ETV Bharat / sports

ICC Cricket World Cup 2023: ಭಾರತ ಪಾಕಿಸ್ತಾನ ಪಂದ್ಯ ಪೂರ್ವ ಪ್ರದರ್ಶನ, ಮೋಡಿ ಮಾಡಲಿದ್ದಾರೆ ಅರ್ಜಿತ್​ ಸಿಂಗ್​

author img

By ETV Bharat Karnataka Team

Published : Oct 13, 2023, 7:59 AM IST

ICC Cricket World Cup 2023: 2023ರ ODI ವಿಶ್ವಕಪ್‌ನಲ್ಲಿ ಉದ್ಘಾಟನಾ ಸಮಾರಂಭವನ್ನು ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ ಸಿಗಲಿಲ್ಲ. ಆದರೆ ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದ್ದು, ಭಾರತ ಪಾಕಿಸ್ತಾನ ಕದನಕ್ಕೂ ಮುನ್ನ ಪಂದ್ಯ ಪೂರ್ವ ಪ್ರದರ್ಶನ ಕಾರ್ಯಕ್ರಮವನ್ನು ಬಿಸಿಸಿಐ ಆಯೋಜಿಸಿದೆ.

India Pakistan pre match show  ICC Cricket World Cup 2023  Arjit Singh to feature  Cricket World Cup  2023ರ ODI ವಿಶ್ವಕಪ್‌ನಲ್ಲಿ ಉದ್ಘಾಟನಾ ಸಮಾರಂಭ  ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ  ಭಾರತ ಪಾಕಿಸ್ತಾನ ಕದನಕ್ಕೂ ಮುನ್ನ ಪಂದ್ಯ ಪೂರ್ವ ಪ್ರದರ್ಶನ  ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಸ್ಪರ್ಧೆ  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ  ಉಭಯ ತಂಡಗಳ ನಡುವಿನ ಕದನ  ಭಾರತ ಪಾಕಿಸ್ತಾನ ಪಂದ್ಯ ಪೂರ್ವ ಪ್ರದರ್ಶನ  ಮೋಡಿ ಮಾಡಲಿದ್ದಾರೆ ಅರ್ಜಿತ್​ ಸಿಂಗ್
ಭಾರತ ಪಾಕಿಸ್ತಾನ ಪಂದ್ಯ ಪೂರ್ವ ಪ್ರದರ್ಶನ, ಮೋಡಿ ಮಾಡಲಿದ್ದಾರೆ ಅರ್ಜಿತ್​ ಸಿಂಗ್​

ಅಹಮದಾಬಾದ್, ಗುಜರಾತ್​​: 2023 ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ (ICC Cricket World Cup 2023) ಶನಿವಾರ ಇಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಸ್ಪರ್ಧೆಗೂ ಮುನ್ನ ಬಿಸಿಸಿಐ ಪಂದ್ಯ ಪೂರ್ವ ಪ್ರದರ್ಶನ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಸಂಗೀತಗಾರ, ಗಾಯಕ, ಸಂಯೋಜಕ, ಸಂಗೀತ ನಿರ್ಮಾಪಕ, ಧ್ವನಿಮುದ್ರಣಕಾರ ಅರ್ಜಿತ್ ಸಿಂಗ್ ಭಾಗವಹಿಸಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಪ್ರಕಟಿಸಿದೆ. ಉಭಯ ತಂಡಗಳ ನಡುವಿನ ಕದನ ಹೆಚ್ಚು ನಿರೀಕ್ಷಿತವಾಗಿದ್ದು, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕ್ರಿಕೆಟ್​ ಅಭಿಮಾನಿಗಳು ಕಿಕ್ಕರಿದು ತುಂಬುವ ಭರವಸೆ ಇದೆ.

ಭಾರತೀಯ ತಂಡದ ಮಾಜಿ ದಂತಕಥೆ ಸಚಿನ್ ತೆಂಡೂಲ್ಕರ್, ರಜನಿಕಾಂತ್ ಮತ್ತು ಅಮಿತಾಬ್ ಬಚ್ಚನ್ ನಾಳೆ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲು ಅಹಮದಾಬಾದ್‌ನಲ್ಲಿ ಹಾಜರಾಗಲಿದ್ದಾರೆ. ಇದಲ್ಲದೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ತಂದೆ ಹಾಗೂ ಗೃಹ ಸಚಿವ ಅಮಿತ್ ಶಾ ಕೂಡ ಕ್ರೀಡಾಂಗಣದಲ್ಲಿ ಉಪಸ್ಥಿತರಿರಲಿದ್ದಾರೆ. 12.30ಕ್ಕೆ ವರ್ಣರಂಜಿತ ಕಾರ್ಯಕ್ರಮ ಪ್ರಾರಂಭವಾಗಲಿದೆ. ಈ ಕ್ರಾರ್ಯಕ್ರಮದಲ್ಲಿ ಬಾಲಿವುಡ್‌ನ ಖ್ಯಾತ ಗಾಯಕ ಅರಿಜಿತ್ ಸಿಂಗ್ ಅವರು ತಮ್ಮ ಧ್ವನಿ ಮತ್ತು ಹಾಡುವ ಮೂಲಕ ಸಂಚಲನವನ್ನು ಸೃಷ್ಟಿಸಲಿದ್ದಾರೆ. ಇದಕ್ಕಾಗಿ ಬಿಸಿಸಿಐ ವಿಶೇಷ ವ್ಯವಸ್ಥೆ ಮಾಡುತ್ತಿದೆ.

ಬಿಸಿಸಿಐನ ಅಧಿಕೃತ ಹೇಳಿಕೆಯ ಪ್ರಕಾರ, ಪಂದ್ಯ ಪೂರ್ವ ಪ್ರದರ್ಶನ ಕಾರ್ಯಕ್ರಮವು ಮಧ್ಯಾಹ್ನ 12:30ಕ್ಕೆ ಪ್ರಾರಂಭವಾಗುತ್ತದೆ. ಇದರಲ್ಲಿ ಬಾಲಿವುಡ್ ಸಂಗೀತ ಉದ್ಯಮದಲ್ಲಿ ಜನಪ್ರಿಯ ಹೆಸರು ಹೊಂದಿರುವ ಅರ್ಜಿತ್ ಸಿಂಗ್ ಅವರ ಪ್ರದರ್ಶನವಿದೆ ಎಂದು ಹೇಳಿದೆ. ಈ ಹಿಂದೆ ಟ್ವಿಟರ್ ಅಂತಾ ಕರೆಯಲಾಗುತ್ತಿದ್ದ ಎಕ್ಸ್‌ ವೇದಿಕೆಯಲ್ಲಿ BCCI ಟ್ವೀಟ್​ ಮಾಡಿ, ವಿಶೇಷ ಪ್ರದರ್ಶನದೊಂದಿಗೆ ಬಹು ನಿರೀಕ್ಷಿತ ಭಾರತ ಮತ್ತು ಪಾಕ್​ ನಡುವಿನ ಪಂದ್ಯವನ್ನು ವೀಕ್ಷಿಸಿ. ಮೋಡಿಮಾಡುವ ಅರಿಜಿತ್ ಸಿಂಗ್‌ ಸಂಗೀತವಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎಲ್ಲರೂ ಒಗ್ಗೂಡಿ. ಅಕ್ಟೋಬರ್ 14 ರಂದು ಮಧ್ಯಾಹ್ನ 12:30 ಕ್ಕೆ ಪ್ರಾರಂಭವಾಗುವ ಪಂದ್ಯ ಪೂರ್ವ ಪ್ರದರ್ಶನದಲ್ಲಿ ಭಾಗಿಯಾಗಿ ಎಂದು ಬರೆದುಕೊಂಡಿದೆ.

ವಿಶ್ವಕಪ್‌ನ ಇತಿಹಾಸದಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ ಯಾವಾಗಲೂ ಹೈವೋಲ್ಟೇಜ್​ ಪಂದ್ಯವಾಗಿದೆ. ODI ವಿಶ್ವಕಪ್‌ಗಳಲ್ಲಿ ಭಾರತವು ಪ್ರತಿ ಸಂದರ್ಭದಲ್ಲೂ ಗೆಲ್ಲುವ ಮೂಲಕ ತಮ್ಮ ಸಾಂಪ್ರದಾಯಿಕ ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸಿದೆ. ಭಾರತದ ನಾಯಕ ರೋಹಿತ್​ ಶರ್ಮಾ ತನ್ನ ತಂಡದ ಅಜೇಯ ದಾಖಲೆಯನ್ನು ಉಳಿಸಿಕೊಳ್ಳಲು ಇಷ್ಟಪಡುತ್ತಿದ್ದಾರೆ. ಆದರೆ, ಪಾಕಿಸ್ತಾನವು ಈ ಬಾರಿ ಭಾರತದ ವಿರುದ್ಧ ಗೆದ್ದೇ ಗೆಲ್ಲಬೇಕು ಎಂಬ ಗುರಿಯನ್ನು ಹೊಂದಿದೆ. ಗಮನಾರ್ಹವಾಗಿ ವಿಶ್ವಕಪ್‌ನ ಆರಂಭದ ಮೊದಲು ಯಾವುದೇ ಉದ್ಘಾಟನಾ ಸಮಾರಂಭ ನಡೆಯಲಿಲ್ಲ. ಆದರೆ ಭಾರತ-ಪಾಕಿಸ್ತಾನ ಪಂದ್ಯವು ಅಭಿಮಾನಿಗಳಿಗೆ ವಿಶೇಷ ಪಂದ್ಯ ಪೂರ್ವ ಪ್ರದರ್ಶನ ಆಯೋಜಿಸಲಾಗಿದೆ.

ಓದಿ: ಭಾರತ ಪಾಕ್​ ಹೈವೋಲ್ಟೇಜ್​ ಪಂದ್ಯ.. ವಿಶ್ವಕಪ್​ ಉದ್ಘಾಟನಾ ಸಂಭ್ರಮ, ಮುಂಬೈಯಿಂದ ವಿಶೇಷ ರೈಲಿನ ವ್ಯವಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.