ಬೆಂಗಳೂರು: ವಿಶ್ವಕಪ್ ಫೇವರೆಟ್ ತಂಡಗಳಲ್ಲಿ ಒಂದಾದ ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ಈ ಬಾರಿಯ ಟೂರ್ನಿ ಅದ್ಯಾಕೋ ಒಗ್ಗಿಲ್ಲ. ಏಕದಿನ ವಿಶ್ವಕಪ್ಗೆ ಅರ್ಹತಾ ಪಂದ್ಯಗಳನ್ನು ಆಡಿದ ತಂಡಗಳ ಎದುರು ಸೋಲು ಕಾಣುತ್ತಿದೆ. ಮೊದಲು ಅಫ್ಘಾನಿಸ್ತಾನ ವಿರುದ್ಧ ಸೋತಿದ್ದರೆ, ಗುರುವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮಂಡಿಯೂರಿದೆ.
-
Sri Lanka have upended a strong England lineup to keep their #CWC23 semi-finals qualification hopes alive 👌
— ICC Cricket World Cup (@cricketworldcup) October 26, 2023 " class="align-text-top noRightClick twitterSection" data="
With this, they have triumphed in their last five ICC Men's Cricket World Cup encounters against England 🎇#ENGvSL 📝: https://t.co/VsDcKNha02 pic.twitter.com/WORxTQSajE
">Sri Lanka have upended a strong England lineup to keep their #CWC23 semi-finals qualification hopes alive 👌
— ICC Cricket World Cup (@cricketworldcup) October 26, 2023
With this, they have triumphed in their last five ICC Men's Cricket World Cup encounters against England 🎇#ENGvSL 📝: https://t.co/VsDcKNha02 pic.twitter.com/WORxTQSajESri Lanka have upended a strong England lineup to keep their #CWC23 semi-finals qualification hopes alive 👌
— ICC Cricket World Cup (@cricketworldcup) October 26, 2023
With this, they have triumphed in their last five ICC Men's Cricket World Cup encounters against England 🎇#ENGvSL 📝: https://t.co/VsDcKNha02 pic.twitter.com/WORxTQSajE
ಬ್ಯಾಟಿಂಗ್ ಸ್ವರ್ಗ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಬ್ಯಾಟರ್ಗಳ ವೈಫಲ್ಯದಿಂದ 33.2 ಓವರ್‌ಗಳಲ್ಲಿ 156 ರನ್ಗೆ ಸರ್ವಪತನ ಕಂಡಿತು. ಸಾಧಾರಣ ಗುರಿ ಬೆನ್ನತ್ತಿದ ಲಂಕಾ ಪಡೆ 25.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿ, ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿತು. ಆಂಗ್ಲಪಡೆ ಸತತ ಮೂರು ಪಂದ್ಯಗಳಲ್ಲಿ ಸೋತು ಸೆಮೀಸ್ನಿಂದ ಮತ್ತಷ್ಟು ದೂರವಾಯಿತು.
ಗೆಲುವು ತಂದುಕೊಟ್ಟ ಅರ್ಧಶತಕಗಳ ಜೋಡಿ: ಸಾಧಾರಣ ಗುರಿ ಬೆನ್ನಟ್ಟಿದ ಲಂಕಾದ ಮೇಲೆ ಒತ್ತಡ ಹೇರಲು ಇಂಗ್ಲೆಂಡ್ ಪ್ರಯತ್ನಿಸಿತು. ಕುಸಾಲ್ ಪೆರಾರ 4, ನಾಯಕ ಕುಸಾಲ್ ಮೆಂಡಿಸ್ 11 ರನ್ಗೆ ವಿಕೆಟ್ ನೀಡಿದರು. 23 ರನ್ಗೆ 2 ವಿಕೆಟ್ ಬಿದ್ದಿದ್ದರಿಂದ ಲಂಕಾ ನಿಧಾನಗತಿ ಬ್ಯಾಟಿಂಗ್ ಮೊರೆ ಹೋಯಿತು. ಪಥುಮ್ ನಿಸ್ಸಂಕಾ (77) ಮತ್ತು ಸದೀರ ಸಮರವಿಕ್ರಮ(65) ಅರ್ಧಶತಕ ಬಾರಿಸುವ ಮೂಲಕ ಗೆಲುವು ಸಲೀಸಾಗುವಂತೆ ಮಾಡಿದರು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.
ಠುಸ್ಸಾದ ಇಂಗ್ಲೆಂಡ್ ಬ್ಯಾಟಿಂಗ್: ಇಂಗ್ಲೆಂಡ್ ತಂಡದ ಬಲವೇ ಬ್ಯಾಟಿಂಗ್. 9ನೇ ಕ್ರಮಾಂಕದವರೆಗೂ ಬ್ಯಾಟ್ ಬೀಸಬಲ್ಲ ಆಟಗಾರರಿದ್ದಾರೆ. ಆದರೆ, ಇದೆಲ್ಲಾ ಲೆಕ್ಕಾಚಾರ ವಿಶ್ವಕಪ್ನಲ್ಲಿ ಬುಡಮೇಲಾಗಿದೆ. ಆರಂಭಿಕರಾದ ಬೈರ್ಸ್ಟೋವ್ 30, ಡೇವಿಡ್ ಮಲಾನ್ 28, ಬೆನ್ ಸ್ಟೋಕ್ಸ್ 43 ಗಳಿಸಿದ್ದು ಬಿಟ್ಟರೆ ಯಾರೊಬ್ಬರೂ ಮೈದಾನದಲ್ಲಿ ನೆಲೆಯೂರಲಿಲ್ಲ. ಅಷ್ಟೇನೂ ಪ್ರಭಾವಿ ಅಲ್ಲದ ಬೌಲಿಂಗ್ ಪಡೆಯಾಗಿರುವ ಲಂಕಾಗೆ ಸತತ ವಿಕೆಟ್ ನೀಡಿ 156 ರನ್ಗೆ ಆಲೌಟ್ ಆದರು. ಅದೂ 33.2 ಓವರ್‌ಗಳಲ್ಲಿ. ಈ ದಶಕದ ಅದ್ಭುತ ಬ್ಯಾಟರ್ಗಳಲ್ಲಿ ಒಬ್ಬರಾದ ಜೋ ರೂಟ್, ನಾಯಕ ಜಾಸ್ ಬಟ್ಲರ್, ಹೊಡೊಬಡಿ ಆಟಗಾರ ಲಿವಿಂಗ್ಸ್ಟೋನ್, ಮೊಯೀನ್ ಅಲಿ ಬ್ಯಾಟ್ ಸದ್ದು ಮಾಡಲಿಲ್ಲ.
ಸೆಮಿಫೈನಲ್ ಹಾದಿ ಕಠಿಣ: ಇಂಗ್ಲೆಂಡ್ ತಾನಾಡಿರುವ ಐದು ಪಂದ್ಯಗಳಲ್ಲಿ 1 ರಲ್ಲಿ ಗೆದ್ದು, 4 ರಲ್ಲಿ ಸೋಲು ಕಂಡಿದೆ. ಇದು ತಂಡದ ಸೆಮಿಫೈನಲ್ ಹಾದಿಯನ್ನು ಕಠಿಣಗೊಳಿಸಿದೆ. ಗೆಲ್ಲಲೇಬೇಕಿದ್ದ ಲಂಕಾ ವಿರುದ್ಧದ ಪಂದ್ಯದಲ್ಲಿ ಭಾರೀ ಅಂತರದಲ್ಲಿ ಸೋಲು ಕಂಡಿದ್ದು, ರನ್ರೇಟ್ ಕೂಡ ಪಾತಾಳಕ್ಕಿಳಿದಿದೆ. -1.634 ರಲ್ಲಿರುವ ಆಂಗ್ಲರು ಪಾಯಿಂಟ್ ಪಟ್ಟಿಯಲ್ಲಿ ಕೊನೆಯಲ್ಲಿರುವ ನೆದರ್ಲೆಂಡ್ಸ್ಗಿಂತ ಒಂದು ಸ್ಥಾನ ಮೇಲಿದೆ. ತಂಡದ ಹೀನಾಯ ಪ್ರದರ್ಶನ ವಿಶ್ವಕಪ್ ಟೂರ್ನಿಯಿಂದ ಹೊರಬೀಳುವ ಆತಂಕ ಉಂಟುಮಾಡಿದೆ.
ಈವರೆಗಿನ ತಂಡದ ಪ್ರದರ್ಶನ ಗಮನಿಸಿದಲ್ಲಿ ನ್ಯೂಜಿಲೆಂಡ್ ಎದುರಿನ ಉದ್ಘಾಟನಾ ಪಂದ್ಯದಲ್ಲಿ 9 ವಿಕೆಟ್ಗಳಿಂದ ಹೀನಾಯವಾಗಿ ಸೋಲುವ ಮೂಲಕ ಅಭಿಯಾನ ಆರಂಭಿಸಿತು. ಬಳಿಕ ಬಾಂಗ್ಲಾದೇಶ ವಿರುದ್ಧ 137 ರನ್ ಗೆದ್ದಿತು. ಅಫ್ಘನ್ ಎದುರು 69 ರನ್ಗಳಿಂದ ಸೋತು ಈ ವಿಶ್ವಕಪ್ನ ಮೊದಲ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಯಿತು. ಬಲಾಢ್ಯ ತಂಡ ದಕ್ಷಿಣ ಆಫ್ರಿಕಾ ಎದುರು 229 ರನ್ಗಳ ಸೋತರೆ, ಇಂದಿನ ಪಂದ್ಯದಲ್ಲಿ ಲಂಕಾ ಮುಂದೆ 8 ವಿಕೆಟ್ಗಳಿಂದ ಮುಖಭಂಗ ಅನುಭವಿಸಿತು. ಈ ಮೂಲಕ ಸತತ ಮೂರು ಪಂದ್ಯಗಳಲ್ಲಿ ಆಂಗ್ಲಪಡೆ ಮುಗ್ಗರಿಸಿದೆ. 1996ರ ನಂತರ ತಂಡ ಸತತ ಮೂರು ಪಂದ್ಯಗಳಲ್ಲಿ ಸೋತಿದ್ದು ಇದೇ ಮೊದಲು.
-
Lahiru Kumara returns to the Sri Lanka setup with a bang 👊
— ICC Cricket World Cup (@cricketworldcup) October 26, 2023 " class="align-text-top noRightClick twitterSection" data="
He wins the @aramco #POTM for his match-winning bowling performance.#CWC23 | #ENGvSL pic.twitter.com/t4X16ttITm
">Lahiru Kumara returns to the Sri Lanka setup with a bang 👊
— ICC Cricket World Cup (@cricketworldcup) October 26, 2023
He wins the @aramco #POTM for his match-winning bowling performance.#CWC23 | #ENGvSL pic.twitter.com/t4X16ttITmLahiru Kumara returns to the Sri Lanka setup with a bang 👊
— ICC Cricket World Cup (@cricketworldcup) October 26, 2023
He wins the @aramco #POTM for his match-winning bowling performance.#CWC23 | #ENGvSL pic.twitter.com/t4X16ttITm
ಆಂಗ್ಲರ ಮೇಲೆ ಲಂಕಾ ಪಾರಮ್ಯ: ವಿಶ್ವಕಪ್ನಲ್ಲಿ ಲಂಕಾ ಪಡೆ ಇಂಗ್ಲೆಂಡ್ ಎದುರು ಪಾರಮ್ಯ ಸಾಧಿಸಿತು. 2007 ರಿಂದ ಈವರೆಗಿನ 7 ಮುಖಾಮುಖಿಯಲ್ಲಿ ತಂಡ 6ನೇ ಬಾರಿಗೆ ಗೆಲುವು ಪಡೆಯಿತು. 156 ರನ್ಗೆ ಆಲೌಟ್ ಆದ ಆಂಗ್ಲರು ವಿಶ್ವಕಪ್ ಇತಿಹಾಸದಲ್ಲೇ ಮೂರನೇ ಅತಿ ಕನಿಷ್ಠ ರನ್ ಗಳಿಸಿದರು. ಈ ವಿಶ್ವಕಪ್ನಲ್ಲಿ ನಾಲ್ಕನೇ ಅತಿ ಕಡಿಮೆ ಮೊತ್ತ ಕೂಡ ಆಯಿತು.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಅಲ್ಪ ಮೊತ್ತಕ್ಕೆ ಕುಸಿದ ಇಂಗ್ಲೆಂಡ್; ಲಂಕಾ ಗೆಲುವಿಗೆ ಬೇಕು 157 ರನ್!