ಲಖನೌ( ಉತ್ತರಪ್ರದೇಶ): ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಗೆ ಸಿಲುಕಿ ಆಂಗ್ಲರ ಪಡೆ 129 ರನ್ಗಳಿಗೆ ಸರ್ವಪತನ ಕಂಡಿತು. ಬೌಲರ್ಗಳ ಸಾಂಘಿಕ ಪ್ರದರ್ಶನ ತೋರಿ ಎದುರಾಳಿ ಬಟ್ಲರ್ ಬಳಗವನ್ನು ಬಗ್ಗು ಬಡೆದರು. ಅದರಲ್ಲೂ ಸ್ಪೀನ್ನರ್ ಕುಲದೀಪ್ ಯಾದವ್ ಅದ್ಭುತ ಬೌಲಿಂಗ್ ಮೂಲಕ ಎರಡು ವಿಕೆಟ್ ಪಡೆದು ಪಂದ್ಯದಲ್ಲಿ ಮಿಂಚಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಇಡೀ ವರ್ಷದ ತಯಾರಿಯಾಗಿದೆ. ವಿಶ್ವಕಪ್ಗೂ ಮುನ್ನ ನಾವು ದ್ವಿಪಕ್ಷಿಯ ಸರಣಿಗಳನ್ನು ಆಡಿದ್ದು ಈ ಬಾರಿಯ ವಿಶ್ವಕಪ್ಗೆ ಹೆಚ್ಚಿನ ಅನೂಕೂಲವಾಗಿದೆ. ನೂರಕ್ಕೆ ನೂರು ಇದು ಇಡೀ ವರ್ಷದ ತಯಾರಿಯ ಪ್ರತಿಫಲವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ವೇಳೆ ಹೆಚ್ಚಿನ ಸ್ಕೋರ್ ಪಡೆದರೆ ಬೌಲರ್ಗಳಿಗೆ ಹೆಚ್ಚಿನ ಸಹಕಾರಿಯಾಗುತ್ತದೆ. ನಿನ್ನೆಯ ಪಂದ್ಯದಲ್ಲಿ ನಾವು ನೀಡಿದ ಗುರಿ ಉತ್ತಮವಾಗಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ವಿಕೆಟ್ಗಳನ್ನು ಉರುಳಿಸುವುದು ಕಷ್ಟಕರ ಎಂದು ನಾನು ಭಾವಿಸಿದ್ದೆ.
ಆದರೆ, ನನ್ನ ಎಸೆತದಲ್ಲಿ ಬೌಲ್ ಉತ್ತಮವಾಗಿ ಸ್ಪಿನ್ ಆಗತೊಡಗಿತು. ಸರಿಯಾದ ಲೆಂತ್ನಲ್ಲಿ ಬೌಲ್ ಮಾಡಿದರೆ ಸ್ಪಿನ್ ಆಗುತ್ತಿತ್ತು. ಆಗ ಪಿಚ್ನ ಲಾಭ ಪಡೆದೆ. ಲಿವಿಂಗ್ಸ್ಟನ್ ಮತ್ತು ಬಟ್ಲರ್ಗೆ ಒಂದೇ ಲೆಂತ್ನನಲ್ಲಿ ಬೌಲಿಂಗ್ ಮಾಡಿದ್ದೆ. ಇಂತಹ ಪಿಚ್ಗಳಲ್ಲಿ ಲೆಂತ್ ಅಂಡ್ ಲೈನ್ನಲ್ಲಿ ಬೌಲಿಂಗ್ ಮಾಡುವುದರಿಂದ ಬೌಲ್ ಸ್ವಿಂಗ್ ಮತ್ತು ಸ್ಪಿನ್ ಆಗುತ್ತವೆ ಎಂದು ಹೇಳಿದರು.
ಪ್ರತಿ ಬಾರಿ ಎಲ್ಲವೂ ನಮ್ಮ ಪರವಾಗಿ ನಡೆಯುವುದಿಲ್ಲ. ಕೆಲವೊಮ್ಮೆ ಕೆಟ್ಟ ಸಮಯವನ್ನು ಎದುರಿಸಬೇಕಾಗುತ್ತದೆ ಎಂದು ಇದೇ ವೇಳೆ ಅವರು ಹೇಳಿದರು. ಇಂತಹ ಒಳ್ಳೆಯ ಪ್ರದರ್ಶನಗಳು ಬೌಲರ್ಗಳಿಂದ ಕಾಣಬೇಕಾದರೆ ದೀರ್ಘಾವಧಿಯ ಮತ್ತು ಕಠಿಣ ಅಭ್ಯಾಸ ಮಾಡಬೇಕಾಗುತ್ತದೆ ಆಗ ಮಾತ್ರ ಇದು ಸಾಧ್ಯ. ಈ ವರ್ಷ ನಾನು ಹೆಚ್ಚಿನ ಏಕದಿನ ಪಂದ್ಯಗಳನ್ನು ಆಡಿದ್ದೇನೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳ ವಿರುದ್ಧ ಆಡಿದ್ದೇನೆ. ವಿಶ್ವಕಪ್ಗಾಗಿ ನಾನು ಮುಂಚಿನಿಂದಲೇ ತಯಾರಿ ನಡೆಸಿದ್ದೆ ಎಂದು ಯಾದವ್ ನೆನಪಿಸಿಕೊಂಡರು.
ಉಳಿದಂತೆ ವೇಗದ ಬೌಲರ್ಗಳು ಕೂಡ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಸದ್ಯ ಭಾರತ ಗುಣಮಟ್ಟದ ಬೌಲರ್‌ಗಳನ್ನು ಹೊಂದಿದೆ ಎಂದು ಹೇಳಿದರು.
ನಿನ್ನೆಯ ಪಂದ್ಯದಲ್ಲಿ ಕುಲದೀಪ್ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಮತ್ತು ಲಿವಿಂಗ್ಸ್ಟನ್ ಅವರ ವಿಕೆಟ್ ಪಡೆದಿದ್ದು. ಜೋಸ್ ಬಟ್ಲರ್ ಬೌಲ್ಡ್ ಆದರೆ ಲಿವಿಂಗ್ಸ್ಟನ್ ಎಲ್ಬಿ ಬಲೆಗೆ ಬಿದ್ದಿದ್ದರು. ಈ ಪಂದ್ಯದಲ್ಲಿ ಭಾರತ 100 ರನ್ಗಳ ಅಂತರದಿಂದ ಗೆಲವು ಸಾಧಿಸಿತು.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬ್ಯಾಟರ್ಗಳು 30 ರನ್ ಕಡಿಮೆ ಸ್ಕೋರ್ ಮಾಡಿದರು: ರೋಹಿತ್ ಶರ್ಮಾ