13ನೇ ಆವೃತ್ತಿಯ 2023ರ ಏಕದಿನ ಪುರಷರ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದ ಆಸ್ಟ್ರೇಲಿಯಾ ಆರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಈ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಮಧ್ಯೆ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಅವರು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಫೈನಲ್ ಪಂದ್ಯ ಗೆದ್ದ ಬಳಿಕ ಹೋಟೆಲ್ವೊಂದರಲ್ಲಿ ಸೇರಿದ್ದ ಆಸೀಸ್ ಆಟಗಾರರು ಜಾಲಿ ಮೂಡ್ಗೆ ಜಾರಿದ್ದರು. ಈ ಸಂದರ್ಭದಲ್ಲಿ ವಿಶ್ವಕಪ್ ಮೇಲೆ ಕಾಲಿಟ್ಟು ಮಿಚೆಲ್ ಮಾರ್ಷ್ ಕುಳಿತುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೇ, ಟ್ರೋಪಿಗೆ ಅಗೌರವ ತೋರಿರುವ ಮಾರ್ಷ್ ನಡೆಯನ್ನು ನೆಟ್ಟಿಗರು ಖಂಡಿಸಿದ್ದು, ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
-
Mitchell Marsh with the World Cup. pic.twitter.com/n2oViCDgna
— Mufaddal Vohra (@mufaddal_vohra) November 20, 2023 " class="align-text-top noRightClick twitterSection" data="
">Mitchell Marsh with the World Cup. pic.twitter.com/n2oViCDgna
— Mufaddal Vohra (@mufaddal_vohra) November 20, 2023Mitchell Marsh with the World Cup. pic.twitter.com/n2oViCDgna
— Mufaddal Vohra (@mufaddal_vohra) November 20, 2023
ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ಸೋಫಾದ ಮೇಲೆ ಕುಳಿತಿರುವ ಮಾರ್ಷ್ ತನ್ನ ಎರಡೂ ಕಾಲಗಳನ್ನು ಟ್ರೋಪಿ ಮೇಲೆ ಇಟ್ಟು ಗೆಲುವಿನ ಸಂಭ್ರಮಾಚರಣೆ ಮಾಡಿದ್ದಾರೆ. ಈ ಫೋಟೋವನ್ನು ಮೊದಲು ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇತ್ತ ಕಮಿನ್ಸ್ ಫೋಟೋ ಶೇರ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಒಂದು ಪೋಸ್ಟ್ ಬೆಂಕಿಯಂತೆ ಎಲ್ಲೆಡೆ ಆವರಿಸಿದ್ದು, ಮಾರ್ಷ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ : ಕೊಹ್ಲಿ, ರೋಹಿತ್ ಕಣ್ಣಂಚಲಿ ನೀರು: ಅಳುತ್ತಿದ್ದ ಸಿರಾಜ್‌ಗೆ ಸಹಆಟಗಾರರಿಂದ ಸಮಾಧಾನ
ಮತ್ತೊಂದೆಡೆ ನೋಡುವುದಾದರೇ, ಆಸ್ಟ್ರೇಲಿಯನ್ ಆಟಗಾರರಿಗೆ ಇಂತಹ ಸಂಭ್ರಮಾಚರಣೆ ಏನು ಹೊಸದಲ್ಲ. ಇದಕ್ಕೂ ಮುಂಚೆ ಕೂಡ 2021 ರಲ್ಲಿ ಕಾಂಗೂರು ಪಡೆ ಟಿ-20 ವಿಶ್ವಕಪ್ ಗೆದ್ದು, ಚಾಂಪಿಯನ್ ಪಟ್ಟ ಅಲಂಕರಿಸಿದಾಗ ಆಟಗಾರರು ಮೋಜು ಮಸ್ತಿ ಮಾಡಿದ್ದರು. ಆಗಲೂ ಮಾರ್ಕ್ ಸ್ಟೋಯ್ನಿಸ್ ಅವರೊಂದಿಗೆ ಇತರೆ ಆಟಗಾರು ಶೂ ಒಳಗೆ ಬೀಯರ್ ಸುರಿದುಕೊಂಡು ಕುಡಿದು ಕುಪ್ಪಳಿಸಿದ್ದರು. ಇದೀಗ ಆರನೇ ಬಾರಿಗೆ ವಿಶ್ವಕಪ್ ಗೆಲ್ಲುವ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ನಾವು ಪ್ರಾಬಲ್ಯ ಸಾಧಿಸಿದ್ದೇವೆ ಎಂಬ ಸಂದೇಶವನ್ನು ಈ ಫೋಟೋ ನೀಡುವಂತಿದೆ. ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಗಳು ಕೂಡ ಆರಂಭವಾಗಿವೆ.
ಟೂರ್ನಿಯ ಅರ್ಧದಲ್ಲೇ ವೈಯಕ್ತಿಕ ಕಾರಣಗಳಿಂದ ತವರಿಗೆ ತೆರಳಿದ್ದ ಮಾರ್ಷ್ ಒಂದು ಪಂದ್ಯದಿಂದ ವಂಚಿತರಾಗಿ ತಂಡಕ್ಕೆ ಮರಳಿದ್ದರು. ಹೀಗಾಗಿ ಆಡಿದ 10 ಪಂದ್ಯಗಳಲ್ಲಿ ಎರಡು ಶತಕ ಮತ್ತು ಅರ್ಧ ಶತಕ ಸೇರಿದಂತೆ 107.56 ರ ಸ್ಟ್ರೈಕ್ ರೇಟ್‌ನಲ್ಲಿ 49.00 ಸರಾಸರಿಯೊಂದಿಗೆ 441 ರನ್ ಗಳಿಸಿದ್ದಾರೆ. ನೆದರ್ಲೆಂಡ್ಸ್ ವಿರುದ್ಧವೂ ಎರಡು ವಿಕೆಟ್ ಪಡೆದು ಮಿಂಚಿದ್ದರು.
ಇದನ್ನೂ ಓದಿ : ತವರಿನಲ್ಲಿ ವಿಶ್ವಕಪ್ ಕೈಚೆಲ್ಲಿದ ಭಾರತ: 6ನೇ ಬಾರಿ ಆಸೀಸ್ಗೆ ಒಲಿದ ಚಾಂಪಿಯನ್ ಪಟ್ಟ