ನವದೆಹಲಿ: ಹಿಟ್ಮ್ಯಾನ್ ರೋಹಿತ್ ಶರ್ಮಾ ಬಿರುಗಾಳಿ ಶತಕ, ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಅರುಣ್ ಜೇಟ್ಲಿ ಮೈದಾನದಲ್ಲಿಂದು ನಡೆದ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಟೀಂ ಇಂಡಿಯಾ ವಿಶ್ವಕಪ್ ಫೇವರೆಟ್ ತಂಡ ಯಾಕೆ ಎಂಬುದನ್ನು ಸಾಬೀತುಪಡಿಸಿತು. ಪಾಯಿಂಟ್ ಪಟ್ಟಿಯಲ್ಲಿ ಸತತ ಎರಡು ಗೆಲುವಿನೊಂದಿಗೆ 2 ನೇ ಸ್ಥಾನ ಪಡೆಯಿತು.
-
India march to their second successive win off the back of a dominant display in Delhi 💪#CWC23 #INDvAFG pic.twitter.com/Z0gyJC8r5f
— ICC Cricket World Cup (@cricketworldcup) October 11, 2023 " class="align-text-top noRightClick twitterSection" data="
">India march to their second successive win off the back of a dominant display in Delhi 💪#CWC23 #INDvAFG pic.twitter.com/Z0gyJC8r5f
— ICC Cricket World Cup (@cricketworldcup) October 11, 2023India march to their second successive win off the back of a dominant display in Delhi 💪#CWC23 #INDvAFG pic.twitter.com/Z0gyJC8r5f
— ICC Cricket World Cup (@cricketworldcup) October 11, 2023
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ನಾಯಕ ಹಸ್ಮತುಲ್ಲಾ ಶಾಹಿದಿ, ಅಜ್ಮತುತ್ತಾ ಒಮರ್ಜಾಯಿ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 272 ರನ್ಗಳ ಸಾಧಾರಣ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಭಾರತ ಸೊಗಸಾದ ಆಟವಾಡಿ 35 ಓವರ್ಗಳಲ್ಲಿ 2 ವಿಕೆಟ್ಗೆ 272 ರನ್ ಗಳಿಸಿತು.
'ಪವರ್'ಫುಲ್ ಪ್ಲೇ: ಸಾಧಾರಣ ಗುರಿ ಬೆನ್ನತ್ತಿದ ಭಾರತಕ್ಕೆ ಇಶಾನ್ ಕಿಶನ್ ಮತ್ತು ನಾಯಕ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡಿದರು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ಇಬ್ಬರೂ ಆಟಗಾರರು ಅಫ್ಘನ್ ವಿರುದ್ಧ ಲೀಲಾಜಾಲವಾಗಿ ಬ್ಯಾಟ್ ಬೀಸಿದರು. ಮೊದಲ ಹತ್ತು ಓವರ್ಗಳ ಪವರ್ಪ್ಲೇನಲ್ಲಿ 94 ರನ್ ಕಲೆ ಹಾಕಿ ಬ್ಯಾಟಿಂಗ್ ತಾಕತ್ತು ತೋರಿಸಿದರು.
ಸಿಕ್ಸರ್, ಬೌಂಡರಿಗಳನ್ನು ಸಿಡಿಸಿದ ರೋಹಿತ್ ಶರ್ಮಾ 2019 ರ ವಿಶ್ವಕಪ್ ಆಟದ ಸೊಬಗು ಮರುಕಳಿಸುವಂತೆ ಮಾಡಿದರು. ರೋಹಿತ್ ಬ್ಯಾಟ್ ಎಷ್ಟು ಸದ್ದು ಮಾಡುತ್ತಿತ್ತೆಂದರೆ, ಒಂದು ಹಂತದಲ್ಲಿ ಕಿಶನ್ 17 ರನ್ ಮಾಡಿದ್ದರೆ, ರೋಹಿತ್ 75 ರನ್ ಚಚ್ಚಿದ್ದರು. ಅರ್ಧಶತಕದ ಬಳಿಕ ಮತ್ತಷ್ಟು ಆಕ್ರಮಣಕಾರಿಯಾದ ಶರ್ಮಾ 84 ಎಸೆತಗಳಲ್ಲಿ 131 ರನ್ ಗಳಿಸಿದರು. ಇದು ವಿಶ್ವಕಪ್ನಲ್ಲಿ ದಾಖಲಾದ 7 ನೇ ಶತಕವಾಗಿದೆ. ಈ ಮೂಲಕ ಸಚಿನ್ ತೆಂಡೂಲ್ಕರ್(6)ದಾಖಲೆಯನ್ನು ರೋಹಿತ್ ಮುರಿದರು.
-
A record-breaking ton in Delhi helped Rohit Sharma win the @aramco #POTM ⚡#CWC23 #INDvAFG pic.twitter.com/O04U0huUjm
— ICC Cricket World Cup (@cricketworldcup) October 11, 2023 " class="align-text-top noRightClick twitterSection" data="
">A record-breaking ton in Delhi helped Rohit Sharma win the @aramco #POTM ⚡#CWC23 #INDvAFG pic.twitter.com/O04U0huUjm
— ICC Cricket World Cup (@cricketworldcup) October 11, 2023A record-breaking ton in Delhi helped Rohit Sharma win the @aramco #POTM ⚡#CWC23 #INDvAFG pic.twitter.com/O04U0huUjm
— ICC Cricket World Cup (@cricketworldcup) October 11, 2023
ಕಿಶನ್ ಫಿಫ್ಟಿ ಮಿಸ್, ಕೊಹ್ಲಿ ಪಾಸ್: ಉತ್ತಮವಾಗಿ ಆಡುತ್ತಿದ್ದ ಇಶಾನ್ ಕಿಶನ್ (47) ಅರ್ಧಶತಕದ ಅಂಚಿನಲ್ಲಿ ಸ್ವೀಪ್ ಮಾಡಲು ಹೋಗಿ ಸ್ಪಿನ್ನರ್ ರಶೀದ್ ಖಾನ್ಗೆ ವಿಕೆಟ್ ನೀಡಿದರು. ಬಳಿಕ ಬಂದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ 55 ರನ್ ಸಿಡಿಸಿ ವೃತ್ತಿ ಜೀವನದ 67ನೇ ಅರ್ಧಶತಕ ಬಾರಿಸಿದರು. ಆಸೀಸ್ ವಿರುದ್ಧ ಸಂಕಷ್ಟದ ಸ್ಥಿತಿಯನ್ನು ಅರಿಯದೇ ಬ್ಯಾಟ್ ಮಾಡಿ ಔಟಾಗಿ ಟೀಕೆಗೆ ಗುರಿಯಾಗಿದ್ದ ಶ್ರೇಯಸ್ ಅಯ್ಯರ್ 25 ರನ್ ಗಳಿಸಿ ಗೆಲುವಿನಲ್ಲಿ ಭಾಗಿಯಾದರು.
ಅಫ್ಘನ್ ನಾಯಕನ ಹೋರಾಟ: ಬಲಿಷ್ಠ ಭಾರತದೆದುರು ಗೆಲ್ಲುವುದು ಸುಲಭವಲ್ಲವೆಂದು ತಿಳಿದಿದ್ದರೂ, ಅದ್ಭುತವಾಗಿ ಬ್ಯಾಟ್ ಮಾಡಿದ ಅಫ್ಘನ್ ನಾಯಕ ಹಸ್ಮತುಲ್ಲಾ ಶಾಹಿದಿ (80), ಅಜ್ಮತುಲ್ಲಾ ಒಮರ್ಝಾಯಿ (62) ಅರ್ಧಶತಕ ಗಳಿಸಿದರು. ಇಬ್ಬರನ್ನು ಬಿಟ್ಟು ಬೇರೆ ಯಾವ ಬ್ಯಾಟರ್ಗಳು ಪರಿಣಾಮಕಾರಿ ಎನಿಸಲಿಲ್ಲ. ಆರಂಭಿಕರಾದ ಗುರ್ಬಾಜ್ (21), ಇಬ್ರಾಹಿಂ ಝದ್ರಾನ್ 22 ರನ್ ಗಳಿಸಿದರು. ಹೀಗಾಗಿ ತಂಡ ಬ್ಯಾಟಿಂಗ್ ವೈಫಲ್ಯದಿಂದ 272 ರನ್ ಗಳಿಸಿತು.
ಜಸ್ಪ್ರೀತ್ ಬೂಮ್ರಾ ಅಟ್ಯಾಕ್: ಭಾರತ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬೂಮ್ರಾ ಮಾರಕ ದಾಳಿಗೆ ಅಫ್ಘನ್ ಪಡೆ ರನ್ ಗಳಿಸಲು ಪರದಾಡಿತು. ತಮ್ಮ ಕೋಟಾದ 10 ಓವರ್ಗಳಲ್ಲಿ 39 ರನ್ ನೀಡಿದ ಬೂಮ್ರಾ ಇಬ್ರಾಹಿಂ ಝದ್ರಾನ್, ಮಹಮದ್ ನಬಿ, ನಜೀಬುಲ್ಲಾ ಝದ್ರಾನ್, ರಶೀದ್ ಖಾನ್ ವಿಕೆಟ್ ಕಿತ್ತರು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು. ಭರವಸೆಯ ಬೌಲರ್ ಮೊಹಮದ್ ಸಿರಾಜ್ 9 ಓವರ್ಗಳಲ್ಲಿ 76 ರನ್ ಚಚ್ಚಿಸಿಕೊಂಡು ದುಬಾರಿಯಾದರು.
ಇದನ್ನೂ ಓದಿ: 556 ಸಿಕ್ಸರ್ಸ್! ವಿಶ್ವ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಹೊಸ ಮೈಲುಗಲ್ಲು, ಕ್ರಿಸ್ಗೇಲ್ ವಿಶ್ವದಾಖಲೆ ದಾಖಲೆ ಪುಡಿ