ಪುಣೆ, ಮಹಾರಾಷ್ಟ್ರ: 2023ರ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡದ ಪ್ರದರ್ಶನ ವಿಭಿನ್ನವಾಗಿದೆ. ಈ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಇದುವರೆಗೆ ಮೂರು ಪಂದ್ಯಗಳನ್ನು ಗೆದ್ದಿದ್ದು, ಸೆಮಿಫೈನಲ್ ರೇಸ್‌ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.
-
Irfan Pathan and Harbhajan Singh celebrating Afghanistan's win. pic.twitter.com/XyAeqNNFeV
— Mufaddal Vohra (@mufaddal_vohra) October 30, 2023 " class="align-text-top noRightClick twitterSection" data="
">Irfan Pathan and Harbhajan Singh celebrating Afghanistan's win. pic.twitter.com/XyAeqNNFeV
— Mufaddal Vohra (@mufaddal_vohra) October 30, 2023Irfan Pathan and Harbhajan Singh celebrating Afghanistan's win. pic.twitter.com/XyAeqNNFeV
— Mufaddal Vohra (@mufaddal_vohra) October 30, 2023
ಸೋಮವಾರ ರಾತ್ರಿ ಶ್ರೀಲಂಕಾವನ್ನು ಅಫ್ಘಾನಿಸ್ತಾನ 7 ವಿಕೆಟ್‌ಗಳಿಂದ ಸೋಲಿಸಿತು. ಇದಕ್ಕೂ ಮುನ್ನ ಅಫ್ಘಾನಿಸ್ತಾನ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಪಾಕಿಸ್ತಾನವನ್ನು ಸೋಲಿಸಿರುವುದು ಗೊತ್ತಿರುವ ಸಂಗತಿ. ಅಫ್ಘಾನಿಸ್ತಾನ ಕೆಲ ತಂಡಗಳಂತೆ ಕಳಪೆ ಪ್ರದರ್ಶನ ನೀಡುತ್ತಿಲ್ಲ. ಈ ಗೆಲುವಿನಿಂದ ಅಫ್ಘಾನ್ ಕ್ರಿಕೆಟ್ ತಂಡದ ಬದಲಾವಣೆಯ ಸಂಕೇತವಾಗಿದೆ.
ಅಫ್ಘಾನಿಸ್ತಾನದ ಗೆಲುವಿನ ನಂತರ ಭಾರತದ ಮಾಜಿ ಬೌಲರ್‌ಗಳಾದ ಇರ್ಫಾನ್ ಪಠಾಣ್ ಮತ್ತು ಹರ್ಭಜನ್ ಸಿಂಗ್ ತಮ್ಮ ಸಂತಸ ಮತ್ತು ಸಂಭ್ರಮವನ್ನು ಹಂಚಿಕೊಂಡರು. ಅಫ್ಘಾನಿಸ್ತಾನದ ವಿಜಯದ ನಂತರ ಇರ್ಫಾನ್ ಪಠಾಣ್ ತನ್ನನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿ ಕಾಮೆಂಟರಿ ಬಾಕ್ಸ್‌ನಲ್ಲಿ ಡ್ಯಾನ್ಸ್ ಮಾಡಲು ಪ್ರಾರಂಭಿಸಿದರು. ಇದಾದ ಬಳಿಕ ಹರ್ಭಜನ್ ಅವರನ್ನು ಡ್ಯಾನ್ಸ್ ಮಾಡಲು ಕರೆದರು. ಹರ್ಭಜನ್ ಸಹ ಇರ್ಫಾನ್ ಜೊತೆಗೂಡಿ ಒಂದೆರಡು ಸ್ಟೆಪ್ ಹಾಕಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸಹ ಇದನ್ನು ತುಂಬಾ ಇಷ್ಟಪಡುತ್ತಿದ್ದಾರೆ.
-
Irfan Pathan & Harbhajan Singh celebrating the Afghanistan victory in Star Sports office. pic.twitter.com/vJuu3qk9Az
— Johns. (@CricCrazyJohns) October 30, 2023 " class="align-text-top noRightClick twitterSection" data="
">Irfan Pathan & Harbhajan Singh celebrating the Afghanistan victory in Star Sports office. pic.twitter.com/vJuu3qk9Az
— Johns. (@CricCrazyJohns) October 30, 2023Irfan Pathan & Harbhajan Singh celebrating the Afghanistan victory in Star Sports office. pic.twitter.com/vJuu3qk9Az
— Johns. (@CricCrazyJohns) October 30, 2023
ಇದಕ್ಕೂ ಮುನ್ನ ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ 8 ವಿಕೆಟ್‌ಗಳ ಜಯ ಸಾಧಿಸಿದ ಬಳಿಕ ರಶೀದ್ ಖಾನ್ ಅವರೊಂದಿಗೆ ಇರ್ಫಾನ್ ಪಠಾಣ್ ಮೈದಾನದಲ್ಲಿಯೇ ಡ್ಯಾನ್ಸ್ ಮಾಡಿದ್ದರು. ಆ ವಿಡಿಯೋ ಕೂಡ ಅಭಿಮಾನಿಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಅಫ್ಘಾನಿಸ್ತಾನವು ಶ್ರೀಲಂಕಾವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ಗೆ ಬಂದ ಶ್ರೀಲಂಕಾ ತಂಡ ಸಂಕಷ್ಟಕ್ಕೆ ಸಿಲುಕಿ 49.3 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 241 ರನ್ ಗಳಿಸಲಷ್ಟೇ ಶಕ್ತವಾಯಿತು. ಶ್ರೀಲಂಕಾ ನೀಡಿದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನತ್ತಿದ್ದ ಅಫ್ಘಾನಿಸ್ತಾನ 28 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವಿನ ದಡ ಸೇರಿತು.
ಅಫ್ಘಾನಿಸ್ತಾನದ ಬೌಲರ್ ಫಜಲ್ಹಕ್ ಫಾರೂಕಿ 10 ಓವರ್‌ಗಳಲ್ಲಿ 34 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದ್ದರು. ಇನ್ನು ಬ್ಯಾಟಿಂಗ್ನಲ್ಲಿ ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಅರ್ಧ ಶತಕ ಬಾರಿಸಿ ತಂಡದ ಗೆಲುವಿಗೆ ಮುಖ್ಯ ಪಾತ್ರ ವಹಿಸಿದ್ದರು. ಅಫ್ಘಾನಿಸ್ತಾನದ ಮುಂದಿನ ಪಂದ್ಯ ನೆದರ್ಲ್ಯಾಂಡ್ಸ್ ವಿರುದ್ಧ ನವೆಂಬರ್ 3ರ ಮಧ್ಯಾಹ್ನ ನಡೆಯಲಿದೆ.
ಓದಿ: ವಿರಾಟ್ ಕೊಹ್ಲಿ ಜನ್ಮದಿನದಂದು ಈಡನ್ಗಾರ್ಡನ್ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಪಂದ್ಯ; ವಿಶೇಷ ಸಿದ್ಧತೆ