗೆ ಗಾಜಾ ಅಕ್ಷರಶಃ ಸ್ಮಶಾನದಂತಾಗಿದೆ. ಯುದ್ಧದಿಂದಾಗಿ ಗಾಜಾ ಒಂದರಲ್ಲೇ ಸುಮಾರು 8,500ಕ್ಕೂ ಅಧಿಕ ಜನರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮೊದಲಾಗಿ ಇಸ್ರೇಲ್​ ಮೇಲೆ ಪ್ಯಾಲೆಸ್ಟೈನ್​ ಹಮಾಸ್​ ಉಗ್ರರು ರಾಕೆಟ್​ ದಾಳಿ ನಡೆಸಿದ್ದರು. ಬಳಿಕ ಹಮಾಸ್​ ದಾಳಿಗೆ ಪ್ರತಿಯಾಗಿ ಇಸ್ರೇಲ್ ವೈಮಾನಿಕ ದಾಳಿಯನ್ನು ಮುಂದುವರೆಸಿತ್ತು. ಇದೀಗ ಎರಡನೇ ಹಂತದ ದಾಳಿ ಮುಂದಾಗಿರುವ ಇಸ್ರೇಲ್​, ಗಾಜಾ ಪಟ್ಟಿ ಮೇಲೆ ಭೂ ದಾಳಿ ನಡೆಸುತ್ತಿದೆ. ದಾಳಿಯಲ್ಲಿ ಎರಡು ಕಡೆಯ ಸಾವಿರಾರು ಜನರು ಸಾವನ್ನಪ್ಪಿದ್ದಾರೆ.

ಈಡನ್​ ಗಾರ್ಡನ್ಸ್​ನಲ್ಲಿ ಪಾಕ್​ ದಂಪತಿ: ಒಂದೆಡೆ ಪ್ಯಾಲೆಸ್ಟೈನ್​ ಪರ ಘೋಷಣೆ ಕೂಗಿದ ನಾಲ್ವರನ್ನು ಬಂಧಿಸಿದ ಘಟನೆ ನಡೆದರೆ ಇನ್ನೊಂದೆಡೆ ಪಾಕ್​ ದಂಪತಿ ಪಾಕಿಸ್ತಾನ ತಂಡಕ್ಕೆ ಹುರಿದುಂಬಿಸಿದರು. ಪಾಕಿಸ್ತಾನದ ಕರಾಚಿ ಮೂಲದ ಸದ್ಯ ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋದಲ್ಲಿ ನೆಲೆಸಿರುವ ದಂಪತಿ ಪಾಕಿಸ್ತಾನ ತಂಡವನ್ನು ಪ್ರೋತ್ಸಾಹಿಸಲು ಈಡನ್​ ಗಾರ್ಡನ್ಸ್​ ಮೈದಾನಕ್ಕೆ ಬಂದಿದ್ದರು. ಈ ದಂಪತಿಗೆ ಕ್ರಿಕೆಟ್ ಎಂದರೆ ಅಚ್ಚುಮೆಚ್ಚು. ಅದರಲ್ಲೂ ಪಾಕಿಸ್ತಾನದ ಪಂದ್ಯ ಇದ್ದರೆ ಎಲ್ಲ ಕಡೆ ತೆರಳಿ ಬೆಂಬಲ ಸೂಚಿಸುತ್ತಾರೆ.

2003ರಿಂದ ಇವರು ಪಾಕಿಸ್ತಾನ ಆಡಿರುವ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್​, ಚಾಂಪಿಯನ್ಸ್​ ಟ್ರೋಫಿ ಪಂದ್ಯಗಳಲ್ಲಿ ತಮ್ಮ ದೇಶದ ತಂಡವನ್ನು ಹುರಿದುಂಬಿಸುತ್ತಾ ಬಂದಿದ್ದಾರೆ. ಆದರೆ 2003ರಿಂದ ಪಾಕಿಸ್ತಾನ ವಿಶ್ವಕಪ್​ ಗೆಲ್ಲುವುದು ಕನಸಾಗಿಯೇ ಉಳಿದಿರುವುದು ದಂಪತಿಗೆ ನಿರಾಸೆ ತರಿಸಿದೆ. ಈ ಸಲ ಪಾಕಿಸ್ತಾನ ವಿಶ್ವಕಪ್​ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿ ಪಾಕ್​ ದಂಪತಿ ಇದ್ದಾರೆ. ಆದರೂ ಪಾಕಿಸ್ತಾನ ಸೆಮಿಫೈನಲ್​ ಪ್ರವೇಶಿಸುವುದು ಕಷ್ಟ ಎಂದು ಹೇಳಲಾಗಿದೆ.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​: ಸತತ ಸೋಲಿನ ನಂತರ ಲಯಕ್ಕೆ ಮರಳಿದ ಪಾಕ್​: ಬಾಂಗ್ಲಾ ವಿರುದ್ಧ 7 ವಿಕೆಟ್​ಗಳ ಜಯ

Last Updated : Nov 1, 2023, 10:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.