ETV Bharat / sports

ವಿಶ್ವಕಪ್ ಫೈನಲ್: ಅಹಮದಾಬಾದ್‌ಗೆ ಬಂದ ಪ್ರಧಾನಿ ಮೋದಿ, ಆಸ್ಟ್ರೇಲಿಯಾದ ಉಪ ಪ್ರಧಾನಿ ಮಾರ್ಲೆಸ್ - India

ICC Cricket World Cup 2023: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲೆಸ್ ಅಹಮದಾಬಾದ್‌ಗೆ ತಲುಪಿದ್ದಾರೆ.

PM Modi, Australias Deputy PM arrive in Ahmedabad to watch WC cricket final
ವಿಶ್ವಕಪ್ ಫೈನಲ್: ಅಹಮದಾಬಾದ್‌ಗೆ ಬಂದ ಪ್ರಧಾನಿ ಮೋದಿ, ಆಸ್ಟ್ರೇಲಿಯಾದ ಉಪ ಪ್ರಧಾನಿ ಮಾರ್ಲೆಸ್
author img

By PTI

Published : Nov 19, 2023, 7:57 PM IST

ಅಹಮದಾಬಾದ್ (ಗುಜರಾತ್​): ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲೆಸ್ ಅಹಮದಾಬಾದ್‌ಗೆ ಆಗಮಿಸಿದ್ದಾರೆ. ಇನ್ನು ಕೆಲ ಹೊತ್ತಿನಲ್ಲಿ ಮೋದಿ ಮತ್ತು ಮಾರ್ಲೆಸ್ ಕ್ರೀಡಾಂಗಣವನ್ನು ತಲುಪುವ ನಿರೀಕ್ಷೆಯಿದೆ.

  • વિશ્વના સર્વાધિક લોકપ્રિય રાજનેતા, ભારતના યશસ્વી વડાપ્રધાન માનનીય શ્રી નરેન્દ્રભાઈ મોદીનું અમદાવાદ એરપોર્ટ ખાતે ભાવપૂર્ણ સ્વાગત કર્યું. pic.twitter.com/gaUHCSuv5Q

    — Bhupendra Patel (@Bhupendrapbjp) November 19, 2023 " class="align-text-top noRightClick twitterSection" data=" ">

ಇಂದು ಬೆಳಗ್ಗೆ ಪ್ರಧಾನಿ ಮೋದಿ ರಾಜಸ್ಥಾನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಸಂಜೆ ಅಹಮದಾಬಾದ್‌ಗೆ ಅವರು ಆಗಮಿಸಿದರು. ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ರಾಜ್ಯಪಾಲ ಆಚಾರ್ಯ ದೇವವ್ರತ್ ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ಗುಜರಾತ್ ಬಿಜೆಪಿ ಮುಖ್ಯಸ್ಥ ಸಿ.ಆರ್​.ಪಾಟೀಲ್ ಇದ್ದರು. ಮೋದಿ ಬಂದ ಸ್ವಲ್ಪ ಸಮಯದ ನಂತರ ಆಸ್ಟ್ರೇಲಿಯಾದ ಉಪ ಪ್ರಧಾನಿ ಮಾರ್ಲೆಸ್ ಕೂಡ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಮಾರ್ಲೆಸ್ ಅವರನ್ನು ಸಿಎಂ ಪಟೇಲ್ ಸ್ವಾಗತಿಸಿದರು.

  • Welcomed and greeted Hon'ble Deputy Prime Minister of Australia Mr. Richard Marles on his arrival at Ahmedabad airport. pic.twitter.com/EzpzKNHyUO

ಫೈನಲ್ ಪಂದ್ಯ ವೀಕ್ಷಿಸಿದ ಖರ್ಗೆ: ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿದೆ. ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 241 ರನ್‌ಗಳ ಟಾರ್ಗೆಟ್​ ನೀಡಿದೆ. ಭಾರತ ಇನ್ನಿಂಗ್ಸ್​ ವೇಳೆ ದೆಹಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವೀಕ್ಷಿಸಿದರು. ಇವರೊಂದಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಇತರ ನಾಯಕರು ಸಹ ವೀಕ್ಷಣೆ ಮಾಡಿದರು. ಅಲ್ಲದೇ, ರಾಯಪುರದಲ್ಲಿ ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್ ಸಹ ಫೈನಲ್ ಪಂದ್ಯವನ್ನು ವೀಕ್ಷಿಸಿದರು.

ಸ್ಟೇಡಿಯಂನಲ್ಲಿ ಗಣ್ಯರ ದಂಡು: ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್​ ಪಂದ್ಯ ವೀಕ್ಷಣೆಗೆ ಗಣ್ಯರ ದಂಡೇ ಸ್ಟೇಡಿಯಂನಲ್ಲಿ ಸೇರಿದೆ. ಬಾಲಿವುಡ್​ ಖ್ಯಾತ ನಟ ಶಾರುಖ್ ಖಾನ್, ಪತ್ನಿ ಗೌರಿ ಖಾನ್, ವಿರಾಟ್​ ಕೊಹ್ಲಿ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ, ನಟ ರಣ್​​ವೀರ್ ಸಿಂಗ್, ದೀಪಿಕಾ ಪಡುಕೋಣೆ, ಟಾಲಿವುಡ್​ ನಟ ದಗ್ಗುಬಾಟಿ ವೆಂಕಟೇಶ್ ಸೇರಿದಂತೆ ಹಲವು ಪಂದ್ಯ ವೀಕ್ಷಿಸುತ್ತಿದ್ದಾರೆ.

ಅಲ್ಲದೇ, ಸ್ಟೇಡಿಯಂನಲ್ಲಿ ಭಾರತ ತಂಡವನ್ನು ಹುರಿದುಂಬಿಸಲು ಹೆಚ್ಚಿನ ಅಭಿಮಾನಿಗಳು ತೆರಳಿದ್ದಾರೆ. 1.32 ಲಕ್ಷ ಆಸನಗಳ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾಗಿದೆ. ಇಡೀ ಮೈದಾನ ನೀಲಿ ಸಾಗರವಾಗಿ ಮಾರ್ಪಟ್ಟಿದೆ. ಅನೇಕ ಕಡೆಗಳಲ್ಲಿ ಫೈನಲ್ ಹಣಾಹಣಿ ವೀಕ್ಷಿಸಲು ಜನರು ದೊಡ್ಡ ಪರದೆಯ ವಿಶೇಷ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಭೇಟಿಯಾಗಲು ಹೋಗಿದ್ದೆ: ಮೈದಾನಕ್ಕೆ ನುಗ್ಗಿದ ಪ್ಯಾಲೆಸ್ಟೈನ್ ಬೆಂಬಲಿಗ ಯಾರು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.