ಕೋಲ್ಕತ್ತಾ: ವಿಶ್ವಕಪ್ನ 28ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ನೆದರ್ಲ್ಯಾಂಡ್ಸ್ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈಡನ್ ಗಾರ್ಡನ್ನಲ್ಲಿ ಇಂದು ಉಭಯ ತಂಡಗಳು ಸೆಣಸಲಿವೆ. ಸದ್ಯ ವಿಶ್ವಕಪ್ ಕ್ರೀಡಾ ಕೂಟದಲ್ಲಿ ಉಭಯ ತಂಡಗಳು ತಲಾ 5 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಎರಡು ಪಂದ್ಯಗಳು ಒಂದರಲ್ಲಿ ಗೆಲುವು ದಾಖಲಿಸಿ, ನಾಲ್ಕರಲ್ಲಿ ಸೋಲು ಕಂಡಿವೆ. ಅಂಕ ಪಟ್ಟಿಯಲ್ಲಿ ಬಾಂಗ್ಲಾ 8ನೇ ಸ್ಥಾನದಲ್ಲಿದ್ದರೆ, ನೆದರ್ಲ್ಯಾಂಡ್ಸ್ 10ನೇ ಸ್ಥಾನದಲ್ಲಿದೆ.
ಪಿಚ್ ವರದಿ: ಈಡನ್ ಗಾರ್ಡನ್ನಲ್ಲಿ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಹೊಂದಿದ್ದು, ಬ್ಯಾಟಿಂಗ್ ಪಿಚ್ ಆಗಿದೆ. ಬೌಂಡರಿಗಳು ಹೆಚ್ಚು ನಿರೀಕ್ಷಿಸಬಹುದಾಗಿದೆ. ಮೈದಾನದ ಔಟ್ ಫೀಲ್ಡ್ ಅತ್ಯಂತ ವೇಗವಾಗಿರಲಿದೆ. ಸ್ಪಿನ್ನರ್ಗಳಿಗೆ ಈ ಪಿಚ್ ಸಹಾಯಕವಾಗಿರಲಿದೆ. ಈಡನ್ ಗಾರ್ಡನ್ನಲ್ಲಿ ವಿಶ್ವಕಪ್ನ ಮೊದಲ ಪಂದ್ಯ ಇದಾಗಿದೆ.
ಈಡನ್ ಅಂಕಿ - ಅಂಶ: ಈಡನ್ ಗಾರ್ಡನ್ನಲ್ಲಿ ಈ ವರೆಗೂ 31 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 18 ಪಂದ್ಯಗಳನ್ನು ಗೆದ್ದಿದ್ದರೆ, ಎರಡನೇ ಬ್ಯಾಟಿಂಗ್ ಮಾಡಿದ ತಂಡ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಒಂದು ಪಂದ್ಯ ರದ್ದುಗೊಂಡಿದೆ. ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 236 ರನ್ ಆಗಿದೆ. ಇನ್ನಿಂಗ್ಸ್ ಒಂದರ ಹೈಸ್ಕೋರ್ 404 ಆಗಿದ್ದು, ಲೋಸ್ಕೋರ್ 102 ಆಗಿದೆ. 2014ರಲ್ಲಿ ಈ ಮೈದಾನದಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 264 ರನ್‌ಗಳ ಇನಿಂಗ್ಸ್ ಆಡಿದ್ದರು.
ಹೆಡ್ ಟೂ ಹೆಡ್: ಉಭಯ ತಂಡಗಳು ಈ ವರೆಗೂ ಎರಡು ಏಕದಿನ ಪಂದ್ಯಗಳಾಡಿವೆ. ಇದರಲ್ಲಿ ಎರಡೂ ತಂಡಗಳು ತಲಾ 1 ಪಂದ್ಯದಲ್ಲಿ ಗೆಲುವು ಸಾಧಿಸಿವೆ. 2011 ವಿಶ್ವಕಪ್ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಬಾಂಗ್ಲಾ ಗೆದ್ದಿತ್ತು.
ಹವಾಮಾನ ವರದಿ: ಕೋಲ್ಕತ್ತಾದಲ್ಲಿ ಇಂದು ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಂಡಗಳು, ನೆದರ್ಲ್ಯಾಂಡ್ಸ್ : ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡ್, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ/ವಿ.ಕೀ), ಸೈಬ್ರಾಂಡ್ ಎಂಗಲ್‌ಬ್ರೆಕ್ಟ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.
ಬಾಂಗ್ಲಾದೇಶ: ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮೆಹಿದಿ ಹಸನ್ ಮಿರಾಜ್, ಮುಶ್ಫಿಕರ್ ರಹೀಮ್ (ವಿ.ಕೀ), ಮಹಮ್ಮದುಲ್ಲಾ, ನಸುಮ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ, ತಸ್ಕಿನ್ ಅಹ್ಮದ್
ಇದನ್ನೂ ಓದಿ: ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಮುಂದುವರಿದ ಮೆಡಲ್ಗಳ ಬೇಟೆ: 100ಕ್ಕೂ ಹೆಚ್ಚು ಪದಕಗಳನ್ನು ಗೆದ್ದು ಇತಿಹಾಸ ಬರೆದ ಭಾರತ