ಪುಣೆ (ಮಹಾರಾಷ್ಟ್ರ): ಭಾರತ ಮತ್ತು ಬಾಂಗ್ಲಾದೇಶ ನಡುವಿನ ಹಣಾಹಣಿಗೂ ಮುನ್ನವೇ ಕ್ರಿಕೆಟ್ ಜ್ವರ ಅಭಿಮಾನಿಗಳಿಗೆ ಆವರಿಸಿದೆ. ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರು ಅಭಿಮಾನಿಗಳ ಹೃದಯದಲ್ಲಿ ದೊಡ್ಡ ಸ್ಥಾನ ಗಳಿಸಿದ್ದಾರೆ. ಉತ್ಸುಕರಾಗಿರುವ ಭಾರತೀಯ ಅಭಿಮಾನಿಗಳು ಆತಿಥೇಯ ತಂಡದ ಭವಿಷ್ಯದ ಬಗ್ಗೆ ತುಂಬಾ ಆಸಕ್ತರಾಗಿದ್ದಾರೆ. ಇಂದು (ಗುರುವಾರ) ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಐಸಿಸಿ ವಿಶ್ವಕಪ್ 2023ರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲವು ಸಾಧಿಸಲಿದೆ ಎಂದು ಅಭಿಮಾನಿಗಳು ಆಶಾಭಾವ ಹೊಂದಿದ್ದಾರೆ.
ಪಂದ್ಯ ಸಮಯದಲ್ಲಿ ಭಾರತೀಯ ತಂಡವನ್ನು ಬೆಂಬಲಿಸುವ ಹಲವಾರು, ಟ್ರೇಡ್‌ಮಾರ್ಕ್ ಭಾರತೀಯ ಕ್ರಿಕೆಟ್ ತಂಡದ ಬ್ಲ್ಯೂ ಜೆರ್ಸಿಯಲ್ಲಿ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು "ಇಂಡಿಯಾ... ಇಂಡಿಯಾ..." ಎಂದು ಜೋರಾದ ಧ್ವನಿಯಲ್ಲಿ ಕೂಗುವುದು ಕಂಡು ಬರುತ್ತಿದೆ.
ಗಮನಸೆಳೆದ ಅಭಿಮಾನಿಗಳ ಪೋಸ್ಟರ್: "ರೋಹಿತ್ ಶರ್ಮಾ ವಿಶ್ವಕಪ್ ಎತ್ತಿ ಹಿಡಿದುಕೊಳ್ಳುವವರೆಗೂ ನಾನು ಡೇಟಿಂಗ್ ಮಾಡುವುದಿಲ್ಲ. ರೋಹಿತ್ ಅವರು ಶತಕದ ಮೂಲಕ ಹಾಗೂ ಜಸ್ಪ್ರೀತ್ ಬುಮ್ರಾ ಅವರು ಚೆಂಡಿನೊಂದಿಗೆ ಮಿಂಚಲಿದ್ದಾರೆ ಎಂದು ಅಭಿಮಾನಿಯೊಬ್ಬರು ನಿರೀಕ್ಷೆ ಇಟ್ಟುಕೊಂಡಿದ್ದಾರೆ''. ಈ ಕುರಿತ ಪೋಸ್ಟರ್‌ನೊಂದಿಗೆ ಅಭಿಮಾನಿಯೊಬ್ಬರು ಕಾಣಿಸಿಕೊಂಡಿದ್ದಾರೆ.
"ಕ್ರಿಕೆಟ್ ನನ್ನ ಧರ್ಮ. ರೋಹಿತ್ ಶರ್ಮಾ ನನ್ನ ದೇವರು'' ಎಂದು ಇನ್ನೊಬ್ಬ ಅಭಿಮಾನಿ ರೋಹಿತ್ ಪರವಾಗಿ ಕೂಗಿದರು. ಇಂದು ಪುಣೆಯ ಮಹಾರಾಷ್ಟ್ರ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನೇತೃತ್ವದ ರೆಡ್-ಹಾಟ್ ಟೀಮ್ ಇಂಡಿಯಾ, ಬಾಂಗ್ಲಾದೇಶವನ್ನು ಎದುರಿಸಲಿದೆ. ತವರಿನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ 2023ರ ಕ್ರಿಕೆಟ್ನಲ್ಲಿ ತನ್ನ ಗೆಲುವಿನ ಸರಣಿ ಮುಂದುವರಿಸುವ ಗುರಿಯನ್ನು ಹೊಂದಿದೆ.
2ಕ್ಕೆ ಗಂಟೆಗೆ ಪುಣೆಯಲ್ಲಿ ಆರಂಭವಾಗಿರುವ ವಿಶ್ವಕಪ್ 2023 ರ 17 ನೇ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಎಂಸಿಎ ಸ್ಟೇಡಿಯಂನ ಹೊರಗೆ ನೆರೆದಿದ್ದ ಅಭಿಮಾನಿಗಳು "100 ಪ್ರತಿಶತ" ಭಾರತವು ಬಾಂಗ್ಲಾದೇಶವನ್ನು ಸೋಲಿಸುತ್ತದೆ ಎಂದು ಪೋಸ್ಟರ್ಗಳನ್ನು ಪ್ರದರ್ಶಿಸಿ ಹರ್ಷ ವ್ಯಕ್ತಪಡಿಸಿದರು.
"ನಾವು ಟೀಮ್ ಇಂಡಿಯಾವನ್ನು ಹುರಿದುಂಬಿಸುತ್ತಿದ್ದೇವೆ. ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ಭಾರತ ಗೆಲ್ಲುತ್ತದೆ ಎಂದು ನನಗೆ 100 ಪ್ರತಿಶತ ಖಚಿತವಾಗಿದೆ" ಎಂದು ಉತ್ಸಾಹಭರಿತ ಅಭಿಮಾನಿಯೊಬ್ಬರು ಹೇಳಿದ್ದಾರೆ. ಆಕಾಶ್ ಎಂಬ ಅಭಿಮಾನಿ, "ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸುತ್ತಾರೆ. ರೋಹಿತ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಅವರು ಶತಕವನ್ನು ಕಳೆದುಕೊಂಡರು. ಆದರೆ, ಈ ಬಾರಿ ಅವರು ಖಂಡಿತವಾಗಿಯೂ 150 ಪ್ಲಸ್ ರನ್ ಗಳಿಸುತ್ತಾರೆ. ಬುಮ್ರಾ ಹ್ಯಾಟ್ರಿಕ್ ವಿಕೆಟ್ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ತವರಿನಲ್ಲಿ ಆಡುತ್ತಿರುವುದರಿಂದ ಭಾರತ ವಿಶ್ವಕಪ್ ಎತ್ತಿ ಹಿಡಿಯುವುದು ಖಚಿತ. ಅವರ ತವರಿನಲ್ಲಿ ಭಾರತವನ್ನು ಸೋಲಿಸುವುದು ಕಷ್ಟ ಎಂದು ನಾನು ಭಾವಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ
ಈ ಪಂದ್ಯವು ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಅವರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತವು ಹಿಂದಿನ ಮೂರು ವಿಜಯಗಳನ್ನು ಗಳಿಸಿದೆ. ಈ ಆತ್ಮವಿಶ್ವಾಸದ ಮೇಲೆ ಸವಾರಿ ಮಾಡುತ್ತಿರುವ ಭಾರತ ತಂಡವು ತಮ್ಮ ಗೆಲುವಿನ ಸರಣಿಯನ್ನು ಮುಂದುವರಿಸಲಿದೆ. ಮೆನ್ ಇನ್ ಬ್ಲೂ ಒಡಿಐ ಪಂದ್ಯಗಳಲ್ಲಿ ಪ್ರಾಬಲ್ಯ ಸಾಧಿಸಿದೆ. ಬಾಂಗ್ಲಾದೇಶ ಜೊತೆಗಿನ ಒಟ್ಟು 40 ಪಂದ್ಯಗಳಲ್ಲಿ 31 ಗೆಲುವು ಸಾಧಿಸಿದೆ. ಮತ್ತೊಂದೆಡೆ, ಬಾಂಗ್ಲಾದೇಶ 8 ಪಂದ್ಯಗಳನ್ನು ಗೆದ್ದಿದೆ.
ಇದನ್ನೂ ಓದಿ: ಭಾರತ - ಬಾಂಗ್ಲಾ ಮುಖಾಮುಖಿ: ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ಕೆ